ಒಂದು ಲಕ್ಷ ಮೌಲ್ಯದ ಫೋನ್ ಅನ್ನು ಕೇವಲ 22 ಸಾವಿರ ರೂ.ಗೆ ಖರೀದಿಸಿ! Samsung ಮೊಬೈಲ್ ಮೇಲೆ ಭಾರೀ ಡಿಸ್ಕೌಂಟ್

Samsung Galaxy S22 Plus: 1 ಲಕ್ಷ ರೂಪಾಯಿ ಬೆಲೆಬಾಳುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು  ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ನಲ್ಲಿ ಈ ಫೋನ್ ಅನ್ನು ಕೇವಲ 22,000 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.  ಈ ಫೋನ್ ಅನ್ನು ಇಎಂಐ ಮೂಲಕ ಕೂಡಾ ಖರೀದಿಸಬಹುದು.  

Samsung Galaxy S22 Plus : Samsung Galaxy S22 Plus ಖರೀದಿಯ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಿದೆ. 1 ಲಕ್ಷ ರೂಪಾಯಿ ಬೆಲೆಬಾಳುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು ಕೇವಲ 22,000 ರೂಪಾಯಿಗೆ  ಖರೀದಿಸಲು ಸಾಧ್ಯವಾಗುವಂಥಹ ಆಫರ್ ಗಳನ್ನು ನೀಡಲಾಗಿದೆ. ಹೌದು Samsung Galaxy S22 Plus ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ ಈ ರಿಯಾಯಿತಿ ನೀಡಲಾಗಿದೆ. ಇದು Qualcomm Snapdragon 8 Gen 1ನ ಪ್ರೊಸೆಸರ್ ಸಪೋರ್ಟ್ ನೊಂದಿಗೆ ಬರುತ್ತದೆ. ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ನಲ್ಲಿ ಈ ಫೋನ್ ಅನ್ನು ಕೇವಲ 22,000 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. ಈ ಪ್ರೀಮಿಯಂ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 8 GB RAM ಜೊತೆಗೆ 128 GB ಮತ್ತು 256 GB  ಸ್ಟೋರೇಜ್ ರೂಪಾಂತರವನ್ನು ಹೊಂದಿದೆ.

ಆಫರ್ ನ ಲಾಭವನ್ನು ಪಡೆಯುವುದು ಹೇಗೆ ? :
Samsung Galaxy S22 Plus ಬೆಲೆ  1,01,999 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ  ಈ ಫೋನ್ ಮೇಲೆ  46 ಪ್ರತಿಶತ ರಿಯಾಯಿತಿ ನೀಡಲಾಗುತ್ತಿದ್ದು, 54,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ 30,000 ರೂ.ಗಳ ನೇರ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ಈ ಆಫರ್ ನೊಂದಿಗೆ ಫೋನ್ ಅನ್ನು ಖರೀದಿಸುವುದಾದರೆ ಈ ಫೋನ್ ಬೆಲೆ 24,999 ರೂ. ಆಗಿರಲಿದೆ. ಇನ್ನು ನೀವು ಫೋನ್ ಖರೀದಿಸುವಾಗ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 10 ಪ್ರತಿಶತದಷ್ಟು ರಿಯಾಯಿತಿಯನ್ನು  ಕೂಡಾ ಪಡೆಯಬಹುದು. ಅಲ್ಲಿದೆ ಮತ್ತೆ  2499 ರೂಪಾಯಿ ಕಡಿಮೆಯಾಗಿ ಈ ಫೋನ್ ಬೆಲೆ ಕೇವಲ 22,500 ರೂ.ಗೆ ಇಳಿಯುತ್ತದೆ. 

ಇಎಂಐ ರೂಪದಲ್ಲಿ ಎಷ್ಟು ಹಣ ಪಾವತಿಸಬೇಕಾಗುತ್ತದೆ ? : 
Samsung Galaxy S22 Plus ಅನ್ನು ಇಎಂಐ ಮೂಲಕ ಸಹ ಖರೀದಿಸಬಹುದು. ಇದಕ್ಕಾಗಿ ನೀವು ಪ್ರತಿ ತಿಂಗಳು 9,167 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ. ನೀವು ಈ ಸ್ಮಾರ್ಟ್‌ಫೋನ್ ಖರೀದಿಸಿದರೆ ನಿಮಗೆ 1 ವರ್ಷದ ಮ್ಯಾನುಫ್ಯಾಕ್ಚರಿಂಗ್ ವಾರಂಟಿ ಸಿಗುತ್ತದೆ. ಇದಲ್ಲದೆ, ನೀವು 6 ತಿಂಗಳ ಇನ್-ಬಾಕ್ಸ್  ಪ್ರಾಡಕ್ಟ್ ವಾರಂಟಿಯನ್ನು  ಕೂಡಾ ನೀಡಲಾಗುತ್ತದೆ. 

Samsung Galaxy S22 Plus ನ ವೈಶಿಷ್ಟ್ಯಗಳು : 
Samsung Galaxy S22 Plus 6.6-ಇಂಚಿನ  ಫುಲ್ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ 50MP ಮೇನ್ ಕ್ಯಾಮೆರಾವನ್ನು ಹೊಂದಿದೆ.  12 ಎಂಪಿ ಮತ್ತು 10 ಎಂಪಿ ಎರಡು ಕ್ಯಾಮೆರಾಗಳನ್ನು ಕೂಡಾ ಈ ಫೋನ್ ಪಡೆಯುತ್ತದೆ. ಇದಲ್ಲದೇ 10MP ಫ್ರಂಟ್ ಕ್ಯಾಮೆರಾವನ್ನು ಕೂಡಾ ಇದು ಪಡೆಯುತ್ತದೆ. ಸ್ಮಾರ್ಟ್ಫೋನ್ 4500 mAh ಬ್ಯಾಟರಿಯೊಂದಿಗೆ ಬರುತ್ತದೆ. 

Source:https://zeenews.india.com/kannada/technology/buy-one-one-lakh-rupees-worth-samsung-phone-at-22-thousand-flipkart-big-bachat-sale-135772

Leave a Reply

Your email address will not be published. Required fields are marked *