IPL 2023 Final: ಮೋದಿ ಮೈದಾನದಲ್ಲಿ ಫೈನಲ್! ಪ್ಲೇ ಆಫ್ ಪಂದ್ಯಕ್ಕೆ ಚೆನ್ನೈ ಆತಿಥ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

IPL 2023 Final: ಮೋದಿ ಮೈದಾನದಲ್ಲಿ ಫೈನಲ್! ಪ್ಲೇ ಆಫ್ ಪಂದ್ಯಕ್ಕೆ ಚೆನ್ನೈ ಆತಿಥ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
IPL 2023 Playoffs to be played in Chennai Narendra Modi Stadium to host final

ನಿಧಾನವಾಗಿ 16 ನೇ ಆವೃತ್ತಿಯ ಐಪಿಎಲ್ (IPL 2023) ವೇಗವನ್ನು ಪಡೆಯುತ್ತಿದೆ. ಇದುವರೆಗೆ ಐಪಿಎಲ್​ನಲ್ಲಿ 28 ಪಂದ್ಯಗಳು ನಡೆದಿದ್ದು, 29 ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (Chennai Super Kings vs Sunrisers Hyderabad) ನಡುವೆ ನಡೆಯುತ್ತಿದೆ. ಆದರೆ ಈ ಪಂದ್ಯದ ನಡುವೆ ಬಿಸಿಸಿಐ ಪ್ಲೇ ಆಫ್ (Playoffs) ಹಾಗೂ ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಾಸ್ತವವಾಗಿ ಈ ಬಾರಿಯ ಐಪಿಎಲ್ ಫೈನಲ್ ಮೇ 28ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ( Narendra Modi Stadium in Ahmedabad) ನಡೆಯಲಿದೆ ಎಂಬುದು ಮೊದಲೇ ತಿಳಿದಿತ್ತು. ಆದರೆ ಅದು ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ಬಿಸಿಸಿಐ ಈ ಊಹಾಪೋಹಕ್ಕೆ ತೆರೆ ಎಳೆದಿದ್ದು, ನಿರೀಕ್ಷೆಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಿದೆ.

ಪ್ಲೇ ಆಫ್ ಪಂದ್ಯಕ್ಕೆ ಚೆನ್ನೈ ಆತಿಥ್ಯ

ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗೆಯೇ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರೊಂದಿಗೆ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ವಹಿಸುವ ಜವಾಬ್ದಾರಿ ಅಹಮದಾಬಾದ್​ಗೆ ಲಭಿಸಿದೆ. 2022 ರ ಐಪಿಎಲ್ ಮುಂಬೈ ಮತ್ತು ಪುಣೆಯ 4 ಸ್ಥಳಗಳಲ್ಲಿ ನಡೆದಿತ್ತು. ಕಳೆದ ಸೀಸನ್​ನಲ್ಲಿ ಕೋಲ್ಕತ್ತಾ ಎರಡು ಪ್ಲೇಆಫ್ ಪಂದ್ಯಗಳ ಆಯೋಜನೆಯ ಆತಿಥ್ಯವನ್ನು ವಹಿಸಿಕೊಂಡಿತ್ತು. ಈ ಬಾರಿ ಕೋಲ್ಕತ್ತಾಗೆ ಒಂದೇ ಒಂದು ಪ್ಲೇಆಫ್ ಪಂದ್ಯ ಆಯೋಜಿಸುವ ಅವಕಾಶ ಸಿಕ್ಕಿಲ್ಲ.

ಪ್ರಸಕ್ತ ಐಪಿಎಲ್ ಗ್ರೂಪ್ ಹಂತದಲ್ಲಿ 10 ಫ್ರಾಂಚೈಸಿಗಳು ಒಟ್ಟು 70 ಪಂದ್ಯಗಳನ್ನು ಆಡುತ್ತಿವೆ. ಮೇ 21 ರಂದು ಗುಂಪು ಹಂತದ ಕೊನೆಯ ಪಂದ್ಯ ನಡೆಯಲಿದೆ. ಒಂದು ದಿನದ ಬಳಿಕ ಅಂದರೆ,ಮೇ 23 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ನಂತರ ಮೇ 28 ಭಾರತದ ಮಿಲಿಯನೇರ್ ಲೀಗ್‌ನ ಫೈನಲ್ ನಡೆಯಲಿದೆ.

ಐಪಿಎಲ್ 2023ರ ಪ್ಲೇಆಫ್‌ ಮತ್ತು ಫೈನಲ್‌ ಪಂದ್ಯದ ವೇಳಾಪಟ್ಟಿ

1) ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ

2) ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ

3) ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್

4) ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-playoffs-to-be-played-in-chennai-narendra-modi-stadium-to-host-final-psr-au14-561030.html

Views: 0

Leave a Reply

Your email address will not be published. Required fields are marked *