IPL 2023: ಭುವನೇಶ್ವರ್​ ಕುಮಾರ್ ಪಾದ ಮುಟ್ಟಿ ನಮಸ್ಕರಿಸಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್

IPL 2023: ಭುವನೇಶ್ವರ್​ ಕುಮಾರ್ ಪಾದ ಮುಟ್ಟಿ ನಮಸ್ಕರಿಸಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್
David Warner Touches Bhuvneshwar Kumar's Feet

IPL 2023: ಐಪಿಎಲ್​ನ 34ನೇ ಪಂದ್ಯಕ್ಕೂ ಮುನ್ನ ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದರು. ಸನ್​ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಟಾಸ್ ಪ್ರಕ್ರಿಯೆಗೂ ಮುನ್ನ ಡೇವಿಡ್ ವಾರ್ನರ್ (David Warner) ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಮೈದಾನದಲ್ಲಿ ಎಸ್​ಆರ್​ಹೆಚ್ (SRH) ವೇಗಿ ಭುವನೇಶ್ವರ್ ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಇಶಾಂತ್ ಶರ್ಮಾ ಜೊತೆ ಮಾತನಾಡುತ್ತಾ ನಿಂತಿದ್ದರು. ಭುವನೇಶ್ವರ್​ ಕುಮಾರ್ ಅವರನ್ನು ಕಾಣುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರತ್ತ ಸಾಗಿದರು.

ಅಷ್ಟೇ ಅಲ್ಲದೆ ಭುವನೇಶ್ವರ್ ಅವರ ಪಾದವನ್ನು ಮುಟ್ಟಿ ನಮಸ್ಕರಿಸುವ ಮೂಲಕ ಗಮನ ಸೆಳೆದರು. ಮೇಲ್ನೋಟಕ್ಕೆ ಹಿರಿಯರ ಆಶೀರ್ವಾದ ಪಡೆದಂತೆ ಭುವಿಯನ್ನು ಕಿಚಾಯಿಸಿರುವ ವಾರ್ನರ್​ ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು  ಭುವನೇಶ್ವರ್ ಕುಮಾರ್ ಹಾಗೂ ಡೇವಿಡ್ ವಾರ್ನರ್ ಆತ್ಮೀಯವಾಗಿ ತಬ್ಬಿಕೊಂಡು ಕುಶಲೋಪರಿ ನಡೆಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಇದೇ ವೇಳೆ ಇಶಾಂತ್ ಶರ್ಮಾ ಕೂಡ ಇವರ ಜೊತೆಗಿದ್ದರು. ಅಂದಹಾಗೆ ಡೇವಿಡ್ ವಾರ್ನರ್ ಹಾಗೂ ಭುವನೇಶ್ವರ್ ಕುಮಾರ್ 2014 ರಿಂದ 2021 ರವರೆಗೆ ಎಸ್​ಆರ್​ಹೆಚ್​ ತಂಡದಲ್ಲಿದ್ದರು.

7 ವರ್ಷಗಳ ಕಾಲ ಜೊತೆಯಾಗಿ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಿದ್ದ ಇಬ್ಬರು ನಡುವೆ ತುಂಬಾ ಆತ್ಮೀಯತೆ ಇದೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಡೇವಿಡ್ ವಾರ್ನರ್ ತನ್ನ ಮಾಜಿ ಸಹ ಆಟಗಾರನೊಂದಿಗೆ ಗೆಳೆತನ ಮುಂದುವರೆಸಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ.

ಇದನ್ನೂ ಓದಿ: Virat Kohli: ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 144 ರನ್​ ಕಲೆಹಾಕಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್ ನಷ್ಟಕ್ಕೆ 137 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ರನ್​ಗಳ ರೋಚಕ ಜಯ ಸಾಧಿಸಿತು.

 

source https://tv9kannada.com/sports/cricket-news/david-warner-touches-bhuvneshwar-kumars-feet-kannada-news-zp-au50-563549.html

Leave a Reply

Your email address will not be published. Required fields are marked *