Skip to content
  • Tuesday, July 29, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • Virat Kohli: 300 ಪ್ಲಸ್ ರನ್: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ
Sports

Virat Kohli: 300 ಪ್ಲಸ್ ರನ್: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

April 27, 2023
samagrasuddi

IPL 2023: ಐಪಿಎಲ್​ನ 16ನೇ ಸೀಸನ್​ನಲ್ಲಿ ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 300 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಐಪಿಎಲ್​ನಲ್ಲಿ ಸತತವಾಗಿ ಮುನ್ನರಕ್ಕೂ ಅಧಿಕ ರನ್​ಗಳಿಸಿದ ವಿಶೇಷ ದಾಖಲೆಯೊಂದು ಕಿಂಗ್ ಕೊಹ್ಲಿ ಪಾಲಾಗಿದೆ.ಐಪಿಎಲ್​ ಇತಿಹಾಸದಲ್ಲಿ ವಿರಾಟ್ ಕೊಹ್ಲಿ 14 ಸೀಸನ್​ಗಳಲ್ಲಿ ಸತತವಾಗಿ 300 ಕ್ಕೂ ಅಧಿಕ ರನ್​ಗಳಿಸುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ 14 ಸೀಸನ್​ನಲ್ಲಿ 300+ ರನ್ ಕಲೆಹಾಕಿಲ್ಲ.ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಹೆಸರಿನಲ್ಲಿತ್ತು. ಧವನ್ ಸತತ 12 ಸೀಸನ್​ಗಳಲ್ಲಿ ಮೂರಕ್ಕೂ ಅಧಿಕ ರನ್​ಗಳಿಸಿ ಮಿಂಚಿದ್ದಾರೆ.ಹಾಗೆಯೇ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಸತತ 12 ಸೀಸನ್​ಗಳಲ್ಲಿ 300+ ರನ್​ ಕಲೆಹಾಕಿ ವಿಶೇಷ ದಾಖಲೆ ಬರೆದಿದ್ದರು.ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ವಿರಾಟ್ ಕೊಹ್ಲಿ ಸತತ 14ನೇ ಸೀಸನ್​ನಲ್ಲಿ 300 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಕಿಂಗ್ ಕೊಹ್ಲಿ 8 ಇನಿಂಗ್ಸ್​ಗಳಲ್ಲಿ ಒಟ್ಟು 333 ರನ್​ಗಳಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್​ ರೇಸ್​ನಲ್ಲಿ 2ನೇ ಸ್ಥಾನದಲ್ಲಿದ್ದಾರೆ.ಇದಲ್ಲದೆ ಐಪಿಎಲ್​ನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್​ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 53 ಬಾರಿ ಐವತ್ತಕ್ಕಿಂತ ಹೆಚ್ಚಿನ ರನ್​ಗಳಿಸಿದ್ದಾರೆ.ಹಾಗೆಯೇ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ ಕೂಡ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇದುವರೆಗೆ 6903 ರನ್​ಗಳಿಸಿದ್ದು, ಇನ್ನು 97 ರನ್​ಗಳಿಸಿದರೆ ಐಪಿಎಲ್​ನಲ್ಲಿ 7 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.

source https://tv9kannada.com/photo-gallery/cricket-photos/ipl-2023-most-times-300-plus-runs-in-ipl-season-kannada-news-zp-au50-565235.html

Post navigation

IPL 2023: RCB ಕಪ್​ ಗೆಲ್ಲೋ ತನಕ ಸ್ಕೂಲ್​ಗೆ ಸೇರಲ್ಲ: ಆಗಿದ್ರೆ ಈ ಜನ್ಮದಲ್ಲಿ ಶಾಲೆಗೆ ಹೋಗಲ್ಲ ಎಂದು ಕಿಚಾಯಿಸಿದ ನೆಟ್ಟಿಗರು
ಹಲವು ದೊಡ್ಡ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಕೆಫೆನ್, ನಿತ್ಯ ಎಷ್ಟು ಸೇವಿಸಬೇಕು?

Leave a Reply Cancel reply

Your email address will not be published. Required fields are marked *

Recent Comments

  1. Dayananda Patel T on 🛑 ಬುಧವಾರ ಭಾರತ್ ಬಂದ್ : 25 ಕೋಟಿಗೂ ಅಧಿಕ ಕಾರ್ಮಿಕರು ಸಜ್ಜು | ದೇಶವ್ಯಾಪಿ ಪ್ರತಿಭಟನೆಗೆ ಕರೆ 🛑July 8, 2025

    Date and day confused

  2. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  3. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  4. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  5. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

CITIES

Cities

🐍 Nag Panchami 2025: ನಾಗರ ಪಂಚಮಿ ಯಾವಾಗ? ಪೂಜಾ ವಿಧಾನ, ಮಂತ್ರ ಹಾಗೂ ಮಹತ್ವ ಇಲ್ಲಿದೆ!

July 24, 2025
samagrasuddi

📅 2025ರ ನಾಗರ ಪಂಚಮಿ ದಿನಾಂಕ:➡️ ಜುಲೈ 29, ಮಂಗಳವಾರ➡️ ಪಂಚಮಿ ತಿಥಿ ಆರಂಭ: ಬೆಳಿಗ್ಗೆ 5:24➡️ ಪಂಚಮಿ ತಿಥಿ ಕೊನೆ: ಮಧ್ಯಾಹ್ನ 12:46 🛕 ಹಬ್ಬದ ಮಹತ್ವ: ನಾಗರ ಪಂಚಮಿ ಹಿಂದೂ ಧರ್ಮದಲ್ಲಿ ಸರ್ಪ ದೇವತೆಗಳಿಗೆ ಅರ್ಪಿಸಿದ ಪವಿತ್ರ ಹಬ್ಬವಾಗಿದೆ.…

Cities

ಇನ್ನೂ ಒಂದು ವರ್ಷದೊಳಗೆ ಶೇ.30 ರಷ್ಟು ಬೆಂಗಳೂರು ಟ್ರಾಫಿಕ್‌ನಿಂದ ಮುಕ್ತಿ! ಹೊಸ ಐಡಿಯಾ ತಂದ ಪ್ರಶಾಂತ್ ಪಿಟ್ಟಿ 🚦🏙️

July 24, 2025
samagrasuddi
Cities

🚛 ರಿಸರ್ವ್ ಬ್ಯಾಂಕ್‌ನ ಲಕ್ಷ ಲಕ್ಷ ನಾಣ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ! 😱💰

July 23, 2025
samagrasuddi
Cities

ಪೋಷಕರೇ ಗಮನಿಸಿ..! 7 ವರ್ಷವಾದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: ಇಲ್ಲದಿದ್ದರೆ ಆಧಾರ್ ನಂಬರ್ ನಿಷ್ಕ್ರಿಯವಾಗಬಹುದು

July 15, 2025
samagrasuddi
Cities

ಸಿಗಂದೂರು ಸೇತುವೆಗೆ “ಚೌಡೇಶ್ವರಿ ದೇವಿ” ಹೆಸರು: ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

July 14, 2025
samagrasuddi

You may Missed

Health

🥥 ತಾಜಾ ತೆಂಗಿನಕಾಯಿ ನಿಜಕ್ಕೂ ಆರೋಗ್ಯಕ್ಕೆ ಪ್ರಯೋಜನಕಾರಿಯೇ? ವೈದ್ಯರ ಸ್ಪಷ್ಟನೆ ಇದಾಗಿದೆ!

July 28, 2025
samagrasuddi
Health

🧍‍♂️ ನಿತ್ಯ 7 ಸಾವಿರ ಹೆಜ್ಜೆಗಳ ನಡಿಗೆ: ಆರೋಗ್ಯಕ್ಕೆ ಇದು ಎಷ್ಟು ಲಾಭಕರ ಗೊತ್ತಾ?

July 27, 2025
samagrasuddi
Health

🌿 ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿಂದ್ರೆ ಎಷ್ಟೋ ಸಮಸ್ಯೆಗಳು ಕಡಿಮೆಯಾಗುತ್ತೆ! ನೀವೂ ಟ್ರೈ ಮಾಡಿ

July 26, 2025
samagrasuddi
Health

ಮಳೆಗಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ತಪ್ಪದೆ ಮಾಡಿ; ಯಾವ ರೋಗವೂ ಬರಲ್ಲ! 🌧️☕🌿

July 25, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • 🏸 ಐಸಿಎಸ್‌ಇ ಝೊನಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ವಿದ್ಯಾ ವಿಕಾಸ ವಿದ್ಯಾರ್ಥಿಗಳ ಸಾಧನೆ:
  • 🐆 ಚಿರತೆ ದಾಳಿಗೆ ಒಳಗಾದ ಸಿದ್ದೇಶ್ ಆರೋಗ್ಯ ವಿಚಾರಿಸಿದ ಶಾಸಕ ವೀರೇಂದ್ರ ಪಪ್ಪಿ
  • 🎓 ವೀರಶೈವ ಲಿಂಗಾಯಿತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ.
  • 🏰 ಚಿತ್ರದುರ್ಗ ಕೋಟೆ ಕುರಿತು ಪ್ರಧಾನಿ ಮೋದಿಯಿಂದ ಮೆಚ್ಚುಗೆ: ಜೆಡಿಎಸ್ ಮುಖಂಡರಿಂದ ಸ್ವಾಗತ
  • 🌾 ಯೂರಿಯಾ ಗೊಬ್ಬರದ ಅಭಾವ – ಸರ್ಕಾರದ ವಿರುದ್ದ ಚಳವಳಿಗೆ ಬಿಜೆಪಿ ರೈತ ಮೋರ್ಚಾ! 🌾
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress