IPL 2023: ನೀವು ಯಾವುದಕ್ಕೆ ಅರ್ಹರಾಗಿದ್ದಿರೋ, ಅದನ್ನೇ ಪಡೆಯುತ್ತೀರಿ: ನವೀನ್ ಉಲ್ ಹಕ್ ಪೋಸ್ಟ್

IPL 2023: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯವು ಹಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಪಂದ್ಯ ನಡುವೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಶುರುವಾದ ದೃಷ್ಟಿಯುದ್ಧ ಆ ಬಳಿಕ ಮಾತಿನ ರೂಪಕ್ಕೆ ವಾಲಿತು.ಪಂದ್ಯದ 17ನೇ ಓವರ್​ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಪಿಚ್​ನಲ್ಲೇ ವಾಕ್ಸಮರಕ್ಕೆ ಇಳಿದಿದ್ದರು. ಇದನ್ನು ಗಮನಿಸಿದ ಅಂಪೈರ್ ಮಧ್ಯ ಪ್ರವೇಶಿಸಿದ್ದರು. ಇನ್ನು ಪಂದ್ಯ ಮುಗಿದ ಬಳಿಕ ಹಸ್ತಲಾಘವ ನೀಡುವ ವೇಳೆಯೂ ಇಬ್ಬರು ಮಾತಿನ ಚಕಮಕಿ ನಡೆಸಿದ್ದರು. ಇದಾದ ಬಳಿಕವಷ್ಟೇ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳ ಶುರುವಾಗಿತ್ತು.ಇನ್ನು  ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿಯ ಮುನಿಸನ್ನು ತಿಳಿಗೊಳಿಸಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಪ್ರಯತ್ನಿಸಿದ್ದರು. ಆದರೆ ಅಟಿಟ್ಯೂಡ್ ತೋರಿಸಿದ ನವೀನ್ ನಾಯಕನ ಮಾತಿಗೆ ಬೆಲೆ ನೀಡದೆ ಬೇಕಾಗಿಲ್ಲ ಎಂಬ ರೀತಿಯಲ್ಲಿ ದೂರ ನಡೆದಿದ್ದರು.ಮೈದಾನದಲ್ಲಿನ ನವೀನ್ ಉಲ್ ಹಕ್​ ಅವರ ಈ ಅತಿರೇಕದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಪಿಎಲ್ ಆಡಳಿತ ಮಂಡಳಿ ಲಕ್ನೋ ಆಟಗಾರನಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿತ್ತು. ಈ ದಂಡದ ಬೆನ್ನಲ್ಲೇ ನವೀನ್ ಉಲ್ ಹಕ್ ಹಾಕಿದ ಇನ್​ಸ್ಟಾಗ್ರಾಮ್ ಪೋಸ್ಟ್​ವೊಂದು ವೈರಲ್ ಆಗಿದೆ.ನೀವು ಯಾವುದಕ್ಕೆ ಅರ್ಹರಾಗಿದ್ದಿರೋ, ಅದನ್ನೇ ಪಡೆಯುತ್ತೀರಿ ಎಂದು ಮಾರ್ಮಿಕವಾಗಿ ನವೀನ್ ಉಲ್ ಹಕ್ ಪೋಸ್ಟ್ ಹಾಕಿದ್ದರು. ಮೇಲ್ನೋಟಕ್ಕೆ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ಹಾಕಲಾದ ಈ ಪೋಸ್ಟ್​ಗೆ ಕಿಂಗ್ ಕೊಹ್ಲಿಯ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.ನವೀನ್ ಉಲ್ ಹಕ್ ಅವರ ಇನ್​ಸ್ಟಾಗ್ರಾಮ್ ಖಾತೆಗೆ ದಾಳಿಯಿಟ್ಟ ವಿರಾಟ್ ಕೊಹ್ಲಿ ಅಭಿಮಾನಿಗಳು ಬೈಗುಳದ ಸುರಿಮಳೆ ಸುರಿಸಿದ್ದಾರೆ. ಸುಮಾರು 40 ಸಾವಿರಕ್ಕೂ ಅಧಿಕ ಕಾಮೆಂಟ್​ಗಳು ಮೂಡಿಬಂದಿದ್ದು, ತಕ್ಷಣವೇ ನವೀನ್ ಉಲ್ ಹಕ್ ಕಾಮೆಂಟ್ ಸೆಕ್ಷನ್ ಅನ್ನು ಆಫ್​ ಮಾಡಿದ್ದಾರೆ.ಒಟ್ಟಿನಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಲು ಮುಂದಾಗಿ ಇದೀಗ ನವೀನ್ ಉಲ್ ಹಕ್ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿಯೇ ಅವರ ತಮ್ಮ ಇನ್​ಸ್ಟಾಗ್ರಾಮ್ ಕ್ಯಾಮೆಂಟ್ ಸೆಕ್ಷನ್ ಅನ್ನು ನಿರ್ಬಂಧಿಸಿದ್ದಾರೆ.

source https://tv9kannada.com/photo-gallery/cricket-photos/naveen-ul-haq-comes-up-with-an-instagram-story-response-kannada-news-zp-569304.html

Leave a Reply

Your email address will not be published. Required fields are marked *