IPL 2023: ಆರ್​ಸಿಬಿ ಸೇರಿದಂತೆ ಈ ನಾಲ್ಕು ತಂಡಗಳು ಪ್ಲೇ ಆಫ್​ಗೇರುತ್ತವೆ ಎಂದ ಟರ್ಬನೇಟರ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಸೀಸನ್​ ಅರ್ಧ ಪ್ರಯಾಣ ಮುಗಿಸಿದ್ದು, ಪ್ಲೇಆಫ್‌ಗಾಗಿ ಇನ್ನೂ 7 ತಂಡಗಳ ನಡುವೆ ನಿಕಟ ಹೋರಾಟವಿದೆ. ಯಾವ ನಾಲ್ಕು ತಂಡಗಳು ಪ್ಲೇಆಫ್ ತಲುಪುತ್ತವೆ ಎಂದು ಹೇಳುವುದು ಇನ್ನೂ ಕಷ್ಟ. ಏತನ್ಮಧ್ಯೆ, ಐಪಿಎಲ್‌ನಲ್ಲಿ ಕಾಮೆಂಟರಿ ಮಾಡುತ್ತಿರುವ ಹರ್ಭಜನ್ ಸಿಂಗ್ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಹರ್ಭಜನ್ ಸಿಂಗ್, ಯಾವ ನಾಲ್ಕು ತಂಡಗಳು ಪ್ಲೇಆಫ್ ತಲುಪುತ್ತವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಭಜ್ಜಿ ಪ್ರಕಾರ ಯಾವ ನಾಲ್ಕು ತಂಡಗಳು ಪ್ಲೇ ಆಫ್​ಗೇರುತ್ತವೆ ಎಂಬುದನ್ನು ನೋಡುವುದಾದರೆ..ಗುಜರಾತ್ ಟೈಟಾನ್ಸ್ರಾಯಲ್ ಚಾಲೆಂಜರ್ಸ್ ಬೆಂಗಳೂರುಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ಇನ್ನು ಪ್ಲೇ ಆಫ್​​ಗೆ ಹೊಗದಿರುವ ತಂಡಗಳ ಬಗ್ಗೆ ಮಾತನಾಡಿದ ಟರ್ಬನೇಟರ್ ರಾಜಸ್ಥಾನ ತಂಡ ಉತ್ತಮವಾಗಿ ಆಡುತ್ತಿದೆ. ಆದರೆ ಅಂತಿಮವಾಗಿ ಕೆಲವು ತಂಡಗಳು ಈ ತಂಡವನ್ನು ಸೋಲಿಸುವುದು ಖಚಿತ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ವಿಸ್ಮಯಕಾರಿ ಸಂಗತಿಯೆಂದರೆ ಹರ್ಭಜನ್ ಸಿಂಗ್ ಹೆಸರಿಸಿದ ನಾಲ್ಕು ತಂಡಗಳ ಪೈಕಿ ರಾಜಸ್ಥಾನ್ ರಾಯಲ್ಸ್ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ರಾಜಸ್ಥಾನ ಕೂಡ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದೆ. ಈ ತಂಡ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದೆ. ಹೀಗಿರುವಾಗ ರಾಜಸ್ಥಾನ್ ರಾಯಲ್ಸ್ ಟಾಪ್ 4ರಲ್ಲಿ ಸ್ಥಾನ ಪಡೆಯದಿರುವುದು ಸ್ವಲ್ಪ ವಿಚಿತ್ರವೆನಿಸುತ್ತದೆ.ಲಕ್ನೋ ತಂಡವೂ ಪಾಯಿಂಟ್ ಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ. ಸದ್ಯ ಈ ತಂಡ 11 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಟಾಪ್ 4 ರೇಸ್‌ನಿಂದ ಹೊರಗುಳಿಯಲು ಲಕ್ನೋ ತುಂಬಾ ಕೆಟ್ಟ ಕ್ರಿಕೆಟ್ ಆಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹರ್ಭಜನ್ ಸಿಂಗ್ ಅವರ ಭವಿಷ್ಯ ಎಷ್ಟು ನಿಖರವಾಗಿದೆ ಎಂಬುದನ್ನು ಕಾಲವೇ ಹೇಳಬೇಕು. ಇನ್ನೂ ಸಾಕಷ್ಟು ಟೂರ್ನಿ ಬಾಕಿ ಉಳಿದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಏರುಪೇರಾಗುವುದು ಖಚಿತ.ಅಂದಹಾಗೆ, ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸ್ಥಿತಿ ತುಂಬಾ ಕೆಟ್ಟದಾಗಿದೆ. ಈಗ ಅವರಿಗೆ ಪ್ಲೇ ಆಫ್ ತಲುಪುವುದು ಕಷ್ಟ ಎನಿಸುತ್ತಿದೆ.

source https://tv9kannada.com/photo-gallery/cricket-photos/ipl-2023-harbhajan-singh-predicts-these-4-teams-likely-to-qualify-into-playoffs-psr-570805.html

Leave a Reply

Your email address will not be published. Required fields are marked *