IPL 2023: 4 ಆಟಗಾರರೊಂದಿಗೆ ಕಪ್ ಗೆಲ್ಲಲು ಹೊರಟಿದ್ದ RCB

IPL 2023: ಐಪಿಎಲ್​ ಸೀಸನ್​ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಅಂತ್ಯವಾಗಿದೆ. 13 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದ್ದ ಆರ್​ಸಿಬಿಗೆ ಕೊನೆಯ ಪಂದ್ಯದವರೆಗೂ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೆ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸುವುದರೊಂದಿಗೆ ಐಪಿಎಲ್​ನಿಂದ ಹೊರಬಿದ್ದಿದೆ.ವಿಶೇಷ ಎಂದರೆ ಈ ಬಾರಿ RCB ಆಡಿರುವ 14 ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿರುವುದು ಕೇವಲ 4 ಆಟಗಾರರು ಮಾತ್ರ. ಉಳಿದ ಪ್ಲೇಯರ್ಸ್​ಗಳಿಂದ ಒಂದೆರೆಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿದ್ದರೂ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುತ್ತಿತ್ತು.ಏಕೆಂದರೆ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರಿಸಿದ್ದು ಬಿಟ್ಟರೆ ಉಳಿದವರು ಲೆಕ್ಕಕ್ಕಿದ್ದರರೆ ಹೊರತು ಆಟಕ್ಕಿರಲಿಲ್ಲ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.ಫಾಫ್ ಡುಪ್ಲೆಸಿಸ್ ಆಡಿರುವ 14 ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 730 ರನ್​ಗಳು. ಈ ವೇಳೆ 8 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು.ಇನ್ನು ವಿರಾಟ್ ಕೊಹ್ಲಿ 14 ಇನಿಂಗ್ಸ್​ಗಳಲ್ಲಿ 2 ಭರ್ಜರಿ ಶತಕ ಹಾಗೂ 6 ಅರ್ಧಶತಕದೊಂದಿಗೆ ಒಟ್ಟು 639 ರನ್​ ಕಲೆಹಾಕಿದ್ದಾರೆ.ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ 14 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 400 ರನ್​ಗಳಿಸಿದ್ದಾರೆ. ಅಂದರೆ ಆರ್​ಸಿಬಿ ತಂಡ ಈ ಬಾರಿ ಕಲೆಹಾಕಿದ ಒಟ್ಟು ಸ್ಕೋರ್​ 2502 ರನ್​ಗಳು. ಇದರಲ್ಲಿ KGF ಜೋಡಿಗಳು ಜೊತೆಗೂಡಿ ಕಲೆಹಾಕಿದ ಒಟ್ಟು ಸ್ಕೋರ್ ಬರೋಬ್ಬರಿ 1,769 ರನ್​ಗಳು. ಇನ್ನುಳಿದ ಎಲ್ಲಾ ಬ್ಯಾಟರ್​ಗಳು ಸೇರಿ ಪೇರಿಸಿದ್ದು ಕೇವಲ 733 ರನ್​ಗಳು ಮಾತ್ರ ಎಂದರೆ ನಂಬಲೇಬೇಕು. ಇಲ್ಲಿ ಅಚ್ಚರಿಯ ವಿಷಯ ಎಂದರೆ ಈ ಮೂವರನ್ನು ಹೊರತುಪಡಿಸಿ ಆರ್​ಸಿಬಿ ತಂಡದ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ 150 ರನ್​ ಕಲೆಹಾಕಿಲ್ಲ ಎಂಬುದು. ಅಂದರೆ ಆರ್​ಸಿಬಿ ತಂಡವು ಬ್ಯಾಟಿಂಗ್​ನಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಅವಲಂಭಿಸಿದ್ದರು ಎಂಬುದು ಸ್ಪಷ್ಟ. ಇನ್ನು ಬೌಲಿಂಗ್​ನಲ್ಲಿ ಮಿಂಚಿದ್ದು ಮೊಹಮ್ಮದ್ ಸಿರಾಜ್ ಮಾತ್ರ.RCB ಪರ ಪವರ್​ಪ್ಲೇನಲ್ಲಿ ಅತ್ಯುತ್ತಮ ದಾಳಿ ಸಂಘಿಟಿಸುತ್ತಿದ್ದ ಸಿರಾಜ್ ಟೂರ್ನಿಯುದಕ್ಕೂ ಮೊದಲ 6 ಓವರ್​ಗಳಲ್ಲಿ ವಿಕೆಟ್ ಉರುಳಿಸಿ ಯಶಸ್ಸು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಲ್ಲಿ ಸಿರಾಜ್​ಗೆ ಉತ್ತಮ ಸಾಥ್ ಸಿಕ್ಕಿರುವುದೇ ಅಪರೂಪ. ಏಕೆಂದರೆ ಈ ಬಾರಿ ಸಿರಾಜ್ ಒಟ್ಟು 300 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಈ ವೇಳೆ ನೀಡಿರುವುದು ಕೇವಲ 376 ರನ್​ಗಳು. ಅಲ್ಲದೆ 19 ವಿಕೆಟ್​ಗಳನ್ನು ಕೂಡ ಕಬಳಿಸಿ ಆರ್​ಸಿಬಿ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಉಳಿದ ಯಾವುದೇ ಬೌಲರ್​ಗಳಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ ಎಂಬುದೇ ಸತ್ಯ.ಅಂದರೆ ಆರ್​ಸಿಬಿ ತಂಡವು ಈ ನಾಲ್ವರು ಆಟಗಾರರನ್ನೇ ಅವಲಂಭಿಸಿ 7 ಪಂದ್ಯಗಳನ್ನು ಗೆದ್ದಿರುವುದೇ ದೊಡ್ಡ ಸಾಧನೆ. ಅಲ್ಲದೆ ಈ ನಾಲ್ವರನ್ನೇ  ಅವಲಂಭಿಸಿ RCB ಕಪ್ ಗೆಲ್ಲಲು ಹೊರಟಿದ್ದೇ ಪರಮಾಶ್ಚರ್ಯ ಎನ್ನದೇ ವಿಧಿಯಿಲ್ಲ.

source https://tv9kannada.com/photo-gallery/cricket-photos/ipl-2023-rcb-depend-on-4-players-kannada-news-zp-584663.html

Leave a Reply

Your email address will not be published. Required fields are marked *