Neeraj Chopra: ಮತ್ತೆ ಇಂಜುರಿಗೆ ತುತ್ತಾದ ನೀರಜ್ ಚೋಪ್ರಾ! ಪ್ರಮುಖ ಕ್ರೀಡಾಕೂಟದಿಂದ ಔಟ್

ಹಾಲಿ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಮುಂದಿನ ತಿಂಗಳ ಎಫ್‌ಬಿಕೆ ಕ್ರೀಡಾಕೂಟದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದೆ ಸರಿಯುವುದಾಗಿ ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ನೀರಜ್, ಇತ್ತೀಚೆಗೆ, ಅಭ್ಯಾಸದ ಸಮಯದಲ್ಲಿ ನಾನು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದೆ. ವೈದ್ಯಕೀಯ ತಪಾಸಣೆಯ ಬಳಿಕ ನಾನು ಮುನ್ನೇಚ್ಚರಿಕೆಯ ಕ್ರಮವಾಗಿ ನಾನು ಎಫ್‌ಬಿಕೆ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.ನೆದರ್ಲ್ಯಾಂಡ್ಸ್‌ನ ಹೆಂಗೆಲೋದಲ್ಲಿ ಫ್ಯಾನಿ ಬ್ಲಾಂಕರ್ಸ್-ಕೋಯೆನ್ ಗೇಮ್ಸ್ ಜೂನ್ 4 ರಂದು ನಡೆಯಲ್ಲಿದ್ದು ಈ ಕ್ರೀಡಾಕೂಟದಿಂದ ಇದೀಗ ನೀರಜ್ ಹಿಂದೆ ಸರಿದಿದ್ದಾರೆ.ಈ ವರ್ಷವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿದ್ದ ನೀರಜ್, ದೋಹಾ ಡೈಮಂಡ್ ಲೀಗ್​ನಲ್ಲಿ 88.67 ಮೀ ಜಾವಲಿನ್​ ಎಸೆಯುವ ಮೂಲಕ ಪದಕ ಗೆದ್ದಿದ್ದರು.ಇದೀಗ ಇಂಜುರಿಗೆ ತುತ್ತಾಗಿರುವ 25 ವರ್ಷದ ನೀರಜ್, ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನ ಟರ್ಕುನಲ್ಲಿ ನಡೆಯುವ ಪಾವೊ ನೂರ್ಮಿ ಗೇಮ್ಸ್‌ ಮೂಲಕ ಮತ್ತೆ ಅಖಾಡಕ್ಕೆ ಎಂಟ್ರಿಕೊಡುವ ಸಾಧ್ಯತೆಯಿದೆ.

source https://tv9kannada.com/photo-gallery/javelin-thrower-neeraj-chopra-pulls-out-of-fbk-games-after-suffering-muscle-strain-psr-589669.html

Leave a Reply

Your email address will not be published. Required fields are marked *