IPL 2023: ಐಪಿಎಲ್​​ನ ಬೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಕೆವಿನ್ ಪೀಟರ್ಸನ್

IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನ ಸೀಸನ್ 16 ಗೆ ತೆರೆಬಿದ್ದಿದೆ. ಈ ಬಾರಿಯ ಫೈನಲ್​ನಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್​ಗೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.ಈ ಬಾರಿಯ ಐಪಿಎಲ್​ನಲ್ಲಿ ಹಿರಿಯ ಆಟಗಾರರ ಜೊತೆ ಕಿರಿಯರೂ ಕೂಡ ಮಿಂಚಿರುವುದು ವಿಶೇಷ. ಹೀಗಾಗಿಯೇ ಆರೆಂಜ್ ಕ್ಯಾಪ್ ಹಾಗೂ ಇತರೆ ಪ್ರಶಸ್ತಿ ಪಟ್ಟಿಗಳಲ್ಲೂ ಹಿರಿಯರ ಜೊತೆ ಕಿರಿಯರೂ ಕೂಡ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಟೂರ್ನಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿದ್ದರು. ಅಲ್ಲದೆ ಐಪಿಎಲ್​ 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಬೆಸ್ಟ್ ಪ್ಲೇಯಿಂಗ್ ಇಲೆವೆನ್​ ಅನ್ನು ಪ್ರಕಟಿಸಿದ್ದಾರೆ.ವಿಶೇಷ ಎಂದರೆ ಪೀಟರ್ಸನ್ ಆಯ್ಕೆ ಮಾಡಿರುವ ಅತ್ಯುತ್ತಮ ತಂಡದ ಪಟ್ಟಿಯಲ್ಲಿ ಚಾಂಪಿಯನ್​ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್​, ಡೆವೊನ್ ಕಾನ್ವೆಗೆ ಸ್ಥಾನ ನೀಡಲಾಗಿಲ್ಲ. ಹಾಗೆಯೇ ಆರ್​ಸಿಬಿ ತಂಡದ ಮೂವರನ್ನು ಆಯ್ಕೆ ಮಾಡಿದ್ದಾರೆ. KP ಆಯ್ಕೆ ಮಾಡಿರುವ ಬೆಸ್ಟ್​ ಪ್ಲೇಯಿಂಗ್​ ಇಲೆವೆನ್​ ಈ ಕೆಳಗಿನಂತಿದೆ...1- ಫಾಫ್ ಡುಪ್ಲೆಸಿಸ್ (RCB)2- ಶುಭ್​ಮನ್​ ಗಿಲ್ (GT)3- ವಿರಾಟ್ ಕೊಹ್ಲಿ (RCB)4- ಸೂರ್ಯಕುಮಾರ್ ಯಾದವ್ (MI)5- ಹೆನ್ರಿಕ್ ಕ್ಲಾಸೆನ್ (SRH)6- ರಿಂಕು ಸಿಂಗ್ (KKR)7- ರಶೀದ್ ಖಾನ್ (GT)8- ಅಕ್ಷರ್ ಪಟೇಲ್ (DC)9- ಮೊಹಮ್ಮದ್ ಶಮಿ (GT)10- ಮೊಹಮ್ಮದ್ ಸಿರಾಜ್ (RCB)11- ಮಥೀಶ ಪತಿರಾಣ (CSK)

source https://tv9kannada.com/photo-gallery/cricket-photos/ipl-2023-kevin-pietersen-picks-his-best-xi-for-ipl-2023-kannada-news-zp-591052.html

Leave a Reply

Your email address will not be published. Required fields are marked *