Virat Kohli: ಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಸುತ್ತಾಟ: ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆದೋಸೆ ಸವಿದ ವಿರುಷ್ಕಾ

Virat Kohli: ಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಸುತ್ತಾಟ: ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆದೋಸೆ ಸವಿದ ವಿರುಷ್ಕಾ
Virat Kohli and Anushka Sharma

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯುಸಿ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿ ಕೂಡ ಇದ್ದಾರೆ. ಇಂದು ಐಪಿಎಲ್​ನಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ (RCB vs RR) ಅನ್ನು ಎದುರಿಸಲಿದೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ವಿರಾಟ್, ಡುಪ್ಲೆಸಿಸ್, ಮ್ಯಾಕ್ಸ್​ವೆಲ್ ಸೇರಿದಂತೆ ಎಲ್ಲ ಆಟಗಾರರು ಬೆಂಗಳೂರಿಗೆ ಬಂದಿದ್ದು ಅಭ್ಯಾಸ ನಡೆಸುತ್ತಿದ್ದಾರೆ. ಪ್ರ್ಯಾಕ್ಟೀಸ್ ಸೆಷನ್ ನಡುವೆ ಬಿಡುವು ಮಾಡಿಕೊಂಡು ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ (Anushka Sharma) ಜೊತೆ ಬೆಂಗಳೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸ್ನೇಹಿತರೊಂದಿಗೆ ಬೆಂಗಳೂರಿನ ಹಲವೆಡೆ ಸುತ್ತಾಡಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಹೋಟೆಲ್​ಗಳಲ್ಲಿ ವಿವಿಧ ಬಗೆಯ ಪುಡ್​ಗಳನ್ನು ಸವಿದಿದ್ದಾರೆ. ಇದನ್ನು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಮಲ್ಲೇಶ್ವರಂನ 7ನೇ ಕ್ರಾಸ್​​​ನಲ್ಲಿರುವ ಸೆಂಟ್ರಲ್​ ಟಿಫನ್​ ಸೆಂಟರ್ ಮತ್ತು ಕಾರ್ನರ್​ ಹೌಸ್​ಗೆ ಭೇಟಿ ನೀಡಿ ಮಸಾಲೆದೋಸೆ, ಐಸ್​ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್​ ರುಚಿ ಸವಿದಿದ್ದಾರೆ.

IPL 2023: ರನೌಟ್ ಆಗುವುದು ಧೋನಿಗೆ ಮೊದಲೇ ತಿಳಿದಿತ್ತಾ? ಸಾಕ್ಷಿ ನುಡಿಯುತ್ತಿದೆ ಈ ವೈರಲ್ ವಿಡಿಯೋ

 

ವಿರುಷ್ಕಾ ಮಸಾಲೆ ದೋಸೆ ಸವಿದ ಬಳಿಕ ಹೊಟೇಲ್​ನ ಸಿಬ್ಬಂದಿಗಳ ಜತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಜತೆಗಿರುವ ಫೋಟೋವನ್ನು ಹಲವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಟಾರ್‌ ದಂಪತಿ ಸಿಟಿಆರ್‌ ಭೇಟಿ ನೀಡಿದ ವಿಚಾರ ತಿಳಿದು ನೂರಾರು ಅಭಿಮಾನಿಗಳು ಹೋಟೆಲ್‌ ಮುಂಭಾಗದಲ್ಲಿ ಜಮಾಯಿಸಿದ್ದರು. ಹೋಟೆಲ್‌ನಿಂದ ಹೊರಬರುತ್ತಲೇ ʼಆರ್‌ಸಿಬಿʼ ಪರ ಘೋಷಣೆ ಕೂಗಲು ಆರಂಭಿಸಿದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ನೂಕು ನುಗ್ಗಲು ಹೆಚ್ಚಾಗುತ್ತಲೇ ಸೆಲ್ಫೀ ನೀಡಲು ನಿರಾಕರಿಸಿರುವ ವಿರಾಟ್‌ ಕಾರ್‌ ಏರಿ ಸ್ಥಳದಿಂದ ತೆರಳಿದ್ದಾರೆ.

 

ವಿಶೇಷ ಎಂದರೆ ಮಸಾಲೆ ದೋಸೆ ಸವಿದ ಬಳಿಕ ಹೋಟೆಲ್​​​​​ ಪುಸ್ತಕದಲ್ಲಿ ವಿರಾಟ್​​ ಕೊಹ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅತ್ಯಂತ ಶಾಂತಿಯುತವಾಗಿ ಕುಳಿತು ಉಪಹಾರ ಸವಿದ ಸಮಯ ಅದ್ಭುತವಾಗಿತ್ತು. ನಿಮ್ಮ ಅದ್ಭುತವಾದ ಆತಿಥ್ಯ ಮತ್ತು ರುಚಿಕರವಾದ ಉಪಹಾರಕ್ಕಾಗಿ ಧನ್ಯವಾದಗಳು. ಶುಭಾಶಯಗಳು. ಗುಡ್​ ಲಕ್​​. ಇಂತಿ ನಿಮ್ಮ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎಂದು ಹೋಟೆಲ್​​ ಪುಸ್ತಕದಲ್ಲಿ ಕೊಹ್ಲಿ ಬರೆದಿದ್ದಾರೆ. ಇದರ ಫೋಟೋ ಕೂಡ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rcb-vs-rr-ipl-2023-virat-kohli-and-anushka-sharma-visited-central-tiffin-room-in-malleswaram-bengaluru-vb-au48-561739.html

Views: 0

Leave a Reply

Your email address will not be published. Required fields are marked *