WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಗೆಲ್ಲಲು ಬಿಸಿಸಿಐ ಮಾಸ್ಟರ್ ಪ್ಲಾನ್..!

WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಗೆಲ್ಲಲು ಬಿಸಿಸಿಐ ಮಾಸ್ಟರ್ ಪ್ಲಾನ್..!
BCCI names 4 additional pacers to travel as net bowlers for the WTC final 2023

ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ICC World Test Championship) ಫೈನಲ್‌ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ಬಿಸಿಸಿಐನ (BCCI) ಹಿರಿಯ ಆಯ್ಕೆ ಸಮಿತಿ ಮಂಗಳವಾರ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಭಾರತ, ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲೂ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತ್ತು. ಹೀಗಾಗಿ ಈ ಬಾರಿ ಭಾರತ ಪ್ರಶಸ್ತಿ ಗೆಲ್ಲಲು ಶತಾಯಗತಾಯ ಹೋರಾಡಲಿದೆ. ಇದಕ್ಕಾಗಿಯೇ ಬಲಿಷ್ಠ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್​ಗಳನ್ನೇ ತಂಡಕ್ಕೆ ಆಯ್ಕೆ ಮಾಡಿದೆ. ಇದೀಗ ಇದು ಸಾಲದೆಂಬಂತೆ ವೇಗದ ಬೌಲರ್​​ಗಳಿಗೆ ಹೆಚ್ಚು ಸಹಾಯಕಾರಿಯಾಗುವ ಇಂಗ್ಲೆಂಡ್ನ ಓವೆಲ್ ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ನೆರವಾಗಲೆಂದು ಈಗ ಆಯ್ಕೆಯಾಗಿರುವ 15 ಆಟಗಾರರ ತಂಡದೊಂದಿಗೆ ಇನ್ನೂ 4 ವೇಗದ ಬೌಲರ್​ಗಳನ್ನು ತಂಡದೊಂದಿಗೆ ಇಂಗ್ಲೆಂಡ್​​ಗೆ ಕಳುಹಿಸಲು ನಿರ್ಧರಿಸಿದೆ.

ಅಧಿಕವಾಗಿ ನಾಲ್ವರು ನೆಟ್ ಬೌಲರ್ಸ್​

ನಿಗಧಿಯಂತೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂತಿಮ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯಲ್ಲಿದ್ದು, ಸಾಮಾನ್ಯವಾಗಿ ಇಂಗ್ಲೆಂಡ್‌ ಪಿಚ್​ಗಳು ವೇಗದ ಬೌಲರ್‌ಗಳಿಗೆ ಅನುಕೂಲವಾಗಿದೆ. ಅಲ್ಲಿ ಚೆಂಡು ಚೆನ್ನಾಗಿ ಸ್ವಿಂಗ್ ಆಗುತ್ತದೆ ಮತ್ತು ಪುಟಿಯುತ್ತದೆ. ಈ ಹಿನ್ನೆಲೆಯಲ್ಲಿ ನಾಲ್ವರು ವೇಗದ ಬೌಲರ್‌ಗಳನ್ನು ನೆಟ್ ಬೌಲರ್‌ಗಳಾಗಿ ಇಂಗ್ಲೆಂಡ್‌ಗೆ ಕಳುಹಿಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಈ ಮಾಹಿತಿಯನ್ನು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದಕ್ಕಾಗಿ ಆಯ್ಕೆಯಾಗಿರುವ ನಾಲ್ವರು ಬೌಲರ್‌ಗಳಲ್ಲಿ ಮುಖೇಶ್ ಕುಮಾರ್, ಉಮ್ರಾನ್ ಮಲಿಕ್, ನವದೀಪ್ ಸೈನಿ ಮತ್ತು ಕುಲದೀಪ್ ಸೇನ್ ಹೆಸರು ಸೇರಿದೆ.

IPL 2023: ರೋಹಿತ್ ಶರ್ಮಾ ಐಪಿಎಲ್​ನಿಂದ ಹೊರಗುಳಿದರೆ ಒಳಿತು ಎಂದ ಲಿಟಲ್ ಮಾಸ್ಟರ್

ಈ ಎಲ್ಲಾ ಆಟಗಾರರು ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಮುಕೇಶ್ ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ. ಉಮ್ರಾನ್ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಆಡುತ್ತಿದ್ದಾರೆ. ನವದೀಪ್ ಸೈನಿ ಮತ್ತು ಕುಲದೀಪ್ ಸೇನ್ ರಾಜಸ್ಥಾನ ರಾಯಲ್ಸ್‌ನ ಭಾಗವಾಗಿದ್ದಾರೆ. ಆದರೆ ಇದಕ್ಕೂ ಮುನ್ನ ನಾಲ್ವರೂ ನೆಟ್ ಬೌಲರ್‌ಗಳಾಗಿ ತಂಡವನ್ನು ಸೇರಿಕೊಂಡಿದ್ದಾರೆ.ಸೈನಿ ಮತ್ತು ಉಮ್ರಾನ್ ಕೂಡ ಭಾರತದ ಪರ ಆಡಿದ್ದಾರೆ.

ಐಪಿಎಲ್ ನಂತರ ಅಂತಿಮ ತಯಾರಿ

ಮೇ 28 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಇದರ ನಂತರ ಭಾರತ ತಂಡ ಫೈನಲ್‌ಗೆ ಸಿದ್ಧವಾಗಲಿದೆ. ಕೆಲವು ಆಟಗಾರರು ಫೈನಲ್‌ಗೂ ಮುನ್ನವೇ ಲಂಡನ್​ಗೆ ತೆರಳಲಿದ್ದಾರೆ. ಭಾರತ ತಂಡವು ಐಪಿಎಲ್ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಕ್ಷಣದ ತಯಾರಿಯನ್ನು ಪ್ರಾರಂಭಿಸುತ್ತದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ತಂಡವು ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಅನ್ನು ಆಡಲಿದೆ. ಅಲ್ಲದೆ ರೋಹಿತ್ ನಾಯಕನಾಗಿ ವಿದೇಶಿ ನೆಲದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/bcci-names-4-additional-pacers-to-travel-as-net-bowlers-for-the-wtc-final-2023-psr-au14-564286.html

Views: 0

Leave a Reply

Your email address will not be published. Required fields are marked *