Skip to content
  • Sunday, July 13, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • Dinesh Karthik: ಆರ್​ಸಿಬಿಗೆ ದೊಡ್ಡ ಆಘಾತ: ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು
Sports

Dinesh Karthik: ಆರ್​ಸಿಬಿಗೆ ದೊಡ್ಡ ಆಘಾತ: ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು

May 11, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೈಫಲ್ಯ ಮುಂದುವರೆದಿದೆ. ಆಡಿರುವ 11 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಆರು ಪಂದ್ಯಗಳಲ್ಲಿ ಸೋಲು ಕಂಡು 10 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ.ಪಾಯಿಂಟ್ ಟೇಬಲ್​ನಲ್ಲಿ ಮೈನಸ್ ರನ್​ರೇಟ್​ನಲ್ಲಿರುವ ಆರ್​ಸಿಬಿಗೆ ಪ್ಲೇ ಆಫ್ ಹಾದಿ ದುರ್ಗಮವಾಗಿದೆ. ಉಳಿದಿರುವ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆ ಸಾಧ್ಯ. ಇದರ ಜೊತೆಗೆ ಇತರೆ ತಂಡಗಳ ಫಲಿತಾಂಶ ಕೂಡ ಮುಖ್ಯವಾಗುತ್ತದೆ.ಹೀಗೆ ಸಂಕಷ್ಟದಲ್ಲಿರುವ ಆರ್​ಸಿಬಿಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರು-ಪೇರಾಗಿದೆ. ಅನಾರೋಗ್ಯದಿಂದ ಕಾರ್ತಿಕ್ ಬಳಲುತ್ತಿದ್ದಾರೆ.ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು. 18 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್​ನಿಂದ 30 ರನ್ ಗಳಿಸಿದ್ದರು. ಇಲ್ಲಿ ಔಟಾಗಿ ಪೆವಿಲಿಯನ್​ನತ್ತ ತೆರಳುತ್ತಿರುವಾಗ ಕಾರ್ತಿಕ್ ಜೋರಾಗಿ ಕೆಮ್ಮುತ್ತಿರುವುದು ಕಂಡುಬಂದಿದೆ.ಮುಂಬೈ ವಿರುದ್ಧದ ಪಂದ್ಯದ ಮಧ್ಯೆಯೇ ಕಾರ್ತಿಕ್ ಅವರ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಹೀಗಾಗಿ ಅವರು ಆರ್​ಸಿಬಿ ಫೀಲ್ಡಿಂಗ್ ಮಾಡುವಾಗ ಮೈದಾನಕ್ಕೆ ಬರಲಿಲ್ಲ. ಈ ಬಗ್ಗೆ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಹಿತಿ ನೀಡಿದ್ದಾರೆ.''ಪಂದ್ಯದ ಮಧ್ಯೆ ದಿನೇಶ್ ಕಾರ್ತಿಕ್ ಅವರು ಅಸ್ವಸ್ಥರಾಗಿದ್ದರು. ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಿತ್ತು. ಔಟಾಗಿ ವಾಪಸು ಬರುವಾಗ ವಾಂತಿ ಕೂಡ ಮಾಡಿಕೊಂಡರು. ಔಷಧಿ ನೀಡಲಾಗಿದೆ. ಅವರು ನಮ್ಮ ತಂಡದ ಪ್ರಮುಖ ಸದಸ್ಯರರು. ಪಂದ್ಯದಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸುತ್ತಾರೆ," ಎಂದು ಬಂಗಾರ್ ಹೇಳಿದ್ದಾರೆ.ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಈ ಪಂದ್ಯ ಏರ್ಪಡಿಸಲಾಗಿದ್ದು, ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಈ ಹೊತ್ತಿಗೆ ಕಾರ್ತಿಕ್ ಗುಣಮುಖರಾಗುತ್ತಾ ನೋಡಬೇಕು.

source https://tv9kannada.com/photo-gallery/cricket-photos/dinesh-karthik-was-feeling-unwell-after-mi-vs-rcb-clash-in-ipl-2023-doubtfull-for-rr-vs-rcb-match-vb-575243.html

Tags: samagrasuddi, ಸಮಗ್ರ ಸುದ್ದಿ

Post navigation

MS Dhoni: ಎಂಎಸ್ ಧೋನಿ ಸಿಕ್ಸ್ ಸಿಡಿಸಿದಾಗ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ಝೀವಾ ಏನು ಮಾಡಿದ್ರು ನೋಡಿ
IPL Points Table 2023: ರೋಚಕ ಘಟ್ಟದತ್ತ ಐಪಿಎಲ್ 2023: ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್-ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

Leave a Reply Cancel reply

Your email address will not be published. Required fields are marked *

Recent Comments

  1. Dayananda Patel T on 🛑 ಬುಧವಾರ ಭಾರತ್ ಬಂದ್ : 25 ಕೋಟಿಗೂ ಅಧಿಕ ಕಾರ್ಮಿಕರು ಸಜ್ಜು | ದೇಶವ್ಯಾಪಿ ಪ್ರತಿಭಟನೆಗೆ ಕರೆ 🛑July 8, 2025

    Date and day confused

  2. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  3. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  4. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  5. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

CITIES

Cities

ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳ ಮಾಲೀಕರಿಗೆ ಸಿಹಿ ಸುದ್ದಿ: ಶೇಕಡಾ 1 ಮಾತ್ರ ತೆರಿಗೆ

July 12, 2025
samagrasuddi

📅 ದಿನಾಂಕ: ಜುಲೈ 12, 2025📍 ಸ್ಥಳ: ಬೆಂಗಳೂರು, ಕರ್ನಾಟಕ ಯುಪಿಐ (UPI) ಮೂಲಕ 40 ಲಕ್ಷಕ್ಕಿಂತ ಹೆಚ್ಚು ಹಣದ ವ್ಯವಹಾರ ನಡೆಸಿದ ಸಣ್ಣ ಅಂಗಡಿಗಳಿಗೆ ತೆರಿಗೆ ಇಲಾಖೆ ಸ್ಪಷ್ಟನೆ ಇತ್ತೀಚೆಗಷ್ಟೆ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಬೀಡಿ ಅಂಗಡಿಗಳು ಯುಪಿಐ ಮೂಲಕ…

Cities

“ಹಾಸನ ಜಿಲ್ಲೆಯಲ್ಲಿ ಹಠಾತ್ ಸಾವುಗಳ ಪತ್ತೆ: ಶೇ.75ಕ್ಕೂ ಹೆಚ್ಚು ಪ್ರಕರಣಗಳಿಗೆ ಹೃದಯ ಸಂಬಂಧಿ ಸಮಸ್ಯೆ ಕಾರಣ”

July 11, 2025
samagrasuddi
Chitradurga Cities

🛣 ಬೆಂಗಳೂರು–ಚಿತ್ರದುರ್ಗ ನಡುವಿನ ಪ್ರಯಾಣದ ಅಂತರ ಇದೀಗ 110 ಕಿ.ಮೀ. ಬದಲಾಗಲಿದೆ.

July 8, 2025
samagrasuddi
Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

You may Missed

Health

🧠 ಮೆದುಳಿಗೆ ಮಿತವಾದ ಆಹಾರ: MIND ಡೈಟ್‌ ನಿಂದ ಮೆಮೊರಿ ಮತ್ತು ಆರೋಗ್ಯಕ್ಕೆ ಬಲ!

July 12, 2025
samagrasuddi
Health

🩺 HEALTH | ಹೆಚ್ಚಾಗುತ್ತಿದೆ ಹೃದಯಾಘಾತ: ಕೆಟ್ಟ ಕೊಲೆಸ್ಟ್ರಾಲ್‌ ಹೋಗಿಸೋಕೆ ಈ ಆಹಾರ ಪದಾರ್ಥಗಳನ್ನು ಸೇವಿಸಿ!

July 11, 2025
samagrasuddi
Health

ಅಂಟೀತು ಶಿಲೀಂಧ್ರ (ಫಂಗಸ್) ರೋಗ! – ಜಾಗರೂಕರಾಗಿ

July 10, 2025
samagrasuddi
Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಗುರುಪೂರ್ಣಿಮೆ ಆಚರಣೆ: ಯೋಗ ಸಾಧಕರಿಗೆ ಸನ್ಮಾನ
  • ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳ ಮಾಲೀಕರಿಗೆ ಸಿಹಿ ಸುದ್ದಿ: ಶೇಕಡಾ 1 ಮಾತ್ರ ತೆರಿಗೆ
  • ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸಿ ಚುನಾವಣೆ ಗೆಲ್ಲೋಣ: ಸಚಿವ ಸಂತೋಷ ಲಾಡ್ ಕರೆ.
  • ಜಿ.ಎಸ್.ಟಿ ದೇಶದ ಬಡವರಿಗೆ ಆಪತ್ತು, ಸಾಹುಕಾರರಿಗೆ ಲಾಭ: ಸಚಿವ ಸಂತೋಷ ಲಾಡ್ ತೀಕ್ಷ್ಣ ವಾಗ್ದಾಳಿ.
  • ಉಚಿತ ಶ್ರವಣ ತಪಾಸಣಾ ಶಿಬಿರ ಹಾಗೂ ಶೇ. 40 ರಷ್ಟು ರಿಯಾಯಿತಿಯ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ಜು.27-28 ರಂದು
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress