ರೆಡ್ಡಿ ಜೊತೆ ಪ್ರತಾಪ್ ಗೌಡ ರಾತ್ರಿ ಮಾತುಕತೆ – ಬಿಜೆಪಿ ಬಿಟ್ಟು ರೆಡ್ಡಿ ಪಕ್ಷ ಸೇರ್ತಾರಾ..?

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆದಷ್ಟು ಬಿಜೆಪಿ ಪಕ್ಷದಲ್ಲಿರುವುದಕ್ಕೆ ಪ್ರಯತ್ನ ಪಟ್ಟರು. ಅಲ್ಲಿಂದಾನೇ ನಿಲ್ಲುವುದಕ್ಕೆ ಟ್ರೈ ಮಾಡಿದರು. ಆದರೂ ಆಗದೆ ಇದ್ದಾಗ ಕೊನೆಯಲ್ಲಿ ತಮ್ಮದೇ ಪಕ್ಷವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದರು. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ನಿನ್ನೆ ಅಧಿಕೃತವಾಗಿ ಘೋಷಣೆಯಾಗಿದೆ. ತಮ್ಮದೆ ಪಕ್ಷದಿಂದಾನೇ ಮುಂದಿನ ಚುನಾವಣೆಯಲಗಲಿ ಸ್ಪರ್ಧೆ ನಡೆಸಲಿದ್ದಾರೆ. ಅಷ್ಟೇ ಯಾಕೆ ತಮ್ಮ ಕುಟುಂಬಸ್ಥರನ್ನು ರಾಜಕೀಯಕ್ಕೆ ತರುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ನಡುವೆ ರಾಯಚೂರಿನ ಮಾಜಿ ಶಾಸಕರ ಜೊತೆಗೆ ರಾತ್ರೋ ರಾತ್ರಿ ಡೀಪಗ ಡಿಸ್ಕಷನ್ ಕೂಡ ನಡೆದಿದೆ. ಕಾಂಗ್ರೆಸ್ ನಲ್ಲಿದ್ದಾಗ ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಮೂರು ಬಾರಿ ಸೋಲಿಲ್ಲದ ಸರದಾರನಾಗಿ ಗೆಲುವು ಕಂಡಿದ್ದರು ಪ್ರತಾಪ್ ಗೌಡ ಪಾಟೀಲ್. ಆದರೆ ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಬಿಜೆಪಿಗೆ ಬಂದ ಬಳಿಕ ಮತ್ತೆ ಮಸ್ಕಿಯಿಂದಾನೇ ಸ್ಪರ್ಧೆ ಮಾಡಿದ್ದರು. ಆಗ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಹೀಗಾಗಿ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಹೀಗಾಗಿ ಪಕ್ಷ ಬದಲಾವಣೆ ಮಾಡುವ ಆಲೋಚನೆಯಲ್ಲಿದ್ದರು ಎನ್ನಲಾಗುತ್ತಿದೆ. ಇದೇ ವೇಳೆ ಜನಾರ್ದನ ರೆಡ್ಡಿ ಜೊತೆ ಮೀಟಿಂಗ್ ಮಾಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.

The post ರೆಡ್ಡಿ ಜೊತೆ ಪ್ರತಾಪ್ ಗೌಡ ರಾತ್ರಿ ಮಾತುಕತೆ – ಬಿಜೆಪಿ ಬಿಟ್ಟು ರೆಡ್ಡಿ ಪಕ್ಷ ಸೇರ್ತಾರಾ..? first appeared on Kannada News | suddione.

from ರಾಜ್ಯ ಸುದ್ದಿ – Kannada News | suddione https://ift.tt/6ZALuJN
via IFTTT

Views: 0

Leave a Reply

Your email address will not be published. Required fields are marked *