ಗುರುವಿಗಿಂತ ದೊಡ್ಡವರು ಯಾರೂ ಇಲ್ಲ : ಶ್ರೀ ಶಿವಲಿಂಗಾನಂದ ಸ್ವಾಮೀಜಿ

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ (ಮೇ.16) :  ಗುರುವಿಗಿಂತ ದೊಡ್ಡವರು ಯಾರೂ ಇಲ್ಲ, ಅದೇ ರೀತಿ ಗುರುವಿಗೆ ಸಮಾನವಾದ ವಸ್ತುವೂ ಸಹಾ ಯಾವುದೂ ಇಲ್ಲ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

ನಗರದ ರಾ.ಹೆ.13ರ ಪಿಳ್ಳೇಕೇರನಹಳ್ಳಿಯ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ (ಬಿಇಡಿ)ವತಿಯಿಂದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮ, ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ವಿದ್ಯೆಯನ್ನು ಬಯಸಿ ಬಂದವರು ಜ್ಞಾನಾರ್ಥಿಗಳಾಗಿ ಜ್ಞಾನವನ್ನು ಬಯಸುತ್ತಾರೆ. ಮುಂದೆ ಅವರು ಜ್ಞಾನ ಪ್ರದಾನ ಮಾಡುತ್ತಾರೆ. ವಿದ್ಯೆ ಯಾವೂತ್ತು ಗುರುವೇ ಹೋರೆತು ಶಿಷ್ಯನಾಗುವುದಿಲ್ಲ, ಜ್ಞಾನವನ್ನು ಪಡೆಯುವವರು ಅಖಂಡವಾಗಿರಬೇಕು, ಆಳವಾದ ಆಧ್ಯಯನವನ್ನು ಮಾಡಬೇಕಿದೆ. ಗುರುವಿನಿಂದ ಪಡೆದ ವಿದ್ಯೆ ಮುಂದೆ ಆತನನ್ನು ಗುರುವಾಗಿಸುತ್ತದೆ. ಈ ಬಾಪೂಜಿ ಶಾಲೆಯಲ್ಲಿ ಕಲಿತವರು ವಿವಿಧ ರೀತಿಯ ಹುದ್ದೆಗಳನ್ನು ಪಡೆದಿದ್ದಾರೆ. ಅಧ್ಯಯನದಿಂದ ಉತ್ತಮವಾದ ವಿದ್ಯೆಯನ್ನು ಪಡೆಯಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.

ನಮ್ಮಲ್ಲಿನ ವಿದ್ಯೆಯನ್ನು ಬಳಕೆ ಮಾಡಿದಷ್ಟ ಹೆಚ್ಚಾಗುತ್ತಾ ಹೊಗುತ್ತದೆ. ವಿದ್ಯೆ ವಿನಯವನ್ನು ನೀಡುತ್ತದೆ. ಮನಸ್ಸನ್ನು ಹದ ಮತ್ತು ಪವಿತ್ರ ಮಾಡುತ್ತದೆ. ದೇಶದ ಪ್ರಗತಿಯಲ್ಲಿ ವಿದ್ಯೆ ಅಗ್ರ ಸ್ಥಾನವನ್ನು ಹೊಂದಿದೆ. ಮಠಗಳಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಮೂಲಕ ಸರ್ಕಾರದ ಹೊರೆಯನ್ನು ಇಳಿಸಿವೆ.

ಉತ್ತಮವಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದರ ಮೂಲಕ ಲಕ್ಷಾಂತರ ಜನರಿಗೆ ವಿದ್ಯೆಯನ್ನು ದಾನ ಮಾಡಿದೆ ಎಂದು ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಟಿ.ಎಂ.ಇ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯರು, ಬಳ್ಳಾರಿಯ ವಿ.ಎಸ್.ಕೆ.ವಿ.ವಿ.ಯ ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಪ್ರೋ.ಟಿ.ಎಂ.ರಾಜಶೇಖರಯ್ಯ ಮಾತನಾಡಿ, ಬಿಎಡ್ ಪವಿತ್ರವಾದ ವೃತ್ತಿಯಾಗಿದೆ.

ಬೇರೆಯದನ್ನು ನೌಕರಿ ಎನ್ನುತ್ತಾರೆ ಆದರೆ ಶಿಕ್ಷಣವನ್ನು ಭೋಧಿಸುವುದಕ್ಕೆ ವೃತ್ತಿ ಎನ್ನುತ್ತಾರೆ, ಇದರಲ್ಲಿ ನೌಕರಿಯಲ್ಲಿ ಕಲಿಯುವುದು ಏನು ಇರುವುದಿಲ್ಲ ಆದರೆ ಶಿಕ್ಷಕ ವೃತ್ತಿಯಲ್ಲಿ ಪ್ರತಿದಿನ ಕಲಿಯುವುದು ಇದ್ದೇ ಇರುತ್ತದೆ.  ವಿದ್ಯೆಯ ಜೊತೆಗೆ ಕೌಶಲ್ಯವನ್ನು ಸಹಾ ರೂಢಿಸಿಕೊಳ್ಳಿ, ಬಿಎಡ್ ಎನ್ನುವುದು ಅಂಕವನ್ನು ಪಡೆಯುವ ಶಿಕ್ಷಣ ಮಾತ್ರವಲ್ಲ ನಿಮ್ಮನ್ನು ನೀವು ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ತೂಡಗಿಸಿಕೊಳ್ಳಬೇಕಿದೆ ಎಂದು ನೂತನ ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ನಾಡಿನಲ್ಲಿ ಮಠಗಳು ಶಿಕ್ಷಣವನ್ನು ನೀಡದಿದ್ದರೆ ಈ ವೇಳೆಗೆ ಇಷ್ಟೂಂದು ಜನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಬಹುತೇಕ ಜನತೆ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದಕ್ಕೆ ಮಠಗಳಿಗೆ ಮತ್ತು ಶ್ರೀಗಳಿಗೆ ಋಣಿಯಾಗಿರಬೇಕಿದೆ. ಡಾ.ಅಂಬೇಡ್ಕರ್ ರವರ ಆಶಯವನ್ನು ಮಠಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಸಿವೆ. ಶಿಕ್ಷಣದಲ್ಲಿ ಅತಿ ಅಮೂಲ್ಯವಾದ ಬದಲಾವಣೆಯನ್ನು ಪ್ರಧಾನ ಮಂತ್ರಿ ಮೋದಿಯವರ ಸಚಿವ ಸಂಪುಟ ಜಾರಿ ಮಾಡುತ್ತಿದೆ. ಇದರ ಪರಿಣಾಮ ಉತ್ತಮವಾದ ಶಿಕ್ಷಣ ದೂರಕಲಿದೆ. ಇದರಿಂದ ಶಿಕ್ಷಣದಲ್ಲಿ ಬದಲಾವಣೆಯಾಗಲಿದೆ. ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಇದನ್ನು ಆಯ್ಕೆ ಮಾಡಿದ ನೀವುಗಳು ಪುಣ್ಯವಂತರಾಗಿದ್ದಾರೀ, ಉತ್ತಮವಾದ ಗುಣವನ್ನು ಬೆಳಸಿಕೊಳ್ಳಿ, ಬಿಎಡ್ ನಿಮ್ಮ ದಿಕ್ಕನ್ನು ಬದಲಾಯಿಸಲಿದೆ ಎಂದು ಪ್ರೋ.ಟಿ.ಎಂ.ರಾಜಶೇಖರಯ್ಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳು, ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ.ಎಂ.ವಿರೇಶ್ ಮಾತನಾಡಿ, ವಿನಯತೆ, ವಿದ್ಯೆ, ನಿಷ್ಠೆ, ಪ್ರಮಾಣಿಕತೆ ಇದ್ದಲ್ಲಿ ಯಶಸ್ಸು ಗೂಳಿಸಲು ಸಾಧ್ಯವಾಗುತ್ತದೆ. ಗುರುಗಳೆಂದರೆ ಹೇಗೆ ಇರಬೇಕೆಂಬುದನ್ನು ಶಿವಲಿಂಗಾನಂದ ಶ್ರೀಗಳು ತೋರಿಸಿಕೊಟ್ಟಿದ್ದಾರೆ.

ಆಶ್ರಮ ಸ್ವಾಮಿಗಳಾಗಿದ್ದರೂ ಸಹಾ ತಮ್ಮ ಪಾಲಿನ ಕಾಯಕವನ್ನು ಮಾಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ. ಗೋಶಾಲೆ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡುವುದರ ಮೂಲಕ ನೂರಾರು ಜನರಿಗೆ ಮೂಕ ಪ್ರಾಣಿಗಳಿಗೆ ದಾರಿ ದೀಪವಾಗಿದ್ದಾರೆ. ಸಮಯ ಪ್ರಜ್ಞೆ, ಕಾಯಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾದ ಡಾ.ಶಿವಶಂಕರ್ ಉದ್ಘಾಟಿಸಿದರು. ನಿವೃತ್ತ ಪ್ರಚಾರ್ಯರಾದ ಡಾ.ಎಂ.ಕೆ.ಪ್ರಭುದೇವ್, ಭಾಪೂಜಿ ಸಮೂಹ ಸಂರ್ಸಥೆಗಳ ನಿರ್ದೆಶಕರಾದ ಕೆ.ಎಂ.ಚೇತನ, ಹಾಗೂ ಪ್ರೋ.ಕೆ.ಜಂಬುನಾಥ್ ಪ್ರಾಂಶ್ರುಪಾಲರಾದ ಪ್ರೋ.ಎಂ. ಆರ್, ಜಯಲಕ್ಷ್ಮೀ, ಭಾಗವಹಿಸಿದ್ದರು.
ಶಿವಕುಮಾರ್ ಸ್ವಾಗತಿಸಿದರೆ, ಚಂದ್ರಶೇಖರ್ ವಂದಿಸಿದರು, ಪದ್ಮಾ ಕಾರ್ಯಕ್ರಮ ನಿರೂಪಿಸಿದರು. ಕಾವ್ಯರವರು ಸ್ವಾಗತ ನೃತ್ಯವನ್ನು ಪ್ರಸ್ತುತ ಪಡಿಸಿದರು.

The post ಗುರುವಿಗಿಂತ ದೊಡ್ಡವರು ಯಾರೂ ಇಲ್ಲ : ಶ್ರೀ ಶಿವಲಿಂಗಾನಂದ ಸ್ವಾಮೀಜಿ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/oY2GNmO
via IFTTT

Leave a Reply

Your email address will not be published. Required fields are marked *