Andre Russell: ಕ್ಯಾಚ್ ಬಿಟ್ಟಿದ್ದಕ್ಕೆ ತನ್ನದೇ ತಂಡದ ಆಟಗಾರನಿಗೆ ಮನಬಂದಂತೆ ಬೈದ ಆಂಡ್ರೆ ರಸೆಲ್

Andre Russell: ಕ್ಯಾಚ್ ಬಿಟ್ಟಿದ್ದಕ್ಕೆ ತನ್ನದೇ ತಂಡದ ಆಟಗಾರನಿಗೆ ಮನಬಂದಂತೆ ಬೈದ ಆಂಡ್ರೆ ರಸೆಲ್
Andre Russel Angry KKR vs GT

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ (KKR vs GT) ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಜಿಟಿ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಒಂದು ಹಂತದಲ್ಲಿ ಸಂಪೂರ್ಣ ತಮ್ಮ ಪರವಿದ್ದ ಪಂದ್ಯವನ್ನು ಅಂತಿಮ ಹಂತದಲ್ಲಿ ಕೆಕೆಆರ್ ತನ್ನ ಕೈಯಾರೆ ಕಳೆದುಕೊಂಡಿತು. ಫೀಲ್ಡಿಂಗ್​ನಲ್ಲಿ ಮಾಡಿದ ಕೆಲವು ಎಡವಟ್ಟು, ಕ್ಯಾಚ್ ಕೈಚೆಲ್ಲಿದ್ದು ಸೋಲಲು ಪ್ರಮುಖ ಕಾರಣವಾಯಿತು.

ಫೀಲ್ಡಿಂಗ್​ನಲ್ಲಿ ಕೋಲ್ಕತ್ತಾ ಪ್ಲೇಯರ್ಸ್ ಅನೇಕ ತಪ್ಪೆಸಗಿದರು. ಮುಖ್ಯವಾಗಿ ಡೇವಿಡ್ ಮಿಲ್ಲರ್ ಅವರ ಸುಲಭ ಕ್ಯಾಚ್ ಚೈಲಿದ್ದು ದೊಡ್ಡ ಹೊಡೆತ ಬಿದ್ದಿತು. ಜಿಟಿ ತಂಡದ ಮಧ್ಯಮ ಕ್ರಮಾಂಕದ ಅಪಾಯಕಾರಿ ಬ್ಯಾಟರ್ ಮಿಲ್ಲರ್ ವಿಕೆಟ್ ಕೆಕೆಆರ್​ಗೆ ಬಹುಮುಖ್ಯವಾಗಿತ್ತು. ಇದಕ್ಕಾಗಿ 16ನೇ ಓವರ್​ನಲ್ಲಿ ಆಂಡ್ರೆ ರಸೆಲ್ ಬೌಲಿಂಗ್ ಮಾಡಲು ಬಂದರು. ಮೊದಲ ಎಸೆತದ ಲೆಂತ್ ಬಾಲ್ ಅನ್ನು ಸಿಕ್ಸರ್ ಅಟ್ಟಲು ಮಿಲ್ಲರ್ ಪ್ರಯತ್ನಿಸಿದರು. ಆದರೆ, ಚೆಂಡ್ ಬ್ಯಾಟ್​ಗೆ ಸರಿಯಾಗಿ ಟೈಮ್ ಆಗದೆ ಟಾಪ್ ಎಡ್ಜ್ ಆಯಿತು. ಬಾಲ್ ವಿಕೆಟ್ ಹಿಂದೆ ಮೇಲಕ್ಕೆ ಸಾಗಿತು.

T20 Record: 8 ಭರ್ಜರಿ ಸಿಕ್ಸ್, 1 ಫೋರ್: ಒಂದೇ ಓವರ್​ನಲ್ಲಿ 55 ರನ್​..!

ಥರ್ಡ್ ಮ್ಯಾನ್​ನಲ್ಲಿ ನಿಂತಿದ್ದ ಸುಯೇಶ್ ಶರ್ಮಾ ಕ್ಯಾಚ್​ಗೆಂದು ಓಡಿ ಬಂದರು. ಆದರೆ, ಚೆಂಡು ತುಂಬಾ ಮೇಲೆ ಹೋಗಿದ್ದರಿಂದ ನಿಯಂತ್ರಣ ಸಿಗದೆ ಸುಯೇಶ್ ಕೈಗೆ ಬಾಲ್ ತಾಗಿ ಕೆಳಗೆ ಬಿತ್ತು. ಸುಲಭ ಕ್ಯಾಚ್ ಕೈಚೆಲ್ಲಿದ ಜೊತೆಗೆ ಪ್ರಮುಖ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ ಎಂದು ಸುಯೇಶ್ ಮೇಲೆ ಆಂಡ್ರೆ ರಸೆಲ್ ಕೋಪಗೊಂಡರು. ಸುಯೇಶ್ ಕ್ಯಾಚ್ ಬಿಡುತ್ತಿದ್ದಂತೆ ಅವರ ಮೇಲೆ ಸಿಟ್ಟಿಗೆದ್ದರು. ಅತ್ತ ನಾಯಕ ನಿತೀಶ್ ರಾಣ ಕೂಡ ಬೇಸರಗೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ, ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. ಎನ್. ಜಗದೀಶನ್ 19, ಶಾರ್ದೂಲ್ ಠಾಕೂರ್ 0, ವೆಂಕಟೇಶ್ ಅಯ್ಯರ್ 11, ನಿತೀಶ್ ರಾಣ 4 ಹಾಗೂ ರಿಂಕಿ ಸಿಂಗ್ 19 ರನ್​ಗೆ ನಿರ್ಗಮಿಸಿದರು. ಗುರ್ಬಾಜ್ 39 ಎಸೆತಗಳಲ್ಲಿ 5 ಫೋರ್, 7 ಸಿಕ್ಸರ್ ಸಿಡಿಸಿ 81 ರನ್​ ಗಳಿಸಿದರು. ಕೊನೆಯಲ್ಲಿ ಆಂಡ್ರೆ ರಸೆಲ್ 19 ಎಸೆತಗಳಲ್ಲಿ 34 ರನ್ ಸಿಡಿಸಿದ ಪರಿಣಾಮ ಕೆಕೆಆರ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಜಿಟಿ ಪರ ಮೊಹಮ್ಮದ್ ಶಮಿ 3, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ 2 ವಿಕೆಟ್ ಪಡೆದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಪರ ವೃದ್ದಿಮಾನ್ ಸಾಹ (10) ಬೇಗನೆ ಔಟಾದರು. ಆದರೆ, ಶುಭ್​ಮನ್ ಗಿಲ್ (49) ಮತ್ತು ಹಾರ್ದಿಕ್ ಪಾಂಡ್ಯ (26) ಅರ್ಧಶತಕದ ಜೊತೆಯಾಟ ಆಡಿ ನೆರವಾದರು. ಅಂತಿಮ ಹಂತದಲ್ಲಿ ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶಂಕರ್ ಕೇವಲ 24 ಎಸೆತಗಳಲ್ಲಿ ಅಜೇಯ 51 ಹಾಗೂ ಮಿಲ್ಲರ್ 18 ಎಸೆತಗಳಲ್ಲಿ ಅಜೇಯ 32 ರನ್ ಸಿಡಿಸಿದರು. ಜಿಟಿ 17.5 ಓವರ್​ಗಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ 7 ವಿಕೆಟ್​ಗಳ ಜಯ ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/andre-russell-was-left-fuming-in-his-manic-outburst-when-suyash-sharma-drop-david-miller-catch-kkr-vs-gt-vb-au48-566645.html

Views: 0

Leave a Reply

Your email address will not be published. Required fields are marked *