IPL 2023: ಕೊಂಚ ತಾಳ್ಮೆ ಇರಲಿ..ನಮ್ಮವರೂ ಕೂಡ ಅಬ್ಬರಿಸುತ್ತಾರೆ: RCB ಕೋಚ್ ಸಂಜಯ್ ಬಂಗಾರ್

IPL 2023: ಐಪಿಎಲ್​ನ 16ನೇ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 6 ಸೋಲನುಭವಿಸಿರುವ ಆರ್​ಸಿಬಿ ಇದೀಗ ಪ್ಲೇಆಫ್ ಪ್ರವೇಶದ ಲೆಕ್ಕಾಚಾರದಲ್ಲಿದೆ. ಮುಂದಿನ 3 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ RCB ಮುಂದಿದೆ. ಆದರೆ ಇದಕ್ಕೂ ಮುನ್ನ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ 16 ಅಂಕಗಳನ್ನು ಮಾತ್ರ ಪಡೆಯಬೇಕು. ಒಂದು ವೇಳೆ ಅಗ್ರ ನಾಲ್ಕು ತಂಡಗಳು 16 ಕ್ಕಿಂತ ಹೆಚ್ಚಿನ ಅಂಕ ಪಡೆದ ಆರ್​ಸಿಬಿ ತಂಡದ ಪ್ಲೇಆಫ್ ಆಸೆ ಅಂತ್ಯಗೊಳ್ಳಲಿದೆ.ಇತ್ತ ಮುಂದಿನ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ತಂಡ ಮುಖ್ಯ ಕೋಚ್ ಸಂಜಯ್ ಬಂಗಾರ್. ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಬಂಗಾರ್, ಆರ್​ಸಿಬಿ ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸವಿದೆ. ಅಲ್ಲದೆ ಪ್ಲೇಆಫ್ ಪ್ರವೇಶಿಸುವ ನಂಬಿಕೆಯಿದೆ ಎಂದಿದ್ದಾರೆ.ಇದೇ ವೇಳೆ ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದ ಬಗ್ಗೆ ಕೂಡ ಸಂಜಯ್ ಬಂಗಾರ್ ಮಾತನಾಡಿದ್ದಾರೆ. ಯುವ ಆಟಗಾರರಿಂದ ಉತ್ತಮ ಪ್ರದರ್ಶನದ ನಿರೀಕ್ಷೆ ಮೇಲೆ ಕೊಂಚ ತಾಳ್ಮೆ ಇರಲಿ. ಅವರು ಕೂಡ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ.ನೀವು ಕೆಕೆಆರ್ ತಂಡದ ರಿಂಕು ಸಿಂಗ್ ಅವರನ್ನೇ ತೆಗೆದುಕೊಳ್ಳಿ. ರಿಂಕು ಕಳೆದ 3-4 ವರ್ಷಗಳಿಂದ ಕೆಕೆಆರ್​ ತಂಡದಲ್ಲಿದ್ದಾರೆ. ಕೆಕೆಆರ್ ತಂಡ ಯುವ ಆಟಗಾರನಿಗೆ ನೀಡಿದ ಸಮಯವಕಾಶದಿಂದಾಗಿ ನೀಡಿದ ಈಗ ಫಲ ಸಿಕ್ಕಿದೆ. ಈ ಸೀಸನ್​ನಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇದೇ ರೀತಿ ಆರ್​ಸಿಬಿ ಆಟಗಾರರ ಮೇಲೂ ಕೊಂಚ ತಾಳ್ಮೆ ಇರಲಿ. ನಮ್ಮ ಆಟಗಾರರು ಕೂಡ ಅಬ್ಬರಿಸಲಿದ್ದಾರೆ ಎಂದು ಆರ್​ಸಿಬಿ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ತಿಳಿಸಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್​ಸಿಬಿ, ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆಯಲಿದೆ. ಆದರೆ ಅದಕ್ಕೂ ಮುನ್ನ ಇತರೆ ತಂಡಗಳ ಫಲಿತಾಂಶಗಳು ಕೂಡ ಆರ್​ಸಿಬಿ ತಂಡದ ಪ್ಲೇಆಫ್ ಹಾದಿಯನ್ನು ನಿರ್ಧರಿಸಲಿದೆ.

source https://tv9kannada.com/photo-gallery/cricket-photos/ipl-2023-you-have-to-be-patient-with-younger-players-rcb-coach-kannada-news-zp-575613.html

Leave a Reply

Your email address will not be published. Required fields are marked *