IPL 2023: ಕಿಂಗ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಶುಭ್​ಮನ್ ಗಿಲ್

IPL 2023: ಐಪಿಎಲ್​ ಸೀಸನ್ 16 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 42 ರನ್​ ಬಾರಿಸುವ ಮೂಲಕ ಶುಭ್​ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.ಹೌದು, ಸಿಎಸ್​ಕೆ ವಿರುದ್ಧ 42 ರನ್​ ಬಾರಿಸುವುದರೊಂದಿಗೆ ಈ ಬಾರಿಯ ಐಪಿಎಲ್​ನಲ್ಲಿ ಶುಭ್​ಮನ್ 700 ರನ್​ಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಏಳು ನೂರು ರನ್ ಕಲೆಹಾಕಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ವಿರಾಟ್ ಕೊಹ್ಲಿ. 2016 ರಲ್ಲಿ ಕಿಂಗ್ ಕೊಹ್ಲಿ ಒಟ್ಟು 973 ರನ್ ಕಲೆಹಾಕಿದ್ದರು. ಇದು ಐಪಿಎಲ್ ಸೀಸನ್​ವೊಂದರಲ್ಲಿ ಬ್ಯಾಟರ್​ರೊಬ್ಬರು ಕಲೆಹಾಕಿದ ಅತ್ಯಧಿಕ ರನ್ಸ್​ ಎಂಬುದು ವಿಶೇಷ.ಇದೀಗ ಶುಭ್​ಮನ್ ಗಿಲ್ 15 ಪಂದ್ಯಗಳಲ್ಲಿ 2 ಭರ್ಜರಿ ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 722 ರನ್​ ಕಲೆಹಾಕಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್​ನ ಆರೆಂಜ್ ಕ್ಯಾಪ್ ರೇಸ್​ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.ಈ ಬಾರಿಯ ಐಪಿಎಲ್​ನಲ್ಲಿ 14 ಪಂದ್ಯಗಳಿಂದ 730 ರನ್​ ಕಲೆಹಾಕಿರುವ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಸದ್ಯ ಅಗ್ರಸ್ಥಾನದಲ್ಲಿದ್ದು, ಡುಪ್ಲೆಸಿಸ್ ಅವರನ್ನು ಹಿಂದಿಕ್ಕಲು ಗಿಲ್​ಗೆ ಕೇವಲ 9 ರನ್​ಗಳ ಅವಶ್ಯಕತೆಯಿದೆ.ಅತ್ತ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದ್ದು, ಇದರಲ್ಲಿ ಗೆದ್ದರೆ ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಡುಪ್ಲೆಸಿಸ್ ಅವರನ್ನು ಹಿಂದಿಕ್ಕಿ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶ ಶುಭ್​ಮನ್ ಗಿಲ್ ಮುಂದಿದೆ.ಅಂದಹಾಗೆ ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ಕಳೆದ 16 ಸೀಸನ್ ಐಪಿಎಲ್​ನಲ್ಲಿ ಭಾರತದ ಯಾವುದೇ ಬ್ಯಾಟ್ಸ್​ಮನ್ 700 ಕ್ಕಿಂತ ಹೆಚ್ಚಿನ ರನ್​ಗಳಿಸಿಲ್ಲ ಎಂಬುದು ವಿಶೇಷ.

source https://tv9kannada.com/photo-gallery/cricket-photos/ipl-2023-shubman-gill-equals-virat-kohli-record-kannada-news-zp-586186.html

Leave a Reply

Your email address will not be published. Required fields are marked *