Yuzvendra Chahal: ಹಳೆಯ ದಾಖಲೆಗಳೆಲ್ಲಾ ಉಡೀಸ್: ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಚಹಾಲ್

IPL 2023: ಐಪಿಎಲ್​ನ 56ನೇ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ವಿರುದ್ಧ ಚಹಾಲ್ 11ನೇ ಓವರ್​ನಲ್ಲಿ ದಾಳಿಗಿಳಿದಿದ್ದರು.ತಮ್ಮ ಮೊದಲ ಓವರ್​ನಲ್ಲೇ ಕೆಕೆಆರ್ ರಾಣಾ ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು.ಸಿಎಸ್​ಕೆ, ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಒಟ್ಟು 158 ಇನಿಂಗ್ಸ್​ಗಳಲ್ಲಿ 183 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಯುಜ್ವೇಂದ್ರ ಚಹಾಲ್ ಅಳಿಸಿ ಹಾಕಿದ್ದಾರೆ.ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್, ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 142 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಚಹಾಲ್ 187 ವಿಕೆಟ್ ಕಬಳಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.ವಿಶೇಷ ಎಂದರೆ ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಕೂಡ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್​ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು.ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದ ಚಹಾಲ್ ಅವರನ್ನು 2021 ರ ಬಳಿಕ ತಂಡದಿಂದ ಕೈ ಬಿಡುವ ಮೂಲಕ ಆರ್​ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಚಹಾಲ್ ಕಳೆದ ಸೀಸನ್​ನಲ್ಲಿ 27 ವಿಕೆಟ್ ಕಬಳಿಸಿದ್ದರು. ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 21 ವಿಕೆಟ್ ಉರುಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

source https://tv9kannada.com/photo-gallery/cricket-photos/yuzvendra-chahal-highest-wicket-taker-in-ipl-history-kannada-news-zp-575881.html

Leave a Reply

Your email address will not be published. Required fields are marked *