Virender Sehwag: ಐಪಿಎಲ್ 2023 ಟಾಪ್ 5 ಬ್ಯಾಟರ್ಸ್​ನಲ್ಲಿ ಕೊಹ್ಲಿ, ಗಿಲ್ ಇಲ್ಲ: ಸೆಹ್ವಾಗ್ ಹೆಸರಿಸಿದ್ದು ಯಾರನ್ನ ನೋಡಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಮೇ 28 ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಫೈನಲ್​ನಲ್ಲಿ ಮುಖಾಮುಖಿ ಆಗಲಿದೆ.ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಓಪನರ್ ವಿರೇಂದ್ರ ಸೆಹ್ವಾಗ್ ಐಪಿಎಲ್ 2023ರ 5 ಅತ್ಯುತ್ತಮ ಬ್ಯಾಟರ್​ಗಳನ್ನು ಹೆಸರಿಸಿದ್ದಾರೆ. ಅಚ್ಚರಿ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಹೆಸರು ಇದರಲ್ಲಿಲ್ಲ.ನಾನು ಐಪಿಎಲ್ 2023ರ 5 ಸ್ಟಾರ್ ಬ್ಯಾಟರ್​ಗಳನ್ನು ಆಯ್ಕೆ ಮಾಡುತ್ತೇನೆ. ಆದರೆ, ಇದರಲ್ಲಿ ಹೆಚ್ಚಿನ ಓಪನರ್​ಗಳನ್ನು ಹೆಸರಿಸುವುದಿಲ್ಲ. ಯಾಕೆಂದರೆ ಅವರು ಆರಂಭದಲ್ಲೇ ಬ್ಯಾಟಿಂಗ್​ಗೆ ಬರುವುದರಿಂದ ಅವರಿಗೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.ನನ್ನ ತಲೆಗೆ ಬರುವ ಮೊದಲ ಆಯ್ಕೆ ರಿಂಕು ಸಿಂಗ್‌. ಒಬ್ಬ ಬ್ಯಾಟರ್ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸುವುದು ಸುಲಭದ ವಿಚಾರವಲ್ಲ. ರಿಂಕು ಸಿಂಗ್ ಮಾತ್ರ ಅದನ್ನು ಮಾಡಿದ್ದಾರೆ. ಎರಡನೇ ಆಯ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ. ಅವರು 33 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ಫೇಲ್ ಆಗಿದ್ದ ಅವರು ಈ ಬಾರಿ ಸಿಕ್ಸರ್‌ಗಳನ್ನು ಹೊಡೆಯಬೇಕು ಎಂಬ ಸ್ಪಷ್ಟ ಮನಸ್ಥಿತಿಯೊಂದಿಗೆ ಬಂದಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.ನನ್ನ ಮೂರನೇಯ ಆಯ್ಕೆ ಯಶಸ್ವಿ ಜೈಸ್ವಾಲ್. ರಾಜಸ್ಥಾನ್ ತಂಡದ ಈ ಓಪನರ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ನಂತರ ನಾನು ಸೂರ್ಯಕುಮಾರ್ ಯಾದವ್ ಹೆಸರು ತೆಗೆದುಕೊಳ್ಳುತ್ತೇನೆ. ಆರಂಭದಲ್ಲಿ ಇವರು ಸೊನ್ನೆ ಸುತ್ತಿ ಸಾಕಷ್ಟು ಟೀಕೆಗೆ ಗುರಿಯಾದರು. ಆದರೆ, ನಂತರ ಇವರು ನೀಡಿದ ಪ್ರದರ್ಶನ ಅದ್ಭುತವಾಗಿತ್ತು - ವಿರೇಂದ್ರ ಸೆಹ್ವಾಗ್.ಕೊನೆಯದಾಗಿ ನಾನು ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರನ್ನು ತೆಗೆದುಕೊಳ್ಳುತ್ತೇನೆ. ಅವರು ಆಡುತ್ತಿದ್ದ ತಂಡ ಹೈದರಾಬಾದ್. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಹೆಚ್ಚು ರನ್ ಗಳಿಸಿದರು. ಸ್ಪಿನ್ ಮತ್ತು ವೇಗದ ಬೌಲಿಂಗ್​ಗೆ ಹೊಡೆಯುವ ಅಪರೂಪದ ವಿದೇಶಿ ಆಟಗಾರ ಅವರು ಎಂಬುದು ಸೆಹ್ವಾಗ್ ಮಾತು.

source https://tv9kannada.com/photo-gallery/cricket-photos/virender-sehwag-picked-ipl-2023-top-five-batters-virat-kohli-and-shubman-gill-names-are-not-in-his-list-vb-587990.html

Leave a Reply

Your email address will not be published. Required fields are marked *