The Kerala story ಸಿನಿಮಾ ನಟಿಗೆ ಅಪಘಾತ : ಈಗ ಹೇಗಿದ್ದಾರೆ ಅದಾ ಶರ್ಮಾ..?

 

 

ದಿ ಕೇರಳ ಸ್ಟೋರಿ ಸಿನಿಮಾ ಸಿಕ್ಕಾಪಟ್ಟೆ ವಿವಾದಕ್ಕೆ ಒಳಗಾಗಿರುವ ಸಿನಿಮಾ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟಿ ಅದಾ ಶರ್ಮಾಗೆ ಅಪಘಾತವಾಗಿದೆ ಎಂದು ತಿಳಿದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ನಿನ್ನೆ ಅಪಘಾತ ಸಂಭವಿಸಿದ್ದು, ಇಂದು ನಟಿ ಅದಾ ಶರ್ಮಾ ಅವರೇ ತಮ್ಮ‌ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಅದಾ‌ ಶರ್ಮಾ, ಯಾರು ಆತಂಕಕ್ಕೆ ಒಳಗಾಗುವುದು ಬೇಡ. ನಾನು ಆರಾಮವಾಗಿ ಇದ್ದೇನೆ. ರಸ್ತೆ ಅಪಘಾತದ ಸುದ್ದಿ ಕೇಳಿ ಸಿಕ್ಕಾಪಟ್ಟೆ‌ಮೆಸೇಜ್ ಗಳು ಬಂದಿವೆ. ಆದರೆ ಅಭಿಮಾನಿಗಳು ಆತಂಕಗೊಳ್ಳುವುದು ಬೇಡ. ನಾನು ಆರಾಮವಾಗಿದ್ದೇನೆ. ಅಷ್ಟೇ ಅಲ್ಲ, ನನ್ನ ತಂಡದವರು ಆರಾಮವಾಗಿದ್ದಾರೆ. ಯಾರಿಗೂ ಗಂಭೀರ ಗಾಯವಾಗಿಲ್ಲ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.

ದಿ‌ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಹುಡುಗಿ ಮತಾಂತರಗೊಂಡು ಮುಸ್ಲಿಂ ಆಗುವ ಕಥೆ. ಈ ಸಿನಿಮಾದಲ್ಲಿ ಅದಾ ಶರ್ಮಾ, ಆ ಪಾತ್ರ ಮಾಡಿದ್ದಾರೆ. ಹೀಗಾಗಿ ಅದಾ ಶರ್ಮಾಗೆ ಈಗಾಗಲೇ ಸಾಕಷ್ಟು ಜೀವ ಬೆದರಿಕೆಗಳು ಬರುತ್ತಿವೆ.

The post The Kerala story ಸಿನಿಮಾ ನಟಿಗೆ ಅಪಘಾತ : ಈಗ ಹೇಗಿದ್ದಾರೆ ಅದಾ ಶರ್ಮಾ..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/9uZiHDg
via IFTTT

Leave a Reply

Your email address will not be published. Required fields are marked *