Asia Cup 2023: ಭಾರತದ ಬೆಂಬಲಕ್ಕೆ ನಿಂತ ಮತ್ತೆರಡು ದೇಶಗಳು; ಪಾಕಿಸ್ತಾನದಿಂದ ಏಷ್ಯಾಕಪ್ ಶಿಫ್ಟ್?

Asia Cup 2023: ಭಾರತದ ಬೆಂಬಲಕ್ಕೆ ನಿಂತ ಮತ್ತೆರಡು ದೇಶಗಳು; ಪಾಕಿಸ್ತಾನದಿಂದ ಏಷ್ಯಾಕಪ್ ಶಿಫ್ಟ್?
Asia Cup 2023 SLC and BCB join hands with BCCI over Indias stance on not to travel Pakistan

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾಕಪ್ (Asia Cup 2023)​ ಕ್ರಿಕೆಟ್ ಟೂರ್ನಿ ಎಲ್ಲಿ ನಡೆಯಬೇಕು ಎಂಬ ಗೊಂದಲ ಸದ್ಯಕ್ಕಂತ್ತು ಇತ್ಯರ್ಥಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಏಷ್ಯಾಕಪ್ ಆತಿಥ್ಯ ವಹಿಸುವ ಹಕ್ಕು ಪಡೆದುಕೊಂಡಿದ್ದ ಪಾಕಿಸ್ತಾನ (Pakistan Cricket Board), ಬಿಸಿಸಿಐ ಅನ್ನು ಎದುರು ಹಾಕಿಕೊಂಡ ತಪ್ಪಿಗೆ ಇದೀಗ ಟೂರ್ನಿ ಆಯೋಜನೆಯ ಹಕ್ಕನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈಗಾಗಲೇ ತಿಳಿದಿರುವಂತೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದರೆ ಭಾರತ ತಂಡ ಆಡಲು ಹೋಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಬಿಸಿಸಿಐ (BCCI) ಈಗಾಗಲೇ ಸ್ಪಷ್ಟನೆ ನೀಡಿದೆ. ಕ್ರಿಕೆಟ್ ಬಿಗ್​ಬಾಸ್​ಗಳ ಈ ನಿರ್ಧಾರದಿಂದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುಂತೆ ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಆದರೀಗ ಬಿಸಿಸಿಐ ಮುಂದೆ ಪಾಕ್ ತಂತ್ರ ಪಲಿಸುತ್ತಿಲ್ಲ. ಅಲ್ಲದೆ ಪಾಕ್ ಹೋರಾಟಕ್ಕೆ ನೆರೆಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ಬೆಂಬಲ ನೀಡುತ್ತಿಲ್ಲ. ಪಾಕಿಸ್ತಾನ್ ಜಿಯೋ ಸ್ಪೋರ್ಟ್ಸ್ ವರದಿ ಪ್ರಕಾರ, ಪಾಕಿಸ್ತಾನದಲ್ಲಿ ಏಷ್ಯಾಕಪ್‌ ಆಯೋಜಿಸಲು ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸಾಥ್ ನೀಡುತ್ತಿಲ್ಲ. ಬದಲಿಯಾಗಿ ಈ ಎರಡೂ ದೇಶಗಳು ಬಿಸಿಸಿಐಗೆ ಬೆಂಬಲವಾಗಿ ನೆಲ್ಲಲು ನಿರ್ಧರಿಸಿವೆ ಎಂದು ವರದಿಯಾಗಿದೆ.

ಬಿಸಿಸಿಐ ಇದಕ್ಕೆ ಒಪ್ಪುತ್ತಿಲ್ಲ

ಏಷ್ಯಾಕಪ್ ಆತಿಥ್ಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಶೀತಲ ಸಮರ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಪಾಕಿಸ್ತಾನಕ್ಕೆ ಟೀಂ ಇಂಡಿಯಾವನ್ನು ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡುತ್ತಿಲ್ಲ. ಹೀಗಾಗಿ ಪಾಕಿಸ್ತಾನ, ಬಿಸಿಸಿಐಗೆ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದೆ. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇದನ್ನು ಅನುಮೋದಿಸಲಿಲ್ಲ. ಹೈಬ್ರಿಡ್ ಮಾದರಿಯಂತೆ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದ್ದು, ಯುಎಇಯಲ್ಲಿ ಭಾರತಕ್ಕೆ ಸಂಬಂಧಿಸಿದ ಪಂದ್ಯಗಳು ಮಾತ್ರ ನಡೆಯಲಿವೆ. ಆದರೆ, ಬಿಸಿಸಿಐ ಇದಕ್ಕೆ ಒಪ್ಪುತ್ತಿಲ್ಲ. ಇಡೀ ಏಷ್ಯಾಕಪ್ ಅನ್ನು ತಟಸ್ಥ ಸ್ಥಳವಾಗಿ ನಡೆಸಬೇಕು ಎಂದು ಭಾರತೀಯ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.

IPL 2023: ಸಿಎಸ್​ಕೆ ಡ್ರೆಸಿಂಗ್​​ ರೂಂನಲ್ಲಿ ಕಿಂಗ್ ಕೊಹ್ಲಿ ಗುಣಗಾನ ಮಾಡಿದ ಧೋನಿ! ವಿಡಿಯೋ

ಒತ್ತಡಕ್ಕೆ ಮಣಿಯದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಂ ಸೇಥಿ, ಪಾಕಿಸ್ತಾನ ಏಷ್ಯಾಕಪ್‌ಗೆ ಆತಿಥ್ಯ ವಹಿಸದಿದ್ದರೆ ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಭೆದರಿಕೆಯೊಡ್ಡಲು ಆರಂಭಿಸಿದ್ದಾರೆ. ಈ ಹಿಂದೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತ್ತು. ಒಂದು ವೇಳೆ ಪಿಸಿಬಿ ಸ್ವಂತವಾಗಿ ಏಷ್ಯಾಕಪ್ ಆಯೋಜಿಸಲು ಒಪ್ಪದಿದ್ದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟೂರ್ನಿಯ ಆಯೋಜನೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಏಷ್ಯಾಕಪ್​ನಲ್ಲಿ ಒಟ್ಟು 13 ಪಂದ್ಯಗಳು

ಈ ಬಾರಿ ಟೂರ್ನಿಯಲ್ಲಿ ಒಟ್ಟು 6 ತಂಡಗಳಿದ್ದು, ಈ ಟೀಮ್​​ಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್​ ಪಂದ್ಯಗಳು ನಡೆಯಲಿದೆ. ಇದಾದ ಬಳಿಕ ಸೂಪರ್-4 ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದಲ್ಲಿ 6 ಪಂದ್ಯಗಳು ನಡೆದರೆ, ಸೂಪರ್-4 ಹಂತದಲ್ಲಿ ಫೈನಲ್ ಸೇರಿ 7 ಪಂದ್ಯಗಳನ್ನು ನಡೆಯಲಿದೆ. ಅಂದರೆ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಲಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/asia-cup-2023-slc-and-bcb-join-hands-with-bcci-over-indias-stance-on-not-to-travel-pakistan-psr-573254.html

Leave a Reply

Your email address will not be published. Required fields are marked *