ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಏ.25) : ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾದ ಅಪ್ಪರ್ ಭದ್ರಾ ಯೋಜನೆಯನ್ನು ಕೇಂದ್ರ ಸರ್ಕಾರದ ಆಶ್ರಯದಲ್ಲಿ ರಾಜ್ಯ ಸರ್ಕಾರ ಪೂರ್ಣ ಮಾಡಲಿದೆ. ಇದರ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ ಎಂದು ಕೇಂದ್ರ ಆಹಾರ ಸಚಿವರಾದ ಆದೀತ್ಯ ಪ್ರಹ್ಲಾದ್ ಪಾಟೀಲ್ ತಿಳಿಸಿದರು.
ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಪ್ಪರ್ ಭದ್ರಾ ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಅದು ಇಲ್ಲಿ ಹರಿಯಬೇಕೆಂದು ಹಲವಾರು ವರ್ಷಗಳ ಕನಸಾಗಿದೆ ಅದನ್ನು ಬಿಜೆಪಿ ನನಸು ಮಾಡುತ್ತಿದೆ, ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ನೆರವಿನ ಹಸ್ತವನ್ನು ನೀಡುತ್ತಿದೆ. ಭದ್ರಾ ಜಲಾಶಯದಿಂದ 29.5 ಟಿಎಂಸಿ ನೀರನ್ನು ಹರಿಸುವುದರ ಮೂಲಕ ಈ ಬಾಗವನ್ನು ನೀರಾವರಿಯನ್ನಾಗಿ ಮಾಡಲಾಗುವುದು. ಇಲ್ಲಿನ ವಿವಿಸಾಗರಕ್ಕೆ ನೀರನ್ನು ಬಿಡುವುದರ ಮೂಲಕ ವಿವಿಧ ನಗರಗಳಿಗೆ ಕುಡಿಯುವ ನೀರನ್ನು ನೀಡಲಾಗುತ್ತದೆ ಎಂದರು.
ಚಿತ್ರದುರ್ಗ ಪುಣ್ಯದ ಬೀಡಾಗಿದೆ. ಇಲ್ಲಿ ಒನಕೆ ಒಬವ್ವಳಂತಹ ಮಹಿಳೆ ಇದ್ದು ಈ ಕ್ಷೇತ್ರವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿದ್ದಾಳೆ, ಆಕೆಯ ಕಾಲದಿಂದಲೂ ಸಹಾ ಇಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ನಮ್ಮ ಸರ್ಕಾರ ಮುಂದಿನ ದಿನಮಾನದಲ್ಲಿ ಪರಿಹಾರ ಮಾಡಲಿದೆ. ಕೇಂದ್ರ ಸರ್ಕಾರ ಈ ಯೋಜನೆಯ ಜಾರಿಗೆ ನೆರವಿನ ಹಸ್ತವನ್ನು ನೀಡಿದೆ. ಅತಿ ಹೆಚ್ಚು ದೂರದಿಂದ ನೀರನ್ನು ಇಲ್ಲಿಗೆ ತರಲಾಗುತ್ತಿದೆ. ಇದರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದ ಅವರು, ಈ ಯೋಜನೆ ಪೂರ್ಣವಾಗುವವರೆಗೂ ನಮ್ಮ ಪಕ್ಷ ಬಿಡುವುದಿಲ್ಲ ಇದನ್ನು ಪೂರ್ಣ ಮಾಡಿಯೇ ತಿರುತ್ತೇವೆ ಇದರ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜನ ಜೀವನ ಮಿಷನ್ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಿಗೆ ನೀರನ್ನು ನೀಡುವ ಯೋಜನೆಯನ್ನು ಕಾರ್ಯಗತ ಮಾಡುತ್ತಿದೆ ಈ ಯೋಜನೆ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಕೆಲವು ಗ್ರಾಮಗಳಲ್ಲಿ ಪೂರ್ಣಗೊಂಡು ನೀರನ್ನು ನೀಡಲಾಗುತ್ತಿದೆ, ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನೀರನ್ನು ನೀಡಲಾಗುತ್ತಿದೆ.
ಈ ಯೋಜನೆ ಹಳೇಯದಾಗಿದ್ದು ಇದು ಮುಂದುವರೆಯುವಂತೆ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದು ಯಾವುದೇ ಕಾರಣಕ್ಕೂ ಇದು ನಿಲ್ಲಬಾರದೆಂದು ಮನವಿ ಮಾಡಿದ್ದು ಆಯೋಗವೂ ಸಹಾ ಇದಕ್ಕೆ ಸಮ್ಮತಿಸಿದೆ ಎಂದು ಆದೀತ್ಯ ಪ್ರಹ್ಲಾದ್ ಪಾಟೀಲ್ ಹೇಳಿದರು.
ಚಿತ್ರದುರ್ಗ ನಗರಕ್ಕೆ ಅಮೃತ್ ಯೋಜನೆ ಎರಡನೇ ಹಂತದಡಿಯಲ್ಲಿ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಇದು ಸಹಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೀಘ್ರದಲ್ಲಿಯೇ ದಿನದ 24 ಗಂಟೆಯೂ ನೀರು ಸಿಗಲಿದೆ. ಇಂದಿನ ಚುನಾವಣೆಯಲ್ಲಿ ಮೋದಿ ಹೆಚ್ಚಿನ ಸ್ಥಾನವನ್ನು ಪಡೆಯಲಿದ್ಧಾರೆ, ಇವರ ಆಧಾರದ ಮೇಲೆ ಮತಯಾಚನೆಯನ್ನು ಮಾಡಲಾಗುತ್ತದೆ.
ಇದರೊಂದಿಗೆ ರಾಜ್ಯದಲ್ಲಿ ಆಡಳಿತವನ್ನು ನಡೆಸಿದ ಯಡೆಯೂರಪ್ಪ ಮತ್ತು ಬೋಮ್ಮಾಯಿ ಸರ್ಕಾರದ ಸಾಧನೆಗಳ ಮೂಲಕ ಈ ಚುನಾವಣೆಯಲ್ಲಿ ಮತಯಾಚನೆಯನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದ ಸಾಧನೆಯನ್ನು ಕಂಡು ಅವರಿಗೆ ಹೇಳು ಏನು ಇಲ್ಲದಿರುವಾಗ ನಮ್ಮ ಪಕ್ಷದ ಬಗ್ಗೆ ಸುಳ್ಳಿನ ಪ್ರಚಾರವನ್ನು ಮಾಡುತ್ತಾ ಮತದಾರರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಉತ್ತಮವಾದ ಅಭ್ಯರ್ಥಿಗಳನ್ನು ನಮ್ಮ ಪಕ್ಷ ಹಾಕಿದೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ನುಡಿದರು.
ಗೋಷ್ಠಿಯಲ್ಲಿ ಗುಜರಾತ್ ಸರ್ಕಾರ ಮುಖ್ಯ ಸಚೇತಕರಾದ ಜಗದೀಶ್ ಬಾಯಿ, ಶಾಸಕರಾದ ಪ್ರಕಾಶ ಬಾಯಿ ಮುರ್ಮಾಜಿ, ಜಿಲ್ಲಾಧ್ಯಕ್ಷರಾದ ಮುರಳಿಧರ್, ಡಾ.ಸಿದ್ದಾರ್ಥ, ನರೇಂದ್ರ, ಚಾಲುಕ್ಯ ನವೀನ್, ಅನಿತ್ ಕುಮಾರ್, ಶ್ರೀಮತಿ ಗೀತಾ ಧನಂಜಯ, ಮಲ್ಲಿಕಾರ್ಜನ್, ಮೋಹನ್, ವಕ್ತಾರ ನಾಗರಾಜ್ ಬೇದ್ರೇ, ಕಲ್ಲೇಶಯ್ಯ, ಸೇರಿದಂತೆ ಇತರರು ಭಾಗವಹಿಸಿದ್ದರು.
The post ಅಪ್ಪರ್ ಭದ್ರಾ ಯೋಜನೆಯನ್ನು ಕೇಂದ್ರ ಸರ್ಕಾರ ಪೂರ್ಣ ಮಾಡಲಿದೆ : ಕೇಂದ್ರ ಸಚಿವ ಆದೀತ್ಯ ಪ್ರಹ್ಲಾದ್ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/ZeENu3r
via IFTTT