IPL 2023: RCB ತಂಡದಿಂದ 7 ಆಟಗಾರರಿಗೆ ಗೇಟ್ ಪಾಸ್ ಸಾಧ್ಯತೆ

IPL 2023: ಐಪಿಎಲ್ ಸೀಸನ್ 16 ಮುಕ್ತಾಯಗೊಂಡಿದೆ. ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಟೂರ್ನಿ ಆರಂಭಿಸಿದ್ದ ಆರ್​ಸಿಬಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ್ದ ಆರ್​ಸಿಬಿ ಜಯ ಸಾಧಿಸಿದ್ದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ವಿಶೇಷ ಎಂದರೆ ಈ ಏಳು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದು ಕೇವಲ ನಾಲ್ವರು ಆಟಗಾರರು ಮಾತ್ರ.ಅಂದರೆ ಟೂರ್ನಿಯುದ್ಧಕ್ಕೂ ಫಾಫ್ ಡುಪ್ಲೆಸಿಸ್ (730 ರನ್), ವಿರಾಟ್ ಕೊಹ್ಲಿ (639 ರನ್), ಗ್ಲೆನ್ ಮ್ಯಾಕ್ಸ್​ವೆಲ್ (400 ರನ್) ಹಾಗೂ ಮೊಹಮ್ಮದ್ ಸಿರಾಜ್ (19 ವಿಕೆಟ್) ಮಿಂಚಿದ್ದು ಬಿಟ್ಟರೆ, ಉಳಿದವರು ಲೆಕ್ಕಕ್ಕಿದ್ದರೇ ಹೊರತು ಆಟಕ್ಕಿರಲಿಲ್ಲ.
ಹೀಗಾಗಿಯೇ ಮುಂದಿನ ಸೀಸನ್​ ಐಪಿಎಲ್​ಗೂ ಮುನ್ನ ಆರ್​ಸಿಬಿ ತಂಡಕ್ಕೆ ಮೇಜರ್ ಸರ್ಜರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಈ ಬಾರಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈ ಬಿಡುವುದು ಬಹುತೇಕ ಖಚಿತ ಎನ್ನಲಾಗಿದೆ. ಅದರಂತೆ ಈ ಸಲ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...1- ದಿನೇಶ್ ಕಾರ್ತಿಕ್: 13 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರುವ ದಿನೇಶ್ ಕಾರ್ತಿಕ್ ಕಲೆಹಾಕಿರುವುದು ಕೇವಲ 140 ರನ್ ಮಾತ್ರ. ಸದ್ಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿರುವ ಕಾರಣ ಡಿಕೆಯನ್ನು ಕೂಡ ಉಳಿಸಿಕೊಳ್ಳುವುದಿಲ್ಲ ಎನ್ನಬಹುದು.2- ಮಹಿಪಾಲ್ ಲೋಮ್ರರ್: 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಲೋಮ್ರರ್ 135 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಲೋಮ್ರರ್​ಗೂ ಗೇಟ್ ಪಾಸ್ ನೀಡಲಿದೆ.3- ಅನೂಜ್ ರಾವತ್: 7 ಇನಿಂಗ್ಸ್​ ಆಡಿರುವ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 91 ರನ್​ ಮಾತ್ರ. ಇತ್ತ 3.4 ಕೋಟಿಗೆ ಖರೀದಿಸಿರುವ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ ತಂಡದಿಂದ ರಿಲೀಸ್ ಮಾಡುವುದು ಖಚಿತ.4- ಶಹಬಾಝ್ ಅಹ್ಮದ್: 10 ಪಂದ್ಯಗಳಲ್ಲಿ 6 ಮ್ಯಾಚ್​ನಲ್ಲಿ ಬ್ಯಾಟ್ ಮಾಡಿರುವ ಶಹಬಾಝ್ ಕಲೆಹಾಕಿದ್ದು 42 ರನ್​ ಮಾತ್ರ. ಇನ್ನು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಹೀಗಾಗಿ ಶಹಬಾಝ್​ನ ಕೈ ಬಿಡುವುದು ಬಹುತೇಕ ಖಚಿತ ಎನ್ನಬಹುದು.5- ಕೇದರ್ ಜಾಧವ್: 1 ಇನಿಂಗ್ಸ್ ಆಡಿದ್ದ ಹಿರಿಯ ಆಟಗಾರ ಕೇದರ್ ಜಾಧವ್ ಕಲೆಹಾಕಿದ್ದು ಕೇವಲ 12 ರನ್​ ಮಾತ್ರ. ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಜಾಧವ್ ಅವರನ್ನು ಉಳಿಸಿಕೊಳ್ಳುವುದು ಅನುಮಾನ.6- ಸುಯಶ್ ಪ್ರಭುದೇಸಾಯಿ: 5 ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ಸುಯಶ್ 4 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 35 ರನ್ ಮಾತ್ರ. ಹೀಗಾಗಿ ಸುಯಶ್​ರನ್ನು ಕೂಡ ರಿಲೀಸ್ ಮಾಡಬಹುದು.7- ಕರ್ಣ್ ಶರ್ಮಾ: 7 ಪಂದ್ಯಗಳಲ್ಲಿ 223 ರನ್ ನೀಡಿ ಕರ್ಣ್ ಶರ್ಮಾ ಒಟ್ಟು 10 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಮುಂದಿನ ಸೀಸನ್​ಗಾಗಿ 35 ವರ್ಷದ ಹಿರಿಯ ಆಟಗಾರನನ್ನು ಆರ್​ಸಿಬಿ ಉಳಿಸಿಕೊಳ್ಳುವುದು ಅನುಮಾನ.RCB ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-players-who-should-be-released-in-ipl-2024-kannada-news-zp-590511.html

Views: 0

Leave a Reply

Your email address will not be published. Required fields are marked *