IPL 2023: ಮೊದಲ ಐಪಿಎಲ್​ ಪಂದ್ಯದಲ್ಲೇ 15 ವರ್ಷಗಳ ಹಳೆಯ ದಾಖಲೆ ಮುರಿದ ವಿವ್ರಾಂತ್..!

ಈ ಬಾರಿಯ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಹೆಸರಾಂತ ಆಟಗಾರರ ದಂಡೆ ಇದ್ದರು, ತಂಡ ಪ್ಲೇ ಆಫ್​ಗೇರಲು ವಿಫಲವಾಯಿತು. ಆದರೆ ತಂಡದ ಪರ ಚೊಚ್ಚಲ ಅವಕಾಶ ಪಡೆದ ಯುವ ಕ್ರಿಕೆಟರ್ ವಿವ್ರಾಂತ್ ಶರ್ಮಾ 15 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.ಐಪಿಎಲ್ 2023ರಲ್ಲಿ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಎರಡು ಪಂದ್ಯಗಳಲ್ಲಿ ವಿವ್ರಾಂತ್​ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಮೂರನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಸೀಸನ್​ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದ ವಿವ್ರಾಂತ್, ಅದ್ಭುತ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಪರ ದೇಶೀ ಕ್ರಿಕೆಟ್ ಆಡುತ್ತಿರುವ ವಿವ್ರಾಂತ್, ಮುಂಬೈ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದು ಕೇವಲ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.ಔಟಾಗುವ ಮುನ್ನ 69 ರನ್ ಬಾರಿಸಿದ್ದ ವಿವ್ರಾಂತ್ ಅವರ ಇನ್ನಿಂಗ್ಸ್​ನಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಈ ಇನ್ನಿಂಗ್ಸ್ ಮಾಡುವ ಮೂಲಕ15 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಚೊಚ್ಚಲ ಪಂದ್ಯದಲ್ಲೇ ಅತಿ ಹೆಚ್ಚು ಅಂದರೆ, 69 ರನ್ ಬಾರಿಸಿದ ದಾಖಲೆಯನ್ನು ವಿವ್ರಾಂತ್ ಬರೆದಿದ್ದಾರೆ. ಇದಕ್ಕೂ ಮುನ್ನ ಸ್ವಪ್ನಿಲ್ 60 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.ಇನ್ನು 2008 ರಲ್ಲಿ ರಾಜಸ್ಥಾನ್ ರಾಯಲ್ಸ್  ಪರ ಮೊದಲ ಪಂದ್ಯವನ್ನಾಡಿದ್ದ ಸ್ವಪ್ನಿಲ್ ಅಸ್ನೋಡ್ಕರ್ 60 ರನ್ ಬಾರಿಸಿ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು.ಇವರಿಬ್ಬರ ಬಳಿಕ 2008 ರಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 58* ರನ್ ಬಾರಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.ಇನ್ನು ನಾಲ್ಕನೇ ಸ್ಥಾನದಲ್ಲಿರುವ ಕನ್ನಡಿಗ  ದೇವದತ್ ಪಡಿಕ್ಕಲ್ ದುಬೈನಲ್ಲಿ ನಡೆದ 2020 ರ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲೇ 56 ರನ್ ಬಾರಿಸಿ ದಾಖಲೆ ಬರೆದಿದ್ದರು.

source https://tv9kannada.com/photo-gallery/cricket-photos/ipl-2023-vivrant-sharma-broke-a-15-year-long-record-psr-584791.html

Leave a Reply

Your email address will not be published. Required fields are marked *