IPL 2023: 74 ಪಂದ್ಯಗಳಲ್ಲಿ ಮೂಡಿಬಂದ ಒಟ್ಟು ರನ್ ಎಷ್ಟು ಗೊತ್ತಾ?

IPL 2023: ಈ ಬಾರಿಯ ಐಪಿಎಲ್​ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖ ದಾಖಲೆಗಳೆಂದರೆ ಅತೀ ಹೆಚ್ಚು ರನ್. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಹಿಂದೆಂದೂ ಕಂಡರಿಯದಂತೆ ರನ್​ ಸುರಿಮಳೆಯಾಗಿದೆ.ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 1124 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಇದು ಹಿಂದೆಂದಿಗಿಂತಲೂ ಹೆಚ್ಚು. ಅಂದರೆ ಐಪಿಎಲ್ 2022 ರಲ್ಲಿ 1062 ಸಿಕ್ಸ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇನ್ನು 74 ಪಂದ್ಯಗಳಲ್ಲಿ ಒಟ್ಟು 2172 ಫೋರ್​ಗಳನ್ನು ಬಾರಿಸಿದ್ದಾರೆ.ಸಿಕ್ಸ್​-ಫೋರ್​ಗಳಲ್ಲದೆ ಈ ಬಾರಿ ಒಟ್ಟು 106 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇದಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ಸೆಂಚುರಿಗಳನ್ನು ಬಾರಿಸಿದ್ದು ವಿಶೇಷ. 2022 ರಲ್ಲಿ 8 ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು. ಆದರೆ ಈ ಬಾರಿ 12 ಶತಕಗಳು ಮೂಡಿಬಂದಿವೆ.ಹಾಗೆಯೇ ಐಪಿಎಲ್ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ್ದು ಕೂಡ ಈ ಬಾರಿ ಎಂಬುದು ವಿಶೇಷ. ಐಪಿಎಲ್ 2023 ರಲ್ಲಿ ಒಟ್ಟು 153 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಕಳೆದ ಸೀಸನ್​ನಲ್ಲಿ 118 ಅರ್ಧಶತಕ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.ಇನ್ನು ಒಟ್ಟು 74 ಪಂದ್ಯಗಳಲ್ಲಿ ಈ ಬಾರಿ 24 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಹಿಂದೆ ಅಂದರೆ 2022 ರಲ್ಲಿ ಒಟ್ಟು 23,052 ರನ್ ಗಳಿಸಿದ್ದು ಇದುವರೆಗಿನ ಶ್ರೇಷ್ಠ ದಾಖಲೆಯಾಗಿತ್ತು.ಆದರೆ ಈ ಬಾರಿ ಬ್ಯಾಟ್ಸ್​ಮನ್​ಗಳ​ ಅಬ್ಬರದೊಂದಿಗೆ 74 ಪಂದ್ಯಗಳಿಂದ ಒಟ್ಟು 24,428 ರನ್ ಕಲೆಹಾಕಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಮೂಡಿಬಂದ ಸೀಸನ್​ವೊಂದರ ಗರಿಷ್ಠ ರನ್​ಗಳಿಕೆ ಎಂಬುದು ವಿಶೇಷ.

source https://tv9kannada.com/photo-gallery/cricket-photos/ipl-2023-sets-highest-run-record-kannada-news-zp-591305.html

Leave a Reply

Your email address will not be published. Required fields are marked *