Skip to content
  • Monday, March 30, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • IPL 2023: ಹೀಗಾದ್ರೆ RCB vs LSG ಮತ್ತೆ ಮುಖಾಮುಖಿ
Sports

IPL 2023: ಹೀಗಾದ್ರೆ RCB vs LSG ಮತ್ತೆ ಮುಖಾಮುಖಿ

May 15, 2023
samagrasuddi

IPL 2023: ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಪ್ರಮುಖ ತಂಡಗಳ ಪ್ಲೇಆಫ್ ಲೆಕ್ಕಾಚಾರಗಳು ಕೂಡ ಶುರುವಾಗಿದೆ. ಈ ಲೆಕ್ಕಾಚಾರದೊಂದಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮತ್ತೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.ಈ ಹಿಂದೆ CSK ತಂಡವನ್ನು ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿ ಕಾಣುತ್ತಿದ್ದ RCB ಅಭಿಮಾನಿಗಳಿಗೆ ಇದೀಗ LSG ಹೊಸ ಪ್ರತಿಸ್ಫರ್ಧಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ vs ಲಕ್ನೋ ನಡುವಣ ಪಂದ್ಯ. 
ಈ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿದ ಲಕ್ನೋ ಆಟಗಾರರು ಮೈಮರೆತು ಸಂಭ್ರಮಿಸಿದ್ದರು. ಅಲ್ಲದೆ LSG ತಂಡದ ಮೆಂಟರ್ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳನ್ನು ಕೆಣಕಿದ್ದರು.ಆದರೆ ನಿರೀಕ್ಷೆಯಂತೆ 2ನೇ ಮುಖಾಮುಖಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಸೇಡು ತೀರಿಸಿಕೊಂಡಿತು. ಅದರಲ್ಲೂ ಏಟಿಗೆ ಎದಿರೇಟು ಎಂಬಂತೆ ಮುಟ್ಟಿ ನೋಡಿಕೊಳ್ಳುವಂತಹ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ಲೆಕ್ಕ ಚುಕ್ತಾ ಮಾಡಿದ್ದರು. ಇದೀಗ ಉಭಯ ತಂಡಗಳ ನಡುವಣ ಮತ್ತೊಂದು ಮುಖಾಮುಖಿಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಕಾತುರತೆ ಹೆಚ್ಚಲು ಮುಖ್ಯ ಕಾರಣ ಪ್ರಸ್ತುತ ಪಾಯಿಂಟ್ಸ್ ಟೇಬಲ್​. ಅಂದರೆ ಪ್ಲೇಆಫ್ ರೇಸ್​ನಲ್ಲಿ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿದ್ದು, ಹೀಗಾಗಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ 2 ಪಂದ್ಯಗಳನ್ನು ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ.ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರಿಂದ ಆರ್​ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಅಂದರೆ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಮುಂಬೈ ಮುಂದಿನ ಮ್ಯಾಚ್​ನಲ್ಲಿ ಲಕ್ನೋ ವಿರುದ್ಧ ಸೋತು, ಕೊನೆಯ ಪಂದ್ಯದಲ್ಲಿ ಗೆದ್ದರೆ 16 ಪಾಯಿಂಟ್ಸ್ ಆಗಲಿದೆ.
ಹಾಗೆಯೇ 12 ಪಾಯಿಂಟ್ಸ್ ಹೊಂದಿರುವ ಆರ್​ಸಿಬಿ ತಂಡವು ಉಳಿದಿರುವ 2 ಪಂದ್ಯಗಳಲ್ಲಿ ಉತ್ತಮ ನೆಟ್ ರನ್​ ರೇಟ್​ನೊಂದಿಗೆ ಭರ್ಜರಿ ಜಯ ಸಾಧಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರಯಲಿದೆ.
ಇನ್ನು ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ  ಪ್ಲೇಆಫ್ ಪ್ರವೇಶಿಸಲಿದೆ. ಹಾಗೆಯೇ ಸಿಎಸ್​ಕೆ ತಂಡವು ಮುಂದಿನ ಪಂದ್ಯ ಗೆದ್ದರೆ 17 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನ ಪಡೆಯಲಿದೆ.ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಬಹುದು. ಹಾಗೆಯೇ ಆರ್​ಸಿಬಿ ಉಳಿದಿರುವ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನಕ್ಕೇರಬಹುದು.ಇಲ್ಲಿ ಪ್ಲೇಆಫ್ ಹಂತದಲ್ಲಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ ಪಂದ್ಯಗಳನ್ನಾಡಲಿದೆ. ಹಾಗೆಯೇ 3ನೇ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ.ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದರೆ ಹಾಗೂ ಆರ್​ಸಿಬಿ 4ನೇ ಸ್ಥಾನ ಪಡೆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಒಂದು ವೇಳೆ ಲಕ್ನೋ 2ನೇ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್​ನಲ್ಲಿ ಸೋತರೆ, ಎಲಿಮಿನೇಟರ್​ನಲ್ಲಿ ಗೆದ್ದು ಆರ್​ಸಿಬಿ 2ನೇ ಕ್ವಾಲಿಫೈಯರ್​ನಲ್ಲಿ ಲಕ್ನೋ ತಂಡದ ವಿರುದ್ಧ ಸೆಣಸಬಹುದು.ಇದಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ಆರ್​ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಜಯ ಸಾಧಿಸಿ, 2ನೇ ಕ್ವಾಲಿಫೈಯರ್ ಗೆದ್ದು ಫೈನಲ್​ಗೆ ಎಂಟ್ರಿ ಕೊಡಬೇಕು. ಹೀಗೆ ನಡೆದರೂ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಇವೆಲ್ಲದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಬೇಕಾಗುತ್ತದೆ. ಹೀಗಾದ್ರೆ ಮಾತ್ರ ಮತ್ತೊಮ್ಮೆ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

source https://tv9kannada.com/photo-gallery/cricket-photos/ipl-2023-rcb-vs-lsg-will-meet-again-in-playoffs-kannada-news-zp-579295.html

Post navigation

Afghanistan squad: ಅಫ್ಘಾನಿಸ್ತಾನ್ ತಂಡ ಪ್ರಕಟ: ನವೀನ್ ಉಲ್ ಹಕ್ ಔಟ್
ಶಾರುಖ್ ಖಾನ್ ಪುತ್ರನ ಬಂಧನದ ವಿಚಾರಕ್ಕೆ ಟ್ವಿಸ್ಟ್ : ರಿಲೀಸ್ ಮಾಡಲು ಇಟ್ಟಿದ್ದು 25 ಕೋಟಿ ಡಿಮ್ಯಾಂಡ್ ಅಂತೆ..!

Leave a Reply Cancel reply

Your email address will not be published. Required fields are marked *

CITIES

Cities

ರಾಜ್ಯದಲ್ಲಿ ಮುಂದಿನ 7 ದಿನ ‘ಮಿಶ್ರ’ ಹವಾಮಾನ: ಎಲ್ಲೆಲ್ಲಿ ಸುಡುಬಿಸಿಲು? ಎಲ್ಲಿ ಗುಡುಗು ಸಹಿತ ಮಳೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

March 30, 2026
samagrasuddi

ಬೆಂಗಳೂರು (ಮಾ. 30): ಬೇಸಿಗೆಯ ಆರಂಭದಲ್ಲೇ ಸುಡುಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಮುಂಬರುವ ವಾರದ ಹವಾಮಾನದ ಕುರಿತು ಮಹತ್ವದ ಮುನ್ಸೂಚನೆ ನೀಡಿದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕದಾದ್ಯಂತ ‘ಮಿಶ್ರ ಹವಾಮಾನ’ ಇರಲಿದ್ದು, ಒಂದೆಡೆ ಅತಿಯಾದ…

Cities

ಏ. 1ರಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಕಡಿತ!

March 29, 2026
samagrasuddi
Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi
Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 13 | ದಿನ 85

March 30, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 12 | ದಿನ 84

March 29, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 11 | ದಿನ 83

March 28, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 10 | ದಿನ 82

March 27, 2026
samagrasuddi
  • Rupee Fall: 95 ರೂ.ಗೆ ಕುಸಿದ ರೂಪಾಯಿ ಮೌಲ್ಯ; ಇಎಂಐ, ಆಮದು ವಸ್ತುಗಳು ಮತ್ತಷ್ಟು ದುಬಾರಿ?ಸಾಮಾನ್ಯರ ಮೇಲೇನು ಪರಿಣಾಮ?
  • ರಾಜ್ಯದಲ್ಲಿ ಮುಂದಿನ 7 ದಿನ ‘ಮಿಶ್ರ’ ಹವಾಮಾನ: ಎಲ್ಲೆಲ್ಲಿ ಸುಡುಬಿಸಿಲು? ಎಲ್ಲಿ ಗುಡುಗು ಸಹಿತ ಮಳೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
  • ಡಿಜಿಟಲ್ ಹೆಜ್ಜೆ: ‘ಜನಗಣತಿ-2027’ ಪ್ರಕ್ರಿಯೆಗೆ ಮನೆಯಿಂದಲೇ ಮೊಬೈಲ್ ಮೂಲಕ ಮಾಹಿತಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
  • ​ವಾಂಖೆಡೆಯಲ್ಲಿ ರೋಹಿತ್-ರಿಯಾನ್ ಅಬ್ಬರ: ಕೆಕೆಆರ್ ಮಣಿಸಿ ದಾಖಲೆಯ ಜಯ ಸಾಧಿಸಿದ ಮುಂಬೈ!
  • Skin and Hair Care in Summer: ಬೇಸಿಗೆಯಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿನ ಆರೈಕೆ ಹೇಗೆ? ಇಲ್ಲಿದೆ ಬೆಸ್ಟ್ ಬ್ಯೂಟಿ ಟಿಪ್ಸ್
Copyright © 2026
CONTACT US
Theme by: Theme Horse
Proudly Powered by: WordPress