Skip to content
  • Saturday, July 5, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • IPL 2023: ‘ಮಿಷನ್ 123’; ಕಿಂಗ್ ಕೊಹ್ಲಿ ದಾಖಲೆಯ ಮೇಲೆ ಕಣ್ಣಿಟ್ಟ ಪ್ರಿನ್ಸ್ ಗಿಲ್..!
Sports

IPL 2023: ‘ಮಿಷನ್ 123’; ಕಿಂಗ್ ಕೊಹ್ಲಿ ದಾಖಲೆಯ ಮೇಲೆ ಕಣ್ಣಿಟ್ಟ ಪ್ರಿನ್ಸ್ ಗಿಲ್..!

May 27, 2023
samagrasuddi

ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 61 ರನ್​ಗಳಿಂದ ಮಣಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಇದೀಗ ಭಾನುವಾರ ಮೋದಿ ಮೈದಾನದಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಇದೇ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್​ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.ಇಡೀ ಆವೃತ್ತಿಯಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ 3 ಶತಕ ಸಿಡಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಎನಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ 851 ರನ್ ಬಾರಿಸಿರುವ ಗಿಲ್ ಕಿಂಗ್ ಕೊಹ್ಲಿಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.ಸಿಎಸ್​ಕೆ ವಿರುದ್ಧದ ಫೈನಲ್​ ಪಂದ್ಯದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಜ್ಜಾಗಿರುವ ಗಿಲ್, ಈ ಪಂದ್ಯದಲ್ಲಿ 123 ರನ್ ಬಾರಿಸಿದರೆ, ಕೊಹ್ಲಿ ಬರೆದ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ. ಅಲ್ಲದೆ ದಾಖಲೆಯ ಶತಕ ಸಿಡಿಸುವುದರೊಂದಿಗೆ ಗುಜರಾತ್ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡಲು ಪ್ರಯತ್ನಿಸಲಿದ್ದಾರೆ.ವಾಸ್ತವವಾಗಿ ಫೈನಲ್ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಲಿದ್ದಾರೆ.ಸದ್ಯ ಐಪಿಎಲ್‌ನ ಒಂದು ಸೀಸನ್‌ನಲ್ಲಿ 973 ರನ್‌ಗಳ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಐಪಿಎಲ್ 2016 ರಲ್ಲಿ ಕಿಂಗ್ ಕೊಹ್ಲಿ ಮಾಡಿದ ಮ್ಯಾಜಿಕಲ್ ಫಿಗರ್ ಅನ್ನು ಮೀರಿಸಲು ಶುಭ್‌ಮನ್ ಗಿಲ್ 123 ರನ್‌ಗಳ ಹಿಂದೆ ಇದ್ದಾರೆ. ಗಿಲ್ ಈ ಐಪಿಎಲ್​ನಲ್ಲಿ ಇದುವರೆಗೆ ಆಡಿದ 16 ಪಂದ್ಯಗಳಲ್ಲಿ 156.43 ಸ್ಟ್ರೈಕ್ ರೇಟ್‌ನಲ್ಲಿ 851 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಅತ್ಯಧಿಕ ರನ್ ಬಾರಿಸಿದ ದಾಖಲೆ ಮುರಿಯುವದರೊಂದಿಗೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕೊಹ್ಲಿ ದಾಖಲೆಯನ್ನು ಗಿಲ್ ಸರಿಗಟ್ಟಲಿದ್ದಾರೆ. ಕೊಹ್ಲಿ ಒಂದು ಸೀಸನ್​ನಲ್ಲಿ 4 ಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿದೆ.ಇನ್ನು ಫೈನಲ್​ನಲ್ಲಿ ಚೆನ್ನೈ ತಂಡವನ್ನು ಗುಜರಾತ್ ಎದುರಿಸುತ್ತಿದ್ದು ಧೋನಿ ತಂಡದ ವಿರುದ್ಧ ಶುಭಮನ್ ಗಿಲ್ ಪ್ರದರ್ಶನವನ್ನು ನೋಡುವುದಾದರೆ.. ಚೆನ್ನೈ ವಿರುದ್ಧ 12 ಪಂದ್ಯಗಳನ್ನಾಡಿರುವ ಗಿಲ್ 301 ರನ್ ಬಾರಿಸಿದ್ದಾರೆ. ಅಲ್ಲದೆ ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 63 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಗಿಲ್ ಅವರ ಈ 12 ಪಂದ್ಯಗಳಲ್ಲಿ 3 ಅರ್ಧಶತಕಗಳು ಸೇರಿವೆ.

source https://tv9kannada.com/photo-gallery/cricket-photos/ipl-2023-final-shubman-gill-eye-on-virat-kohli-big-record-psr-588268.html

Tags: Cricket, IPL, IPL 2023, RCB, samagrasuddi, Shubman Gill, T-20, TATA IPL 2023, Virat Kohli, ಸಮಗ್ರ ಸುದ್ದಿ

Post navigation

T20 Record: 11 ಸಿಕ್ಸ್​, 4 ಫೋರ್: ಟಿ20 ಬ್ಲಾಸ್ಟ್​ನಲ್ಲಿ ಅತೀ ವೇಗದ ಶತಕದ ದಾಖಲೆ
IPL 2023: ‘ಇದು ಫ್ಯಾಮಿಲಿ ವಿಚಾರ’; ಪಂದ್ಯದ ವೇಳೆ ಒಟ್ಟಿಗೆ ಕಾಣಿಸಿಕೊಂಡ ಗಿಲ್- ಸಚಿನ್ ಮೇಲೆ ಮೀಮ್ಸ್ ಸುರಿಮಳೆ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
Health

ಪ್ರತಿನಿತ್ಯ ಈ 3 ಹಣ್ಣುಗಳ ಸೇವನೆಯಿಂದ ಮುಖದ ಸೊಕ್ಕು ಮಾಯ, ಚರ್ಮದ ಹೊಳಪು ಪಳ ಪಳ! | “Facial Wrinkles”

July 3, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ನೀರಜ್ ಚೋಪ್ರಾ ಪ್ರಧಾನದ ಆಕರ್ಷಣೆ: ಬೆಂಗ್ಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಎನ್ ಸಿ ಕ್ಲಾಸಿಕ್ ಸ್ಪರ್ಧೆ
  • 📝 ಎಸ್‌ಎಸ್‌ಎಲ್‌ಸಿ ಬ್ಲೂಪ್ರಿಂಟ್‌ನಲ್ಲಿ ಎಲ್ಲಾ ಮಾದರಿ ಅಂಕಗಳ ಪ್ರಶ್ನೆ
  • “WCL 2025”: ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ; ಮೊದಲ ಎದುರಾಳಿ ಪಾಕಿಸ್ತಾನ.
  • ಭಾರತ – ಇಂಗ್ಲೆಂಡ್ 2ನೇ ಟೆಸ್ಟ್‌: ಆಕಾಶ್‌ – ಸಿರಾಜ್‌ ದಾಳಿಗೆ ಕುಸಿದ ಆಂಗ್ಲರು – ಇಬ್ಬರೂ ವೇಗಿಗಳು ಕಬಳಿಸಿದ ವಿಕೆಟ್ ಎಷ್ಟು?
  • ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress