IPL 2023: ವಿರಾಟ್ ಕೊಹ್ಲಿ ಜೊತೆ ಕ್ಷಮೆ ಕೇಳಿದ್ರಾ ನವೀನ್ ಉಲ್ ಹಕ್?

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಕೆಣಕಲು ಯತ್ನಿಸಿ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ಫಜೀತಿಗೆ ಸಿಲುಕಿದ್ದಾರೆ.ಮೇ 1 ರಂದು ಲಕ್ನೋದಲ್ಲಿ ನಡೆದ ಆರ್​ಸಿಬಿ ವಿರುದ್ಧ ನಡೆದ ಪಂದ್ಯದ ವೇಳೆ ಲಕ್ನೋ ವೇಗಿ ನವೀನ್ ಉಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಹಸ್ತಲಾಘವ ಮಾಡುವ ವೇಳೆ ನವೀನ್ ಕಿಂಗ್ ಕೊಹ್ಲಿಯ ಕೈ ಎಳೆದಿದ್ದರು.ಲಕ್ನೋ ಸೂಪರ್ ಜೈಂಟ್ಸ್ ಆಟಗಾರನ ಈ ಅತಿರೇಕದ ವರ್ತನೆಯಿಂದ ಕುಪಿತಗೊಂಡಿದ್ದ ಆರ್​ಸಿಬಿ ಫ್ಯಾನ್ಸ್​ ನವೀನ್ ಉಲ್ ಹಕ್ ಅವರನ್ನು ಪ್ರತಿ ಪಂದ್ಯದ ವೇಳೆ ಟಾರ್ಗೆಟ್ ಮಾಡಿದ್ದರು. ಇದರಿಂದ ನವೀನ್ ಉಲ್ ಹಕ್ ಫಜೀತಿಗೆ ಸಿಲುಕಿದ್ದರು.ಇತ್ತ ಸೋಷಿಯಲ್ ಮೀಡಿಯಾದಲ್ಲೂ ಕಿಂಗ್ ಕೊಹ್ಲಿ ಅಭಿಮಾನಿಗಳು ಅಫ್ಘಾನ್ ಆಟಗಾರನಿಗೆ ಬಿಸಿ ಮುಟ್ಟಿಸಿದ್ದರು. ಇದೀಗ ಲಕ್ನೋ ತಂಡದ ಸೋಲಿನೊಂದಿಗೆ ನವೀನ್ ಉಲ್ ಹಕ್ ಅವರ ಐಪಿಎಲ್ ಜರ್ನಿ ಮುಗಿದಿದೆ.ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿಗೆ ನವೀನ್ ಉಲ್​ ಹಕ್​ ಅವರು​ ಕ್ಷಮೆಯಾಚಿಸಿರುವ ಟ್ವಿಟರ್ ಪೋಸ್ಟರ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನವೀನ್ ಉಲ್ ಹಕ್ ಹೆಸರಿನ ಖಾತೆಯಿಂದ ಮಾಡಲಾದ ಈ ಟ್ವೀಟ್​ನ ಅಸಲಿಯತ್ತು ಪರಿಶೀಲಿಸಿದರೆ ಅದು ಫೇಕ್ ಅಕೌಂಟ್ ಎಂದು ತಿಳಿದು ಬಂದಿದೆ.ಏಕೆಂದರೆ ನವೀನ್ ಉಲ್ ಹಕ್ ಅವರ ಅಸಲಿ ಟ್ವಿಟರ್ ಖಾತೆಯ ಹೆಸರು ನವೀನ್ ಉಲ್ ಹಕ್ ಮುರೀದ್ (Naveen ul haq Murid). ಆದರೆ ಇದೀಗ ನವೀನ್ ಉಲ್ ಹಕ್ ಹೆಸರಿನ ನಕಲಿ ಖಾತೆಯ ಮೂಲಕ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ಅಂದರೆ ನವೀನ್ ಉಲ್ ಹಕ್ ಇದುವರೆಗೆ ವಿರಾಟ್ ಕೊಹ್ಲಿ ಜೊತೆ ಕ್ಷಮೆಯಾಚಿಸಿಲ್ಲ.
ಇನ್ನು ಕಿಂಗ್ ಕೊಹ್ಲಿ ಅಭಿಮಾನಿಗಳು ಏಷ್ಯಾಕಪ್​ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವಣ ಮುಖಾಮುಖಿಯನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ನವೀನ್ ಉಲ್ ಹಕ್​ ಎಸೆತಗಳಿಗೆ ವಿರಾಟ್ ಕೊಹ್ಲಿ ಹೇಗೆ ಉತ್ತರ ನೀಡಲಿದ್ದಾರೆ ಎಂಬುದೇ ಈಗ ಕುತೂಹಲ.

source https://tv9kannada.com/photo-gallery/cricket-photos/ipl-2023-did-naveen-ul-haq-apologise-to-virat-kohli-kannada-news-zp-587002.html

Views: 0

Leave a Reply

Your email address will not be published. Required fields are marked *