Sachin@50: ಅಭಿಮಾನಿಯ ಪ್ರೀತಿಗೆ ತಕ್ಷಣ ಪ್ರತಿಕ್ರಿಯಿಸಿದ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್

Sachin@50: ಅಭಿಮಾನಿಯ ಪ್ರೀತಿಗೆ ತಕ್ಷಣ ಪ್ರತಿಕ್ರಿಯಿಸಿದ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್
'Please See My Tattoo GOD': Tendulkar responded to the heartwarming gesture on Twitter

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ (Sachin Tendulkar) ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ್ದರೂ ಕೂಡ ಅಭಿಮಾನಿಗಳ ಪ್ರೀತಿಯನ್ನು ಇನ್ನೂ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಇನ್ನೂ ಕೂಡ ಸಚಿನ್​​ ಎಂಬ ಹೆಸರಿನ ಕ್ರೇಜ್​ ಫ್ಯಾನ್ಸ್​​ನ್ನು ಬಿಟ್ಟಿಲ್ಲ. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆಭಿಮಾನಿಯ ಅಭಿಮಾನಕ್ಕೆ ಮೆಚ್ಚಿ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಟ್ವಿಟರ್​​ ಖಾತೆಯಲ್ಲಿ ರೀ ಟ್ವೀಟ್​​ ಮಾಡಿದ್ದಾರೆ.

‘ಕ್ರಿಕೆಟ್‌ ದೇವರು’ ಎಂದು ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ನಾಳೆ(ಏ. 24)ರಂದು ತನ್ನ 50ನೇ ವರ್ಷಕ್ಕೆ ಕಾಲಿಡುತ್ತಿದ್ದು, ಕ್ರಿಕೆಟ್​​ ದೇವರ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಯೊಬ್ಬರು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಹೌದು ಅಭಿಮಾನಿಯೊಬ್ಬರು ತನ್ನ ಎಡಗೈಯ ಮೇಲೆ ತೆಂಡುಲ್ಕರ್ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ಈ ಪೋಟೋ ಮತ್ತು ಹಚ್ಚೆ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ದಯವಿಟ್ಟು ನನ್ನ ಟ್ಯಾಟೂ ನೋಡಿ ದೇವರೇ..’ ಎಂದು ಕ್ಯಾಷ್ಟನ್​​ ಬರೆದುಕೊಂಡಿದ್ದಾರೆ. ಆ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್ ಆದ ಮಹಿಳೆ

ಅಭಿಮಾನಿಯ ಅಭಿಮಾನಕ್ಕೆ ತಕ್ಷಣವೇ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ’10/10! ‘ಎಂದು ರೀಟ್ವೀಟ್​​ ಮಾಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ ನೋಡಿ.

100 ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಚಿನ್, 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಸಚಿನ್ ತಮ್ಮ ನಿವೃತ್ತಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಹೊಸ ಹೊಸ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

source https://tv9kannada.com/trending/please-see-my-tattoo-god-tendulkar-responded-to-the-heartwarming-gesture-on-twitter-aks-au61-561881.html

Leave a Reply

Your email address will not be published. Required fields are marked *