

ಇಂದು ಐಪಿಎಲ್ನಲ್ಲಿ 29 ನೇ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಚೆನ್ನೈನ ತವರು ನೆಲ ಚೆಪಾಕ್‌ನಲ್ಲಿ ನಡೆಯಲಿದ್ದು, ಎಂಎಸ್ ಧೋನಿ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸುವುದು ಕಷ್ಟದ ಕೆಲಸವಾಗಿದೆ. ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಏಡೆನ್ ಮಾರ್ಕ್ರಾಮ್ ನಾಯಕತ್ವದ ಹೈದರಾಬಾದ್, ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಈ ಪಂದ್ಯವನ್ನು ಶತಾಯಗತಾಯವಾಗಿ ಗೆಲ್ಲಲು ಹೈದರಾಬಾದ್ ಹೋರಾಟ ನೀಡಲಿದೆ.
Views: 0