Yuzvendra Chahal: ನೆಚ್ಚಿನ ನಾಯಕನನ್ನು ಹೆಸರಿಸಿದ ಯುಜ್ವೇಂದ್ರ ಚಹಾಲ್

IPL 2023: ಐಪಿಎಲ್​ನ 16ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಯುಜ್ವೇಂದ್ರ ಚಹಾಲ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ 12 ವಿಕೆಟ್ ಕಬಳಿಸಿರುವ ಚಹಾಲ್ ಇದೀಗ ಪರ್ಪಲ್​ ಕ್ಯಾಪ್​ ರೇಸ್​ನಲ್ಲಿದ್ದಾರೆ.ಇದರ ನಡುವೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಯುಜ್ವೇಂದ್ರ ಚಹಾಲ್​ಗೆ ಐಪಿಎಲ್​ನ ನೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಈ ಗೂಗ್ಲಿ ಪ್ರಶ್ನೆಗೆ ಚಹಾಲ್ ಅಚ್ಚರಿಯ ಉತ್ತರ ನೀಡಿರುವುದು ವಿಶೇಷ.ಹೌದು, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ಕಾಣಿಸಿಕೊಂಡಿರುವ ಯುಜ್ವೇಂದ್ರ ಚಹಾಲ್ ಅವರ ನೆಚ್ಚಿನ ಕ್ಯಾಪ್ಟನ್ ಸಂಜು ಸ್ಯಾಮ್ಸನ್.2013 ರಿಂದ 2021 ರವರೆಗೆ ಚಹಾಲ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ಪರ ಆಡಿದ್ದರು. ಅಲ್ಲದೆ ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯಲ್ಲೂ ಆಡಿದ ಅನುಭವ ಹೊಂದಿದ್ದಾರೆ.ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ನನ್ನ ನೆಚ್ಚಿನ ನಾಯಕ ಎಂದು ಚಹಾಲ್ ಹೇಳಿದ್ದಾರೆ. ಆರ್​ಆರ್​ ತಂಡದ ನಾಯಕನನ್ನೇ ಫೇವರೇಟ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವನ್ನೂ ಕೂಡ ತಿಳಿಸಿದ್ದಾರೆ.ನಾನು ವಿರಾಟ್ ಕೊಹ್ಲಿ, ಎಂಎಸ್ ಧೋನಿ (ಟೀಮ್ ಇಂಡಿಯಾ) ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ್ಧೇನೆ. ಅವರೆಲ್ಲರೂ ಒಬ್ಬ ಬೌಲರ್​ಗೆ ನೀಡಬೇಕಾದ ಎಲ್ಲಾ ಸ್ವಾತಂತ್ರ್ಯ ನೀಡಿದ್ದರು. ಇದಾಗ್ಯೂ ನನಗೆ ಐಪಿಎಲ್​ನಲ್ಲಿ ಸಂಜು ಸ್ಯಾಮ್ಸನ್ ಅವರ ನಾಯಕತ್ವದ ತುಂಬಾ ಇಷ್ಟ.ಏಕೆಂದರೆ ನಾನು ಧೋನಿ ಅವರಲ್ಲಿನ ಗುಣಗಳನ್ನು ಸ್ಯಾಮ್ಸನ್​ನಲ್ಲಿ ನೋಡುತ್ತಿದ್ದೇನೆ. ಆತ ಶಾಂತ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸುತ್ತಾನೆ. ಕಳೆದ 2 ವರ್ಷಗಳಲ್ಲಿ ಆತನ ನಾಯಕತ್ವದ ಗುಣದ ಕಾರಣ ನನ್ನ ಬೌಲಿಂಗ್​ನಲ್ಲೂ ಪ್ರಗತಿ ಕಂಡು ಬಂದಿದೆ ಎಂದು ಚಹಾಲ್ ಹೇಳಿದ್ದಾರೆ.ಅಷ್ಟೇ ಅಲ್ಲದೆ ಪ್ರತಿ ಬಾರಿಯೂ ಸಂಜು ಸ್ಯಾಮ್ಸನ್ ನಮ್ಮನ್ನು ಹುರಿದುಂಬಿಸುತ್ತಾರೆ. ನಿನಗೆ ನಾಲ್ಕು ಓವರ್​ ಸಿಗಲಿದೆ. ನಿನಗೆ ಹೇಗೆ ಬೌಲಿಂಗ್ ಮಾಡಬೇಕೆಂದು ಅನಿಸುತ್ತದೆಯೋ ಹಾಗೆಯೇ ಮಾಡು ಎಂದು ಸ್ವಾತಂತ್ರ್ಯವನ್ನೂ ಕೂಡ ನೀಡುತ್ತಾರೆ. ಇವೆಲ್ಲಾ ಕಾರಣಗಳಿಂದ ಸಂಜು ಸ್ಯಾಮನ್ಸ್ ನನ್ನ ನೆಚ್ಚಿನ ನಾಯಕರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಎಂದು ಯುಜ್ವೇಂದ್ರ ಚಹಾಲ್ ತಿಳಿಸಿದ್ದಾರೆ.

source https://tv9kannada.com/photo-gallery/cricket-photos/yuzvendra-chahal-picks-his-favourite-ipl-captain-kannada-news-zp-au50-562765.html

Leave a Reply

Your email address will not be published. Required fields are marked *