RBI ಇದೀಗ ಎಂಟು ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ. ಸರಿಯಾಗಿ ಕಾರ್ಯ ನಿರ್ವಹಿಸದ, ಕಡಿಮೆ ಬಂಡವಾಳ ಇರುವ ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಎಂಟು ಬ್ಯಾಂಕುಗಳ ಮೇಲೆ ಕಠಿಣ ನಿರ್ಬಂಧ ಹೇರಿದೆ.
ಸಹಕಾರಿ ಬ್ಯಾಂಕ್ ಗಳ ಮೇಲೆ RBI ಗಮನವಿಟ್ಟಿದೆ. ಕಾಲಕಾಲಕ್ಕೆ ಸಹಕಾರಿ ಬ್ಯಾಂಕ್ ಗಳ ಕಾರ್ಯಕ್ಷಮತೆಯನ್ನು ಗಮನಿಸುತ್ತಿದೆ. ಅಂತಹ ಬ್ಯಾಂಕ್ ಗಳು ಆರ್ಥಿಕ ಪರಿಸ್ಥಿತಿಲ್ಲಿ ಕೆಳಮಟ್ಟಕ್ಕೆ ಇದ್ದರೆ, RBI ಅವುಗಳ ಲೈಸೆನ್ಸ್ ರದ್ದು ಮಾಡುತ್ತದೆ. ಇದೀಗ ಅದೇ ಕೆಲಸ ಮಾಡಿದೆ.
ಸೇವಾ ವಿಕಾಸ ಸಹಕಾರಿ ಬ್ಯಾಂಕ್, ಡೆಕ್ಕನ್ ಅರ್ಬನ್ ಬ್ಯಾಂಕ್, ಮಿಲತ್ ಸಹಕಾರಿ ಬ್ಯಾಂಕ್, ಮುಧೋಳ ಸಹಕಾರಿ ಬ್ಯಾಂಕ್, ಶ್ರೀ ಆನಂದ ಸಹಕಾರಿ ಬ್ಯಾಂಕ್, ರೂಪಿ ಸಹಕಾರಿ ಬ್ಯಾಂಕ್, ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್, ಲಕ್ಷ್ಮೀ ಸಹಕಾರಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಲಾಗಿದೆ. ಈ ಬ್ಯಾಂಕ್ ಗಳಲ್ಲಿ ಗ್ರಾಹಕರು ಹಣವನ್ನಿಟ್ಟಿದ್ದರೆ ಒಮ್ಮೆ ವಿಚಾರಿಸಿ.
The post ಸಹಕಾರಿ ಬ್ಯಾಂಕ್ ನಲ್ಲಿ ಹಣ ಇಡುವ ಮುನ್ನ ಎಚ್ಚರ : 8 ಬ್ಯಾಂಕ್ ಗಳ ಪರವಾನಗಿ ರದ್ದು ಈಗ ಗ್ರಾಹಕರ ಹಣದ ಹೊಣೆ ಯಾರದ್ದು..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/6H4RQio
via IFTTT