IPL 2023 Final: ಐಪಿಎಲ್ ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಇಲ್ಲಿದೆ ಮಾಹಿತಿ

IPL 2023 Final: ಐಪಿಎಲ್​ ಫೈನಲ್​ಗೆ ಕೌಂಟ್ ಡೌನ್​ ಶುರುವಾಗಿದೆ. ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ.ಏಕೆಂದರೆ 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಅಹಮದಾಬಾದ್​ನಾದ್ಯಂತ ಉತ್ತಮ ಮಳೆಯಾಗಿತ್ತು. ಇದಾಗ್ಯೂ ಪಂದ್ಯದ ಆರಂಭದ ವೇಳೆ ಮಳೆ ನಿಂತಿದ್ದರಿಂದ ತುಸು ತಡವಾಗಿ ಪಂದ್ಯವನ್ನು ಶುರು ಮಾಡಲಾಗಿತ್ತು. ಇದೀಗ ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಏನಾಗಲಿದೆ ಎಂಬುದೇ ಪ್ರಶ್ನೆ.ಒಂದು ವೇಳೆ ಫೈನಲ್ ಪಂದ್ಯದ ಮಳೆ ಬಂದರೆ ಐಪಿಎಲ್ ರೈನ್ ರೂಲ್ಸ್ ಪ್ರಕಾರವೇ ಪಂದ್ಯ ನಡೆಯಲಿದೆ. ಅಂದರೆ ಮಳೆ ಬಂದರೆ ಪಂದ್ಯವನ್ನು ಆಯೋಜಿಸಲು ಕೆಲ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮದಂತೆ ಪಂದ್ಯವನ್ನು ಆಯೋಜಿಸಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಆ ನಿಯಮಗಳೇನು? ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...- ಫೈನಲ್​ಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್​ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್​ಗಳ ಕಡಿತಕ್ಕೆ ಮುಂದಾಗಬಹುದು) - ಮಳೆಯಿಂದಾಗಿ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.- ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.- ಇನ್ನು 11.56 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್​ ನಡೆಯಲಿದೆ. ಆದರೆ ಸೂಪರ್ ಓವರ್​ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50 ಕ್ಕೆ ಸೂಪರ್ ಓವರ್​ ಪಂದ್ಯ ಶುರುವಾಗಲಿದೆ.- ಇನ್ನು ಸೂಪರ್ ಓವರ್​ ಕೂಡ ನಡೆಸಲು ಸಾಧ್ಯವಾಗದಿದ್ದರೆ ಮಾತ್ರ ಫೈನಲ್ ಪಂದ್ಯವು ರದ್ದಾಗಲಿದೆ. ಒಂದು ವೇಳೆ ಪಂದ್ಯ ರದ್ದಾದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್​ ಮೂಲಕ ಚಾಂಪಿಯನ್ಸ್ ತಂಡವನ್ನು ನಿರ್ಧರಿಸಲಾಗುತ್ತದೆ.- ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲು ಸಾಧ್ಯವಾಗದಿದ್ದರೆ, ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.ಅಂದಹಾಗೆ ಐಪಿಎಲ್ ವೇಳಾಪಟ್ಟಿಯಲ್ಲಿ ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಮೀಸಲು ದಿನವನ್ನು ಘೋಷಿಸಿಲ್ಲ. ಆದ್ದರಿಂದ, IPL 2023 ರ ಅಂತಿಮ ವಿಜೇತರನ್ನು ನಿಗದಿತ ಪಂದ್ಯದ ದಿನದಂದು (ಭಾನುವಾರ, ಮೇ 28) ನಿರ್ಧರಿಸಲಾಗುತ್ತದೆ.

source https://tv9kannada.com/photo-gallery/cricket-photos/ipl-2023-rain-rules-what-happens-if-weather-interrupts-play-in-ipl-final-kannada-news-zp-588260.html

Leave a Reply

Your email address will not be published. Required fields are marked *