DC vs RCB, IPL 2023: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್​ಸಿಬಿ-ಡೆಲ್ಲಿ ಕದನ

DC vs RCB, IPL  2023: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್​ಸಿಬಿ-ಡೆಲ್ಲಿ ಕದನ
CSK vs MI and DC vs RCB

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (CSK vs MI) ಮುಖಾಮುಖಿ ಆಗಲಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾಫ್ ಡುಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡವನ್ನು ಎದುರಿಸಲಿದೆ. ಈ ಮ್ಯಾಚ್ ಸಂಜೆ 7.30ಕ್ಕೆ ಪ್ರಾರಂಭವಾಗಲಿದೆ.

ಚೆನ್ನೈ vs ಮುಂಬೈ:

ಸಿಎಸ್​ಕೆ ತಂಡ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಬಲಿಷ್ಠವಾಗಿರುವ ಚೆನ್ನೈ ಆಡಿದ ಹಿಂದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ರುತುರಾಯ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್​ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಬೌಲಿಂಗ್​ನಲ್ಲಿ ಸಿಎಸ್​ಕೆ ಇನ್ನಷ್ಟು ಬಲಿಷ್ಠವಾಗಬೇಕಿದೆ. ತುಶಾರ್ ದೇಶ್​ಪಾಂಡೆ, ಮಹೀಶಾ ತೀಕ್ಷಣ, ಮತೀಶಾ ಪತಿರಾನ, ಆಕಾಶ್ ಸಿಂಗ್ ಇದ್ದು ಜಡೇಜಾ, ಅಲಿ ಸಾಥ್ ನೀಡಬೇಕು.

ಇತ್ತ ಮುಂಬೈ ಪಾಯಿಂಟ್ ಟೇಬಲ್​ನಲ್ಲಿ ಮೇಲೇರುತ್ತಿದೆ. ಆದರೆ, ನಾಯಕ ರೋಹಿತ್ ಶರ್ಮಾ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆ. ಈ ಟೂರ್ನಿಯಲ್ಲಿ ಹಿಟ್​ಮ್ಯಾನ್ ಕಡೆಯಿಂದ ಉತ್ತಮ ಆಟ ಬಂದಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮ್ರೊನ್ ಗ್ರೀನ್ ಹಾಗೂ ಇಶಾನ್ ಕಿಶನ್ ಫಾರ್ಮ್​ನಲ್ಲಿದ್ದು ರನ್ ಕಲೆಹಾಕುತ್ತಿದ್ದಾರೆ. ಗ್ರೀನ್, ಅರ್ಶದ್ ಖಾನ್, ಜೋಫ್ರಾ ಆರ್ಚರ್, ಆಕಾಶ ಮಧ್ವಾಲ್ ಇನ್ನಷ್ಟು ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್​ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.

ODI World Cup 2023: ವಿಶ್ವದ ಅತಿದೊಡ್ಡ ಮೈದಾನದಲ್ಲಿ ಭಾರತ- ಪಾಕ್ ವಿಶ್ವಕಪ್ ಫೈಟ್..!

ಡೆಲ್ಲಿ vs ಆರ್​ಸಿಬಿ:

ಡೆಲ್ಲಿ ಆರಂಭದಲ್ಲಿ ಆಡಿದ 9 ಪಂದ್ಯಗಳ ಪೈಕಿ ಆರರಲ್ಲಿ ಸೋಲುಂಡು ಮೂರು ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಮುಂದಿನ ಸುತ್ತಿಗೆ ತೇರ್ಗಡೆ ಆಗಬೇಕಾದರೆ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಆರಂಭದಲ್ಲಿ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿರಲಿಲ್ಲ. ಆದರೀಗ ವಾರ್ನರ್ ಕೂಡ ಬೇಗನೆ ಔಟಾಗುತ್ತಿದ್ದಾರೆ. ಪೃಥ್ವಿ ಶಾ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಮನೀಶ್ ಪಾಂಡೆ ಕೆಲ ಪಂದ್ಯದಲ್ಲಷ್ಟೆ ಮಿಂಚುತ್ತಿದ್ದಾರೆ. ಮಿಚೆಲ್ ಮಾರ್ಶ, ಸರ್ಫರಾಜ್ ಖಾನ್, ಪಿಲಿಪ್ ಸಾಲ್ಟ್ ಕಡೆಯಿಂದ ಘನೆತೆಗೆ ತಕ್ಕಂತೆ ಆಡುತ್ತಿಲ್ಲ. ಅಕ್ಷರ್ ಪಟೇಲ್ ಮಾತ್ರ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲೂ ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕು.

ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್​ರೇಟ್ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ಸಂತಸದ ಸಂಗತಿ. ಜೋಶ್ ಹೇಜ್ಲೆವುಡ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್​ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ಹೀಗಾಗಿ ಕೇದರ್ ಜಾಧವ್ ಮಧ್ಯಮ ಕ್ರಮಾಂಕದ ಬಲ ತುಂಬುವ ಸಾಧ್ಯತೆ ಇದೆ. ಅನುಜ್ ರಾವತ್ ಬದಲು ಇವರು ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/todays-ipl-matches-csk-vs-mi-face-off-in-the-afternoon-then-delhi-capitals-square-off-with-royal-challengers-bangalore-vb-571198.html

Leave a Reply

Your email address will not be published. Required fields are marked *