IPL 2023: ಈ ಐಪಿಎಲ್​​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದಿರುವ ಬೌಲರ್ ಯಾರು ಗೊತ್ತಾ?

ಐಪಿಎಲ್​​ನ ಅರ್ಧದಷ್ಟು ಪಯಣ ಈಗಾಗಲೇ ಮುಗಿದಿದ್ದು ಇನ್ನುಳಿದ ಭಾಗದ ಪಂದ್ಯಗಳು ಕೂಡ ಭರದಿಂದ ಸಾಗುತ್ತಿವೆ. ಈ ಐಪಿಎಲ್​​ನ ವಿಶೇಷತೆಯೆಂದರೆ ಬೌಲರ್ ಹಾಗೂ ಬ್ಯಾಟರ್​​ ಇಬ್ಬರಿಂದಲೂ ಸಮಬಲದ ಹೋರಾಟ ಕಂಡುಬರುತ್ತಿದೆ. ಅದರಲ್ಲೂ ಭಾರತೀಯ ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇಂತಹ ಹಲವು ದಾಖಲೆಗಳಲ್ಲಿ ಮುಗಿದಿರುವ ಅರ್ಧದಷ್ಟು ಪ್ರಯಾಣದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಬೌಲ್ ಮಾಡಿದ ದಾಖಲೆಯೂ ಸೇರಿದೆ. ಈ ದಾಖಲೆಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶಮಿ ಇದುವರೆಗಿನ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಇದಲ್ಲದೆ ಈ ಐಪಿಎಲ್​ನಲ್ಲಿ ಅತಿ ಹೆಚ್ಚಿನ ಡಾಟ್ ಬಾಲ್‌ ಮಾಡಿದ ದಾಖಲೆಯಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹಿಂದಿಕ್ಕಿದ್ದಾರೆ. ಮೊಹಮ್ಮದ್ ಶಮಿ ಇದುವರೆಗೆ 119 ಡಾಟ್ ಬಾಲ್ ಎಸೆದಿದ್ದು, ಸಿರಾಜ್ 112 ಡಾಟ್ ಬಾಲ್ ಎಸೆದಿದ್ದಾರೆ.ಶಮಿ ಈ ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 35 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಅದರಲ್ಲಿ ಅವರು 119 ಡಾಟ್ ಬಾಲ್ ಎಸೆದು ಒಟ್ಟು 17 ವಿಕೆಟ್ ಪಡೆದಿದ್ದಾರೆ.ಏತನ್ಮಧ್ಯೆ ಆರ್‌ಸಿಬಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿ, 35 ಓವರ್ ಬೌಲ್ ಮಾಡಿದ್ದಾರೆ. ಇದರಲ್ಲಿ ಅವರು 112 ಡಾಟ್ ಬಾಲ್‌ಗಳನ್ನು ಎಸೆದಿದ್ದು, 15 ವಿಕೆಟ್ ಪಡೆದಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಆಡಿರುವ 10 ಪಂದ್ಯಗಳಲ್ಲಿ 34.2 ಓವರ್‌ ಬೌಲ್ ಮಾಡಿ 81 ಡಾಟ್ ಬಾಲ್‌ಗಳೊಂದಿಗೆ 17 ವಿಕೆಟ್ ಉರುಳಿಸಿದ್ದಾರೆ.ಪಂಜಾಬ್ ವೇಗಿ ಅರ್ಷದೀಪ್ ಸಿಂಗ್, ಆಡಿರುವ 10 ಪಂದ್ಯಗಳಲ್ಲಿ 37 ಓವರ್‌ ಬೌಲ್ ಮಾಡಿ 80 ಡಾಟ್ ಬಾಲ್‌ಗಳ ಜೊತೆಗೆ 16 ವಿಕೆಟ್ ಉರುಳಿಸಿದ್ದಾರೆ.ದೆಹಲಿ ಕ್ಯಾಪಿಟಲ್ಸ್ ತಂಡದ ವೇಗಿ ಎನ್ರಿಚ್ ನೋಕಿಯಾ ಆಡಿರುವ 8 ಪಂದ್ಯಗಳಲ್ಲಿ 32 ಓವರ್‌ ಬೌಲ್ ಮಾಡಿದ್ದು ಇದರಲ್ಲಿ, 77 ಡಾಟ್ ಬಾಲ್‌ಗಳೊಂದಿಗೆ 7 ವಿಕೆಟ್ ಉರುಳಿಸಿದ್ದಾರೆ.

source https://tv9kannada.com/photo-gallery/cricket-photos/most-dot-balls-in-ipl-2023-mohammed-shami-leading-the-table-psr-569973.html

Leave a Reply

Your email address will not be published. Required fields are marked *