IPL 2023 Closing Ceremony: ಐಪಿಎಲ್ 2023 ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಮೆಗಾ ಪ್ಲಾನ್: ಏನಿರಲಿದೆ ಗೊತ್ತೇ?

IPL 2023 Closing Ceremony: ಐಪಿಎಲ್ 2023 ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಮೆಗಾ ಪ್ಲಾನ್: ಏನಿರಲಿದೆ ಗೊತ್ತೇ?

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊನೆಯ ಹಂತದಲ್ಲಿದೆ. ಇನ್ನು ಉಳಿದಿರುವುದು ಕೇವಲ ಎರಡು ಪಂದ್ಯ ಮಾತ್ರ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಕ್ವಾಲಿಫೈಯರ್​ನಲ್ಲಿ ಗೆಲ್ಲುವ ಮೂಲಕ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇಂದು ಕ್ವಾಲಿಫೈಯರ್-2 (Qualifier 2) ಪಂದ್ಯ ನಡೆಯಲಿದ್ದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಮೇ 28 ಭಾನುವಾರದಂದು ಸಿಎಸ್​ಕೆ ವಿರುದ್ಧ ಐಪಿಎಲ್ 2023 ಫೈನಲ್​ನಲ್ಲಿ (IPL 2023 Final) ಟ್ರೋಫಿಗಾಗಿ ಸೆಣೆಸಾಡಲಿದೆ.

ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಫೈನಲ್​ಗೂ ಮುನ್ನ ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ. ಹಾಗಾದರೆ ಐಪಿಎಲ್ 2023 ಕ್ಲೋಸಿಂಗ್ ಸೆರಮನಿ ಯಾವಾಗ?, ಎಷ್ಟು ಗಂಟೆಗೆ?, ಯಾರೆಲ್ಲ ಸಾಕ್ಷಿಯಾಗಲಿದ್ದಾರೆ ಎಂಬುದನ್ನು ನೋಡೋಣ.

Asia Cup 2023: 3 ಮಂಡಳಿ ಅಧ್ಯಕ್ಷರ ಹಾಜರಿ; ಐಪಿಎಲ್ ಫೈನಲ್ ಪಂದ್ಯದಲ್ಲಿ ಏಷ್ಯಾಕಪ್ ಭವಿಷ್ಯ ನಿರ್ಧಾರ!

ಐಪಿಎಲ್ 2023 ರ ಸಮಾರೋಪ ಸಮಾರಂಭ ಎಲ್ಲಿ ನಡೆಯಲಿದೆ?

ಐಪಿಎಲ್ 2023 ಸಮಾರೋಪ ಸಮಾರಂಭ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಐಪಿಎಲ್ 2023 ರ ಸಮಾರೋಪ ಸಮಾರಂಭ ಯಾವಾಗ ನಡೆಯಲಿದೆ?

ಐಪಿಎಲ್ 2023 ರ ಸಮಾರೋಪ ಸಮಾರಂಭ ಭಾನುವಾರ (ಮೇ 28) ನಡೆಯಲಿದೆ. ಅದ್ಧೂರಿ ಕಾರ್ಯಕ್ರಮದ ಸಮಯವನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ. ಮೂಲಗಳ ಪ್ರಕಾರ ಸಂಜೆ 6:00 ಗಂಟೆಯಿಂದ ಶುರುವಾಗುವ ನಿರೀಕ್ಷೆಯಿದೆ.

ಐಪಿಎಲ್ 2023 ರ ಸಮಾರೋಪ ಸಮಾರಂಭದಲ್ಲಿ ಯಾರು ಭಾಗವಹಿಸಲಿದ್ದಾರೆ?

ಪ್ರಸಿದ್ಧ ಸಂಗೀತಗಾರ ಎಆರ್ ರೆಹಮಾನ್ ಮತ್ತು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಐಪಿಎಲ್ 2023 ರ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಐಪಿಎಲ್ 2023 ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಐಪಿಎಲ್ 2023 ರ ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಲೈವ್ ಸ್ಟ್ರೀಮ್ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್-2 ಪಂದ್ಯ:

ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳ ನಡುವೆ ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ. ಇಂದು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಗುಜರಾತ್‌ ಹಾಗೂ ಮುಂಬೈ ಎರಡೂ ತಂಡಗಳಲ್ಲಿಯೂ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ. ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೆ, ಪಂದ್ಯ ಸಾಗುತ್ತಿದ್ದಂತೆ ಇಲ್ಲಿನ ವಿಕೆಟ್‌ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/bcci-planning-to-rope-in-a-r-rahman-and-ranveer-singh-for-the-ipl-2023-closing-ceremony-kannada-news-vb-587208.html

Leave a Reply

Your email address will not be published. Required fields are marked *