ಚಿತ್ರದುರ್ಗ, (ಮೇ.13) : ನಗರರದ ಪ್ರತಿಷ್ಠಿತ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸಿ.ಬಿ.ಎಸ್.ಇ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಸತತವಾಗಿ 6ನೇ ಬಾರಿ ಶೇ 100 ರಷ್ಟು ಫಲಿತಾಂಶ ಸಾಧಿಸಿದ್ದಾರೆ.
ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕೃಪಾಂಕ್ ರೆಡ್ಡಿ ಜಿ. ಎಚ್ ಶೇ 88.2 ಮತ್ತು ನೂತನ್ ರೆಡ್ಡಿ ಎಂ.ಎಸ್ ಶೇ 85.2 ರಷ್ಟು ಅಂಕಗಳನ್ನು ಪಡೆದಿದ್ದಾರೆ. 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಪಡೆದಿದ್ದಾರೆ.
ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಾದ ಎಂ. ಎ. ಸೇತುರಾಮ್, ಶ್ರೀಹರ್ಷ. ಎಸ್, ಶ್ರೀಮತಿ ಸೀಮಾ. ಎಸ್, ಪ್ರಾಂಶುಪಾಲರು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
The post CBSE 10th Result 2023 : ಚಿತ್ರದುರ್ಗದ ಸ್ಟೆಪ್ಪಿಂಗ್ ಸ್ಟೋನ್ಸ್ ಶಾಲೆಗೆ ಸತತ 6ನೇ ವರ್ಷವೂ ಶೇಕಡ 100% ಫಲಿತಾಂಶ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/MlLDzWP
via IFTTT