IPL 2024: ಧೋನಿ ಪಾಲಿಗೆ ವರ್ಕ್​ ಆಗಲ್ಲ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ..!

IPL 2024: ಐಪಿಎಲ್ ಸೀಸನ್ 16 ಮುಕ್ತಾಯದ ಬೆನ್ನಲ್ಲೇ ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿ ಬಗ್ಗೆಗಿನ ಪ್ರಶ್ನೆಗೆ ಕಾದು ನೋಡುವ ಎಂಬ ಉತ್ತರ ನೀಡಿ ತೆರಳಿದ್ದಾರೆ. ಸಿಎಸ್​ಕೆ ತಂಡ ಚಾಂಪಿಯನ್ ಆದ ಬಳಿಕ ಮಾತನಾಡಿದ ಧೋನಿ, ಇನ್ನೂ 8-9 ತಿಂಗಳುಗಳು ಬಾಕಿಯಿದೆ. ಆಮೇಲೆ ನೋಡೋಣ ಎನ್ನುವ ಉತ್ತರ ನೀಡಿದ್ದಾರೆ.ಹೀಗಾಗಿ ಸಿಎಸ್​ಕೆ ತಂಡದ ಕೂಲ್ ಕ್ಯಾಪ್ಟನ್ ಮುಂದಿನ ಸೀಸನ್​ನಲ್ಲೂ ಕಣಕ್ಕಿಳಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಧೋನಿ ಫ್ಯಾನ್ಸ್. ಇದಕ್ಕೆ ಮತ್ತೊಂದು ಕಾರಣ ಐಪಿಎಲ್​ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್​ ಆಯ್ಕೆ.ಐಪಿಎಲ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಇರುವುದರಿಂದ ಧೋನಿ ಇನ್ನೆರಡು ವರ್ಷಗಳ ಕಾಲ ಆಡುವ ಸಾಧ್ಯತೆಯಿದೆ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಆದರೆ ಧೋನಿಯ ವಿಷಯದಲ್ಲಿ ಇಂಪ್ಯಾಕ್ಟ್ ಸಬ್ ಆಯ್ಕೆ ವರ್ಕ್​ ಆಗುವುದಿಲ್ಲ ಎಂಬುದು ಬಹುತೇಕ ಖಚಿತ.ಅಂದರೆ ಧೋನಿ ಸಂಪೂರ್ಣ ಫಿಟ್​ನೆಸ್ ಹೊಂದಿದ್ದರೆ ಮಾತ್ರ ಮುಂದಿನ ಸೀಸನ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಸಿಎಸ್​ಕೆ ತಂಡಕ್ಕೆ ಎಂಎಸ್​ಡಿ ಎಂಬ ಬ್ಯಾಟ್ಸ್​ಮನ್​ಗಿಂತ ಧೋನಿ ಎನ್ನುವ ನಾಯಕನ ಅವಶ್ಯಕತೆ ಹೆಚ್ಚಿದೆ.ಅಂದರೆ ಧೋನಿ ಬ್ಯಾಟಿಂಗ್​ಗೆ ಇಳಿಯುತ್ತಿರುವುದು ಕೆಳ ಕ್ರಮಾಂಕದಲ್ಲಿ. ಅದರಲ್ಲೂ ಡೆತ್ ಓವರ್​ಗಳಲ್ಲಿ ಬ್ಯಾಟ್ ಬೀಸಲು ಆಗಮಿಸುವ ಎಂಎಸ್​ಡಿ ಎದುರಿಸುವುದು ಒಂದೆರೆಡು ಓವರ್​ಗಳನ್ನು ಮಾತ್ರ. ಅಂದರೆ ಧೋನಿ ಬ್ಯಾಟಿಂಗ್​ಗೆ ಇಳಿಯುತ್ತಿರುವುದು ಕೆಳ ಕ್ರಮಾಂಕದಲ್ಲಿ. ಅದರಲ್ಲೂ ಡೆತ್ ಓವರ್​ಗಳಲ್ಲಿ ಬ್ಯಾಟ್ ಬೀಸಲು ಆಗಮಿಸುವ ಎಂಎಸ್​ಡಿ ಎದುರಿಸುವುದು ಒಂದೆರೆಡು ಓವರ್​ಗಳನ್ನು ಮಾತ್ರ. ಇಲ್ಲಿ ಸಿಎಸ್​ಕೆ ತಂಡಕ್ಕೆ ಧೋನಿ ನಾಯಕನಾಗಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ. ಹೀಗಾಗಿ ಬ್ಯಾಟಿಂಗ್ ವೇಳೆ ಧೋನಿ ಜಾಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಬೇಕಾಗುತ್ತದೆ.ಇಲ್ಲಿ ಸಿಎಸ್​ಕೆ ತಂಡಕ್ಕೆ ಧೋನಿ ನಾಯಕನಾಗಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ. ಹೀಗಾಗಿ ಬ್ಯಾಟಿಂಗ್ ವೇಳೆ ಧೋನಿ ಜಾಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಬೇಕಾಗುತ್ತದೆ.ಆದರೆ ಒಂದೆರೆಡು ಓವರ್​ಗಳ ಕಾಲ ಬ್ಯಾಟಿಂಗ್ ಮಾಡಲು ಫಿಟ್​ನೆಸ್ ಹೊಂದಿಲ್ಲದಿದ್ದರೆ ಧೋನಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವುದು ಅನುಮಾನ. ಅದರಲ್ಲೂ ನಾಯಕನಾಗಿ 20 ಓವರ್​ಗಳ ಕಾಲ ಅವರು ಮೈದಾನದಲ್ಲಿರಬೇಕಾಗುತ್ತದೆ.ಅಂದರೆ ಒಂದೆರೆಡು ಓವರ್​ಗಳ ಕಾಲ ಬ್ಯಾಟ್​ ಬೀಸಲು ಫಿಟ್​ನೆಸ್​ ಹೊಂದಿದ್ದರೆ ಧೋನಿ ಖಂಡಿತವಾಗಿಯೂ ಅವರು ಮತ್ತೆ ಸಿಎಸ್​ಕೆ ಪರ ಕಣಕ್ಕಿಳಿಯಲಿದ್ದಾರೆ. ಇದರ ಹೊರತಾಗಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಕಣಕ್ಕಿಳಿಯುವುದು ಅನುಮಾನ.ಏಕೆಂದರೆ ಮೊದಲೇ ಹೇಳಿದಂತೆ ಸಿಎಸ್​ಕೆ ತಂಡಕ್ಕೆ ಬ್ಯಾಟ್ಸ್​ಮನ್​ಗಿಂತ ಚಾಣಾಕ್ಷ ನಾಯಕತ್ವದ ಧೋನಿಯ ಅಗತ್ಯತೆ ಹೆಚ್ಚು. ಹೀಗಾಗಿ 20 ಓವರ್​ಗಳ ಕಾಲ ವಿಕೆಟ್ ಕೀಪಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೆ ಮತ್ತೊಮ್ಮೆ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇಲ್ಲದಿದ್ದರೆ ಅವರೇ ಹೇಳಿದಂತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಡಗೌಟ್​ನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

source https://tv9kannada.com/photo-gallery/cricket-photos/ipl-2024-why-dhoni-wouldnt-be-an-ideal-impact-player-kannada-news-zp-593606.html

Leave a Reply

Your email address will not be published. Required fields are marked *