IPL 2023 Car Winner: RCB ಆಟಗಾರನ ಪಾಲಾದ ಟಾಟಾ ಕಾರ್

IPL 2023 Car Winner: ಐಪಿಎಲ್ ಸೀಸನ್​ 16 ಮುಕ್ತಾಯವಾಗಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK)​ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಬ್ಯಾಟಿಂಗ್ ಮೂಲಕ ಇಡೀ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್​ಮನ್ ಗಿಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್​​ನಲ್ಲಿ 27 ವಿಕೆಟ್ ಪಡೆದ ಮೊಹಮ್ಮದ್ ಶಮಿ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.
ಹಾಗೆಯೇ ಐಪಿಎಲ್ ಸೀಸನ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ (or 10 ಲಕ್ಷ ರೂ.)​ ಈ ಬಾರಿ ಆಲ್​ರೌಂಡರ್ ಆಟಗಾರನ ಪಾಲಾಗಿರುವುದು ವಿಶೇಷ.ಹೌದು, ಸೂಪರ್ ಸ್ಟ್ರೈಕರ್​ಗೆ ಘೋಷಿಸಲಾಗಿದ್ದ ಟಾಟಾ ಟಿಯಾಗೊ ಇವಿ ಕಾರ್ RCB​​ ತಂಡದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಪಾಲಾಗಿದೆ.ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್​ವೆಲ್ ಈ ಬಾರಿ 14 ಇನಿಂಗ್ಸ್​ಗಳಲ್ಲಿ 400 ರನ್ ಬಾರಿಸಿದ್ದರು. ಅದು ಕೂಡ 183.48 ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.ಈ ಮೂಲಕ ಈ ಸೀಸನ್​ನ ಸೂಪರ್ ಸ್ಟ್ರೈಕರ್ ಆಗಿ ಗ್ಲೆನ್ ಮ್ಯಾಕ್ಸ್​ವೆಲ್ ಹೊರಹೊಮ್ಮಿದ್ದಾರೆ. ಅದರಂತೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ ಅನ್ನು​ ಆರ್​ಸಿಬಿ ಆಲ್​​ರೌಂಡರ್ ತಮ್ಮದಾಗಿಸಿಕೊಂಡಿದ್ದಾರೆ.

source https://tv9kannada.com/photo-gallery/cricket-photos/ipl-2023-car-winner-who-won-the-super-striker-of-the-ipl-2023-kannada-news-zp-589140.html

Views: 0

Leave a Reply

Your email address will not be published. Required fields are marked *