Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ರೋಹಿತ್ ಶರ್ಮಾ ಹಾಗೂ ಜಯ್ ಶಾ ಕೊಟ್ಟ ರಿಯಾಕ್ಷನ್ ನೋಡಿ

Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ರೋಹಿತ್ ಶರ್ಮಾ ಹಾಗೂ ಜಯ್ ಶಾ ಕೊಟ್ಟ ರಿಯಾಕ್ಷನ್ ನೋಡಿ

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (MI vs GT) ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಶುಭ್​ಮನ್ ಗಿಲ್ (Shubman Gill) ಅವರ ಅಮೋಘ ಶತಕ ಹಾಗೂ ಮೋಹಿತ್ ಶರ್ಮಾ (Mohit Sharma) ಅವರ ಮಾರಕ ಬೌಲಿಂಗ್ ದಾಳಿಗೆ ಮುಂಬೈ ನಲುಗಿದರೆ ಜಿಟಿ 62 ರನ್​ಗಳ ಜಯ ಕಂಡಿತು. ಇಡೀ ಪಂದ್ಯದ ಪ್ರಮುಖ ಹೈಲೇಟ್ ಗಿಲ್ ಆಗಿದ್ದರು. ಈ ಬಾರಿಯ ಟೂರ್ನಿಯಲ್ಲಿ ಇದು ಇವರ ಮೂರನೇ ಶತಕ. ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್​ನಿಂದ ದಾಖಲೆಯ 129 ರನ್ ಚಚ್ಚಿ ದಾಖಲೆ ಬರೆದು ಆರೆಂಜ್ ಕ್ಯಾಪ್ ತಮ್ಮದಾಗಿಸಿದ್ದಾರೆ.

ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ಇಡೀ ನರೇಂದ್ರ ಮೋದಿ ಸ್ಟೇಡಿಯಂ ಎದ್ದು ನಿಂತು ಗೌರವ ಸೂಚಿಸಿತು. ಫೀಲ್ಡಿಂಗ್ ಮಾಡುತ್ತಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಗಿಲ್ ಬಳಿ ಓಡಿ ಬಂದು ನಗುತ್ತಾ ಶುಭಕೋರಿದರು. ಅತ್ತ ಪ್ರೇಕ್ಷಕ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Shubman Gill, IPL 2023: ಡು ಪ್ಲೆಸಿಸ್ ಬಳಿಯಿದ್ದ ಆರೆಂಜ್ ಕ್ಯಾಪ್ ವಶಪಡಿಸಿಕೊಂಡ ಗಿಲ್..!

ದಾಖಲೆಗಳ ಸರದಾರ ಗಿಲ್:

ಈ ಆವೃತ್ತಿಯ ಕಳೆದ 4 ಪಂದ್ಯಗಳಲ್ಲಿ ಮೂರು ಶತಕ ಬಾರಿಸಿರುವ ಗಿಲ್ 2016 ರಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಶತಕ ಹಿಂದಿದ್ದಾರಷ್ಟೆ. ಅಲ್ಲದೆ ಕೊಹ್ಲಿ ನಂತರ ಒಂದು ಆವೃತ್ತಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಗಿಲ್ ಪಾತ್ರರಾಗಿದ್ದಾರೆ. ಹಾಗೆಯೇ ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಈ ಹಿಂದೆ 2016 ರ ಆವೃತ್ತಿಯಲ್ಲಿ ಕಿಂಗ್ ಕೊಹ್ಲಿ ಆರ್​ಸಿಬಿ ಪರ 973 ರನ್ ಬಾರಿಸಿ ಒಂದು ಆವೃತ್ತಿಯಲ್ಲಿ ಅತು ಹೆಚ್ಚು ರನ್ ಬಾರಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗಿಲ್ ಸದ್ಯ 16 ಪಂದ್ಯಗಳಿಂದ 851 ರನ್ ಕಲೆಹಾಕಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ತಂಡ, ಗಿಲ್ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 233 ರನ್​ಗಳಿಸಿತ್ತು. ಈ ಬಹೃತ್ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್​ 18.2 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಗಿ ಈ ವರ್ಷದ ಐಪಿಎಲ್​ ಜರ್ನಿಯನ್ನು ಮುಗಿಸಿತು. ಮುಂಬೈ ಇಂಡಿಯನ್ಸ್​​ ಪರ ಸೂರ್ಯ ಕುಮಾರ್ ಯಾದವ್ 61 ರನ್​ಗಳಿಸಿದರು. ತಿಲಕ್ ವರ್ಮಾ 43, ಗ್ರೀನ್ 30 ರನ್​ಗಳಿಸಿದರು. ಗುಜರಾತ್ ಪರ ಮೋಹಿತ್ ಶರ್ಮಾ 5 ವಿಕೆಟ್ ಕಿತ್ತರು. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು. ಗಿಲ್ ಪಂದ್ಯಶ್ರೇಷ್ಠ ಬಾಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/gt-vs-mi-qualifier-2-watch-the-reaction-of-rohit-sharma-and-jay-shah-when-shubman-gill-scored-a-century-vb-587884.html

Leave a Reply

Your email address will not be published. Required fields are marked *