R Ashwin: ಆತನಿಗೆ ನನ್ನ ಮೇಲೆ ಕ್ರಶ್ ಇತ್ತೆಂದು ಇಡೀ ಶಾಲೆಗೆ ತಿಳಿದಿತ್ತು: ಅಶ್ವಿನ್ ಜೊತೆಗಿನ ಲವ್ ​ಸ್ಟೋರಿ ಬಿಚ್ಚಿಟ್ಟ ಪ್ರೀತಿ

ರವಿಚಂದ್ರನ್ ಅಶ್ವಿನ್ ಅವರು ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಅಶ್ವಿನ್ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಾರೆ. ಸದ್ಯ ಅಶ್ವಿನ್ ಐಪಿಎಲ್ 2023 ರಲ್ಲಿ ಬ್ಯುಸಿ ಆಗಿದ್ದಾರೆ.ಅಶ್ವಿನ್ ಕ್ರಿಕೆಟ್ ಜಗತ್ತಿನ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದೀಗ ಅವರ ಪತ್ನಿ ಪ್ರೀತಿ, ಅಶ್ವಿನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ನಾವು ಚಿಕ್ಕಂದಿನಿಂದಲೂ ಜೊತೆಗೇ ಇದ್ದೆವು, ಒಂದೇ ಸ್ಕೂಲ್​ನಲ್ಲಿ ಓದಿದೆವು ಎಂಬ ಗುಟ್ಟನ್ನು ಪ್ರೀತಿ ಅಶ್ವಿನ್ ಅವರು ಜಿಯೋ ಸಿನಿಮಾದ ಹ್ಯಾಂಗೌಟ್ ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ.ಸಣ್ಣವರಿದ್ದಾಗ ನಾವು ಒಂದೇ ಶಾಲೆಗೆ ಹೋಗುತ್ತಿದ್ದೆವು. ಮದುವೆಗೂ ಮುನ್ನ ನಮ್ಮಿಬ್ಬರ ನಡುವೆ ಪರಿಚಯವಿತ್ತು. ಶಾಲಾ ದಿನಗಳಿಂದ ಹಿಡಿದು ವಯಸ್ಕರಾಗುವವರೆಗೂ ನಾವು ಜತೆಯಾಗಿಯೇ ಬೆಳೆದೆವು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ.ಅಶ್ವಿನ್ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕ್ರಶ್‌ ಇತ್ತು. ಈ ವಿಚಾರ ಇಡೀ ಶಾಲೆಗೆ ತಿಳಿದಿತ್ತು. ಆಮೇಲೆ ಅವರು ಕ್ರಿಕೆಟ್‌ ಕಡೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಬೇರೆಡೆ ತೆರಳಿದರು. ಹೀಗಿದ್ದರೂ ನಾವಿಬ್ಬರು ಹುಟ್ಟುಹಬ್ಬ, ಫ್ಯಾಮಿಲಿ ಕಾರ್ಯಕ್ರಮದಲ್ಲಿ ಆಗಾಗ ಭೇಟಿ ಆಗುತ್ತಿದ್ದೆವು - ಪ್ರೀತಿ.ತುಂಬಾ ಸಮಯದ ಬಳಿಕ ಅಶ್ವಿನ್ ನನ್ನನ್ನು ಒಂದು ದಿನ ಭೇಟಿ ಆದರು. ಆಗ ನಾನು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಹೀಗೆ ಅಲ್ಲಿಂದ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿ ಆಯಿತು ಎಂದು ಹೇಳಿದ್ದಾರೆ.ಇನ್ನು ಅಶ್ವಿನ್ ಪ್ರಪೋಸ್ ಮಾಡಿದ ಬಗ್ಗೆಯೂ ಪ್ರೀತಿ ಅವರು ತಿಳಿಸಿದ್ದು, ನನ್ನನ್ನು ಅಶ್ವಿನ್ ಒಂದು ದಿನ ನೇರವಾಗಿ ಕ್ರಿಕೆಟ್‌ ಗ್ರೌಂಡ್‌ಗೆ ಕರೆದುಕೊಂಡು ಹೋದರು. ನಾನು ನಿನ್ನನ್ನು ಈ ಜೀವ ಇರುವವರೆಗೆ ಇಷ್ಟಪಡಲು ಬಯಸುತ್ತೇನೆ. ನಮ್ಮಿಬ್ಬರ ಪರಿಚಯವಾಗಿ 10 ವರ್ಷಗಳಾದರೂ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿ ಪ್ರಪೋಸ್ ಮಾಡಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ.ಅಶ್ವಿನ್ ಅವರ ಪ್ರಪೋಸಲ್​ಗೆ ಯೆಸ್ ಎಂದ ಪ್ರೀತಿ ನವೆಂಬರ್ 13, 2011ರಂದು ಮದುವೆ ಆದರು. ಇದೀಗ ಇವರಿಬ್ಬರಿಗೆ ಅಖಿರಾ ಹಾಗೂ ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಜಿಯೋ ಸಿನಿಮಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೀತಿಯನ್ನು ಸಂದರ್ಶನ ಮಾಡಲು ಟೆನಿಸ್ ತಾರೆ ಸಾನಿಯಾ ಮಿರ್ಜಾ, ವೇದಾ ಕೃಷ್ಣಮೂರ್ತಿ ಹಾಗೂ ಡ್ಯಾನಿಶ್ ಶೇಠ್ ಇದ್ದರು.

source https://tv9kannada.com/photo-gallery/cricket-photos/ravichandran-ashwin-wife-prithi-ashwin-open-up-about-their-relationship-love-story-sport-news-in-kannada-vb-570672.html

Leave a Reply

Your email address will not be published. Required fields are marked *