IPL 2023: ಬೇಡದ ದಾಖಲೆಗೆ ಕೊರಳೊಡ್ಡಿದ ಧವನ್; ತನ್ನದೇ ದಾಖಲೆ ಮುರಿದ ವಾರ್ನರ್..!

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಪಂಜಾಬ್ ಕಿಂಗ್ಸ್ ತಂಡ ಈ ಆವೃತ್ತಿಯಲ್ಲೂ ಬರಿಗೈಯಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂಜಾಬ್ 15 ರನ್​ಗಳಿಂದ ಸೋಲೊಪ್ಪಿಕೊಂಡಿತು. ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕಾಗಿದ್ದ ನಾಯಕ ಶಿಖರ್ ಧವನ್ ಮೊದಲ ಓವರ್​ನಲ್ಲೇ ಅದು ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.ಧರ್ಮಶಾಲಾದಲ್ಲಿ ನಡೆದ ಕದನದಲ್ಲಿ ದೆಹಲಿ ಕ್ಯಾಪಿಟಲ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ಗೆ ವೇಗಿ ಇಶಾಂತ್ ಶರ್ಮಾ ಮೊದಲ ಓವರ್​​ನಲ್ಲೇ ಶಾಕ್ ನೀಡಿದರು. ಇಶಾಂತ್ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚಿತ್ತು ಗೋಲ್ಡನ್ ಡಕ್ ಆದ ಧವನ್, ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಟಾರ್ ಅಜಿಂಕ್ಯ ರಹಾನೆ ಅವರ ಬೇಡದ ದಾಖಲೆಯನ್ನು ಸರಿಗಟ್ಟಿದ್ದಾರೆ.ಧವನ್ ಐಪಿಎಲ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಧವನ್ ಅವರು ಗಂಭೀರ್ ಮತ್ತು ರಹಾನೆ ಅವರೊಂದಿಗೆ ಅನಗತ್ಯ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಆರ್​ಸಿಬಿಯ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಆರಂಭಿಕ ಆಟಗಾರನಾಗಿ 11 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.ಈ ಪಂದ್ಯದಲ್ಲಿ ಧವನ್ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಹಾಕಿಕೊಂಡರೆ, ಡೆಲ್ಲಿ ನಾಯಕ ವಾರ್ನರ್ ತಮ್ಮದೇ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.ವಾರ್ನರ್ 31 ಎಸೆತಗಳಲ್ಲಿ 46 ರನ್ ಗಳಿಸಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ದಾಖಲೆಯನ್ನು ಮುರಿದರು. ವಾರ್ನರ್ ಪಂಜಾಬ್ ವಿರುದ್ಧ 1084 ರನ್ ಬಾರಿಸಿದ್ದು, ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು. ವಾರ್ನರ್ ಕೆಕೆಆರ್ ವಿರುದ್ಧ 1075 ರನ್ ಬಾರಿಸಿದ್ದು, ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ್ದ ದಾಖಲೆಯಾಗಿತ್ತು. ಸಿಎಸ್‌ಕೆ ವಿರುದ್ಧ 1057 ರನ್ ಗಳಿಸಿರುವ ಧವನ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (1040 ಕೆಕೆಆರ್ ವಿರುದ್ಧ) ಮತ್ತು ವಿರಾಟ್ ಕೊಹ್ಲಿ (1030 ಡೆಲ್ಲಿ ವಿರುದ್ಧ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.

source https://tv9kannada.com/photo-gallery/cricket-photos/ipl-2023-shikhar-dhawan-matches-gautam-gambhirs-unwanted-feat-david-warner-breaks-own-record-in-pbks-vs-dc-clash-psr-581633.html

Views: 0

Leave a Reply

Your email address will not be published. Required fields are marked *