Team India New Jersey: ಹೊಸ ಜೆರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು..!

Team India New Jersey: ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆಯಾಗಿದೆ. ಅಡಿಡಾಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಮೂಡಿ ಬಂದಿರುವ ಹೊಸ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಈ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನು ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಸಹ ಹೊಸ ಜೆರ್ಸಿಯಲ್ಲಿ ಮಿಂಚಿದ್ದಾರೆ.ಅದರಂತೆ ಇನ್ಮುಂದೆ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡದ ಜೆರ್ಸಿ ಮೇಲೆ ನೀಲಿ ಬಣ್ಣದಲ್ಲಿ ಇಂಡಿಯಾ ಎಂಬ ಬರಹ ಕಾಣಿಸಿಕೊಳ್ಳಲಿದೆ. ಅಲ್ಲದೆ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಪಟ್ಟಿ ಕಂಡು ಬರಲಿದೆ.ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ವಿತ್​ ಔಟ್ ಕಾಲರ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಜೆರ್ಸಿಯನ್ನು ಕಡು ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ.ಇನ್ನು ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡವು ತಿಳಿ ನೀಲಿ ಜೆರ್ಸಿಯನ್ನು ಧರಿಸಲಿದೆ. ಈ ಜೆರ್ಸಿಯ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಬಿಳಿ ಪಟ್ಟಿಗಳನ್ನು ನೀಡಲಾಗಿದೆ.
ಇದಕ್ಕೂ ಮುನ್ನ ಎಂಪಿಎಲ್ ಕಂಪೆನಿಯು ಭಾರತ ತಂಡದ ಕಿಟ್ ಪ್ರಾಯೋಜಕರಾಗಿದ್ದರು. ಆದರೆ ಇತ್ತೀಚೆಗೆ ಎಂಪಿಎಲ್​ ಪ್ರಾಯೋಜಕತ್ವ ಮುಕ್ತಾಯಗೊಂಡ ಹಿನ್ನಲೆ ಕಿಲ್ಲರ್ ಕಂಪೆನಿಗೆ ತಾತ್ಕಾಲಿಕ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಇದೀಗ ಜೂನ್ 1 ರಿಂದ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಕಂಪೆನಿ ಹೊಸ ಹೆಜ್ಜೆಯನ್ನಿಟ್ಟಿದೆ. ಅದರ ಮೊದಲ ಭಾಗವಾಗಿ ಇದೀಗ ಮೂರು ಮಾದರಿಯ ಕ್ರಿಕೆಟ್​ಗೆ ವಿಭಿನ್ನ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಇದಾಗ್ಯೂ ಏಕದಿನ ವಿಶ್ವಕಪ್​ಗೆ ಭಾರತ ಏಕದಿನ ತಂಡದ ಜೆರ್ಸಿ ಬದಲಾಗಲಿದೆ.ಸದ್ಯ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಓವಲ್ ಮೈದಾನದಲ್ಲಿ ಬುಧವಾರದಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಹೀಗಾಗಿ 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ.ಹೊಸ ಜೆರ್ಸಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ

source https://tv9kannada.com/photo-gallery/cricket-photos/team-india-new-jersey-adidas-shares-new-jerseys-of-the-indian-cricket-team-kannada-news-zp-593250.html

Leave a Reply

Your email address will not be published. Required fields are marked *