WTC final 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ತಂಡಕ್ಕೆ ಸಿಗುವ ಬಹುಮಾನವೆಷ್ಟು ಗೊತ್ತಾ?

ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ  2023ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ದಿನಗಣನೆ ಆರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಈ ಚಾಂಪಿಯನ್​ಶಿಪ್​ನ ಬಹುಮಾನದ ಮೊತ್ತವನ್ನು ಐಸಿಸಿ ಘೋಷಿಸಿದ್ದು, ಈ ಆವೃತ್ತಿಗಾಗಿ ಸುಮಾರು 29.75 ಕೋಟಿ ರೂ.ಗಳನ್ನು ಬಹುಮಾನಕ್ಕಾಗಿ ಮೀಸಲಿಟ್ಟಿದೆ.ಇದರಲ್ಲಿ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ತಂಡಕ್ಕೆ 13.22 ಕೋಟಿ ರೂ. ಬಹುಮಾನವಾಗಿ ಸಿಗಲಿದೆ.ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಸೋತು ರನ್ನರ್​ ಅಪ್ ಎನಿಸಿಕೊಳ್ಳುವ ತಂಡ ರೂ. 6.61 ಕೋಟಿಯನ್ನು ಬಹುಮಾನವಾಗಿ ಪಡೆಯಲ್ಲಿದೆ.ಈ ಎರಡು ತಂಡಗಳನ್ನು ಹೊರತುಪಡಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ 3.71 ಕೋಟಿ ರೂ. ಬಹುಮಾನವಾಗಿ ಸಿಗಲಿದೆ.ಹಾಗೆಯೇ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡ 2.89 ಕೋಟಿ ರೂ.ಗಳನ್ನು ಬಹುಮಾನವಾಗಿ ಸ್ವೀಕರಿಸಲಿದೆ.5ನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೆ 1.65 ಕೋಟಿ ರೂ. ಬಹುಮಾನ ಪಡೆಯಲಿದೆ.ಆರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್, ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ, ಎಂಟನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಒಂಬತ್ತನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಲಾ 84 ಲಕ್ಷ ರೂ. ಬಹುಮಾನ ಪಡೆಯಲ್ಲಿವೆ.ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗಾಗಿ ಕೋಚ್ ರಾಹು ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಯೊಂದಿಗೆ ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಸೇರಿದಂತೆ ಮೊದಲ ಬ್ಯಾಚ್ ಇಂಗ್ಲೆಂಡ್‌ಗೆ ಬಂದಿಳಿದಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಭಾರತೀಯ ಕ್ರಿಕೆಟಿಗರು ಐಪಿಎಲ್ 2023 ಮುಗಿದ ನಂತರ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

source https://tv9kannada.com/photo-gallery/cricket-photos/wtc-final-2023-icc-announces-prize-money-for-india-vs-australia-wtc-final-winner-and-runners-up-psr-587486.html

Views: 0

Leave a Reply

Your email address will not be published. Required fields are marked *