ICC New Rules: ಕೆಲ ನಿಯಮಗಳಲ್ಲಿ ಬದಲಾವಣೆ ತಂದ ಐಸಿಸಿ

ICC New Rules: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೂರು ನಿಯಮಗಳನ್ನು ಬದಲಿಸಿದೆ. ಇದರಲ್ಲಿ ಒಂದು ನಿಯಮವನ್ನು ಸಂಪೂರ್ಣ ರದ್ದುಗೊಳಿಸಿದರೆ, ಇನ್ನೆರಡು ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಐಸಿಸಿ ಬದಲಿಸಿರುವ ನಿಯಮಗಳು ಈ ಕೆಳಗಿನಂತಿದೆ.1- ಸಾಫ್ಟ್ ಸಿಗ್ನಲ್ ರದ್ದು: ಇನ್ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಂಪೈರ್ ಸಾಫ್ಟ್ ಸಿಗ್ನಲ್ ನೀಡುವಂತಿಲ್ಲ. ಅಂದರೆ ಇದಕ್ಕೂ ಮುನ್ನ ಸಾಮಾನ್ಯವಾಗಿ ಕ್ಯಾಚ್​ ಔಟ್ ಆದಾಗ ಫೀಲ್ಡ್ ಅಂಪೈರ್​ಗೆ ಸಂಶಯಗಳಿದ್ದರೆ ಸಾಫ್ಟ್ ಸಿಗ್ನಲ್ ಮೂಲಕ ಔಟ್ ನೀಡುತ್ತಿದ್ದರು. ಅಲ್ಲದೆ ಆ ಬಳಿಕ ಮೂರನೇ ಅಂಪೈರ್​ಗೆ ಮನವಿ ಮಾಡುತ್ತಿದ್ದರು. ಇನ್ಮುಂದೆ ಹೀಗೆ ಸಾಫ್ಟ್ ಸಿಗ್ನಲ್ ನೀಡಬೇಕಿಲ್ಲ. ಬದಲಾಗಿ ತೀರ್ಪು ನೀಡಲು ಸಂಶಯಗಳಿದ್ದರೆ ನೇರವಾಗಿ ಮೂರನೇ ಅಂಪೈರ್​ಗೆ ಮನವಿ ಮಾಡಬಹುದು.2- ಹೆಲ್ಮೆಟ್ ಕಡ್ಡಾಯ: ಆಟಗಾರರ ಸುರಕ್ಷತೆಗಳನ್ನು ಹೆಚ್ಚಿಸಲು ಐಸಿಸಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅದರಂತೆ ವೇಗಿಗಳನ್ನು ಎದುರಿಸುವಾಗ ಬ್ಯಾಟರ್​ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಹಾಗೆಯೇ ವಿಕೆಟ್ ಸಮೀಪ ನಿಂತು ಕೀಪಿಂಗ್ ಮಾಡುವಾಗ ವಿಕೆಟ್ ಕೀಪರ್​ಗಳು ಕೂಡ ಹೆಲ್ಮೆಟ್ ಧರಿಸುವುದು ಸಹ ಕಡ್ಡಾಯ. ಇನ್ನು ಫೀಲ್ಡರ್​ ಬ್ಯಾಟ್ಸ್​ಮನ್​ ಬಳಿ ನಿಂತು ಫೀಲ್ಡಿಂಗ್ ಮಾಡುವಾಗಲೂ ಹೆಲ್ಮೆಟ್ ಧರಿಸಬೇಕೆಂದು ಐಸಿಸಿ ಸೂಚಿಸಿದೆ.3- ಫ್ರೀ ಹಿಟ್ ಬೌಲ್ಡ್ ರನ್: ಫ್ರೀ ಹಿಟ್​ ಎಸೆತಗಳಲ್ಲಿ ಬೌಲ್ಡ್ ಆದರೂ, ಆ ವೇಳೆ ರನ್ ಓಡಬಹುದು ಎಂಬುದನ್ನು ಐಸಿಸಿ ದೃಢೀಕರಿಸಿದೆ. ಅಂದರೆ ಬಾಲ್ ಸ್ಟಂಪ್‌ಗೆ ಬಡಿದಾಗ ಫ್ರೀ ಹಿಟ್‌ನಿಂದ ಗಳಿಸಿದ ಯಾವುದೇ ರನ್‌ಗಳನ್ನು ಬ್ಯಾಟರ್​ ಸ್ಥಿರವಾಗಿ ಗಳಿಸಿದ ರನ್ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ವೇಳೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫ್ರೀ ಹಿಟ್​ನಲ್ಲಿ ಬೌಲ್ಡ್ ಆಗಿ 3 ರನ್ ಓಡಿದ್ದರು. ಇದರಿಂದ ಗೊಂದಲಗಳು ಏರ್ಪಟ್ಟಿತ್ತು. ಇಂತಹ ಗೊಂದಲಗಳನ್ನು ದೂರ ಮಾಡಲು ಇದೀಗ ಐಸಿಸಿ ಫ್ರೀ ಹಿಟ್​ನಲ್ಲಿ ಬೌಲ್ಡ್ ಆದರೂ ರನ್ ಓಡಬಹುದು ಎಂಬುದನ್ನು ಸ್ಪಷ್ಟಪಡಿಸಿದೆ.ಇಲ್ಲಿ ಸಾಫ್ಟ್ ಸಿಗ್ನಲ್ ರದ್ದು ಮಾಡಲು ಮುಖ್ಯ ಕಾರಣ, ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ನೀಡಿ ಮೂರನೇ ಅಂಪೈರ್ ಪರಿಶೀಲನೆ ವೇಳೆಯೂ ಔಟಾ ಅಥವಾ ನಾಟೌಟಾ ಎಂಬ ಗೊಂದಲ ಮೂಡಿದರೆ, ಸಾಫ್ಟ್ ಸಿಗ್ನಲ್​ನಲ್ಲಿ ಔಟ್ ನೀಡಿರುವುದನ್ನು ಪರಿಗಣಿಸಿ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಬೇಕಿತ್ತು. ಇನ್ಮುಂದೆ ಅಂತಹ ಗೊಂದಲಕ್ಕೆ ತೆರೆ ಎಳೆಯಲು ಸಾಫ್ಟ್ ಸಿಗ್ನಲ್ ಅನ್ನು ರದ್ದುಗೊಳಿಸಲಾಗಿದೆ.ಈ ಎಲ್ಲಾ ನಿಯಮಗಳು ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ. ಅಂದರೆ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಹೊಸ ನಿಯಮಗಳಿರಲಿದೆ.

source https://tv9kannada.com/photo-gallery/cricket-photos/icc-announces-new-rules-in-cricket-kannada-news-zp-580109.html

Views: 0

Leave a Reply

Your email address will not be published. Required fields are marked *