

ಇಂದು ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು 47 ನೇ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಹೈದರಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಹೈದರಾಬಾದ್ ಮತ್ತು ಕೋಲ್ಕತ್ತಾ ಇದುವರೆಗೆ ತಲಾ 3 ಪಂದ್ಯಗಳನ್ನು ಗೆದ್ದಿವೆ. ಒಂದೇ ವ್ಯತ್ಯಾಸವೆಂದರೆ ಹೈದರಾಬಾದ್ 8 ಪಂದ್ಯಗಳನ್ನು ಆಡಿದ್ದರೆ, ಕೋಲ್ಕತ್ತಾ 9 ಪಂದ್ಯಗಳನ್ನು ಆಡಿದೆ. ಎರಡು ತಂಡಗಳ ನಡುವಿನ ಕೊನೆಯ ಮುಖಾಮುಖಿ ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದು, ಅಲ್ಲಿ ಹ್ಯಾರಿ ಬ್ರೂಕ್ ಶತಕ ಬಾರಿಸಿ ಹೈದರಾಬಾದ್ಗೆ ಗೆಲುವು ತಂದುಕೊಟ್ಟಿದ್ದರು.