Virat Kohli-Naveen Ul Haq: ನೀನು ನನ್ನ ಧೂಳಿಗೆ ಸಮ: ನವೀನ್ ಉಲ್ ಹಖ್ ಜೊತೆಗೂ ಕೊಹ್ಲಿ ಜಗಳ: ಓಡೋಡಿ ಬಂದ ಅಂಪೈರ್

Virat Kohli-Naveen Ul Haq: ನೀನು ನನ್ನ ಧೂಳಿಗೆ ಸಮ: ನವೀನ್ ಉಲ್ ಹಖ್ ಜೊತೆಗೂ ಕೊಹ್ಲಿ ಜಗಳ: ಓಡೋಡಿ ಬಂದ ಅಂಪೈರ್
Virat Kohli Naveen Ul Haq Fight LSG vs RCB

ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ (IPL 2023) ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವಣ 43ನೇ ಪಂದ್ಯ ರಣರೋಚಕವಾಗಿತ್ತು. ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಆರ್​ಸಿಬಿ ಲೋ ಸ್ಕೋರ್ ಗೇಮ್​ನಲ್ಲಿ 18 ರನ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು. ಬೆಂಗಳೂರು ಆಟಗಾರರು ಎಲ್ಲ ವಿಭಾಗಗಳಲ್ಲಿ ಹಿಂದಿನ ಪಂದ್ಯದ ಸೇಡನ್ನು ತೀರಿಸಿಕೊಂಡರು. ಇದರ ನಡುವೆ ವಿರಾಟ್ ಕೊಹ್ಲಿ (Virat Kohli) ಹಾಗೂ ಗೌತಮ್ ಗಂಭೀರ್ ನಡುವೆ ದೊಡ್ಡ ಮಟ್ಟದ ಜಗಳ ಕೂಡ ನಡೆಯಿತು. ಕೇವಲ ಗಂಭೀರ್ ಜೊತೆಗೆ ಮಾತ್ರವಲ್ಲದೆ ಕೊಹ್ಲಿ ಅವರು ನವೀನ್ ಉಲ್ ಹಖ್ ಜೊತೆಗೂ ಮಾತಿನ ಚಕಮಕಿ ನಡೆಸಿದ್ದಾರೆ.

ಎಲ್​ಎಸ್​ಜಿ ಬ್ಯಾಟಿಂಗ್ ಇನ್ನಿಂಗ್ಸ್​ನ 17ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಖ್ ನಡುವೆ ಜಗಳವಾಗಿದೆ. ಯಾವ ಕಾರಣಕ್ಕಾಗಿ ಜಗಳ ಶುರುವಾಯಿತು ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ಇಬ್ಬರೂ ಮುಖಾಮುಖಿಯಾಗಿ ನಿಂತು ಮಾತಿನ ಚಕಮಕಿ ನಡೆಸಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರುತ್ತೆ ಎಂಬೊತ್ತಿಗೆ ಅಮಿತ್ ಮಿಶ್ರಾ ಬಂದರು. ಅತ್ತ ಅಂಪೈರ್ ಕೂಡ ಓಡಿ ಬಂದು ಕೊಹ್ಲಿಯನ್ನು ತಡೆದರು. ಇದಾದ ಬೆನ್ನಲ್ಲೇ ಕೊಹ್ಲಿ ಅವರು ತಮ್ಮ ಶೂ ಧೂಳನ್ನು ನವೀನ್ ಕಡೆಗೆ ತೋರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

IPL 2023: ಕಾಮೆಂಟ್ರಿ ಮಾಡ್ತಿದ್ದ ಕೇದಾರ್ ಜಾಧವ್​ನ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ RCB..!

ಇನ್ನು ಪಂದ್ಯದ ಮಧ್ಯೆ ನಡೆದ ಜಗಳ, ಪಂದ್ಯ ಮುಗಿದ ಬಳಿಕವೂ ಮುಂದುವರೆಯಿತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಜೊತೆ ಮಾತನಾಡುತ್ತಿರುವಾಗ ನವೀನ್ ಉಲ್ ಹಖ್ ಕೊಹ್ಲಿ ಬಳಿ ಬಂದರೂ ಮುಖ ತಿರುಗಿಸಿಕೊಂಡು ಹೋದರು. ಅಲ್ಲದೆ ಕೊಹ್ಲಿ ಜೊತೆ ಮಾತನಾಡಲು ನಿರಾಕರಿಸಿದರು.

ಕೊಹ್ಲಿ-ಗಂಭೀರ್ ಜಗಳ:

ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ತಿಳಿಸಿಗೊಳಿಸಿದರು. ಕೊಹ್ಲಿ ಅವರು ಎಲ್​ಎಸ್​ಜಿ ಪ್ಲೇಯರ್ ಖೈಲ್ ಮೇಯರ್ಸ್ ಜೊತೆ ಮಾತನಾಡುತ್ತಿರುವಾಗ ಗಂಭೀರ್ ಮಧ್ಯ ಪ್ರವೇಶಿಸಿ ಮೇಯರ್ಸ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಇಲ್ಲಿಂದ ಕೊಹ್ಲಿ-ಗಂಭೀರ್ ಜಗಳ ಶುರುವಾಗಿದೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ವೈಫಲ್ಯ ಅನುಭವಿಸಿತು. ಕಠಿಣ ಪಿಚ್​ನಲ್ಲಿ ರನ್ ಗಳಿಸಿಲು ಆರ್​ಸಿಬಿ ಬ್ಯಾಟರ್​ಗಳು ಪರದಾಡಿದರು. ನಿಧಾನಗತಿಯಲ್ಲಿ ಸಾಧಾರಣ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ಬಂದ ಬ್ಯಾಟರ್​ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಫಾಫ್ ಡುಪ್ಲೆಸಿಸ್ 40 ಎಸೆತಗಳಲ್ಲಿ 44 ಹಾಗೂ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಆರ್​ಸಿಬಿ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಎಲ್​ಎಸ್​ಜಿ ಕೂಡ ಪರದಾಡಿತು. ತಂಡದ ಪರ ಕೃಷ್ಣಪ್ಪ ಗೌತಮ್ (23) ಗರಿಷ್ಠ ರನ್ ಕಲೆಹಾಕಿದರು. ಲಖನೌ 19.5 ಓವರ್​ಗಳಲ್ಲಿ 108 ರನ್​ಗೆ ಆಲೌಟ್ ಆಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/virat-kohli-and-naveen-ul-haq-fight-king-kohli-pointed-to-his-shoe-dust-toward-naveen-during-lsg-vs-rcb-match-vb-au48-568044.html

Leave a Reply

Your email address will not be published. Required fields are marked *