Chris Lynn: 6,6,6,6,6: ಕ್ರಿಸ್ ಲಿನ್ ತೂಫಾನ್ ಶತಕ

T20 BLAST 2023: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಲೀಗ್​ನಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಲಿನ್ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ನಾರ್ಥಾಂಪ್ಟನ್‌ಶೈರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲೀಸೆಸ್ಟರ್‌ಶೈರ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಲೀಸೆಸ್ಟರ್‌ಶೈರ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. 56 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಆ ಬಳಿಕ ಲೂಯಿಸ್ ಕಿಂಬರ್ ಆಸರೆಯಾದರು.27 ಎಸೆತಗಳನ್ನು ಎದುರಿಸಿದ ಕಿಂಬರ್ 3 ಭರ್ಜರಿ ಸಿಕ್ಸರ್ ಹಾಗೂ 2 ಫೋರ್​ನೊಂದಿಗೆ 41 ರನ್ ಚಚ್ಚಿದರು. ಪರಿಣಾಮ 20 ಓವರ್​ ಮುಕ್ತಾಯದ ವೇಳೆಗೆ ಲೀಸೆಸ್ಟರ್‌ಶೈರ್ ತಂಡವು 8 ವಿಕೆಟ್ ಕಳೆದುಕೊಂಡು 164 ರನ್​ ಕಲೆಹಾಕಿತು.165 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ನಾರ್ಥಾಂಪ್ಟನ್‌ಶೈರ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಎಮಿಲಿಯೋ ಕೇವಲ 13 ರನ್​ಗಳಿಸಿ ಔಟಾದರು. ಆದರೆ ಮತ್ತೊಂದೆಡೆ ಅಬ್ಬರ ಶುರು ಮಾಡಿದ ಕ್ರಿಸ್ ಲಿನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಲಿನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನಟ್ಟಿದರು. ಪರಿಣಾಮ 10 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 100ರ ಗಡಿದಾಟಿತು. ಇದಾಗ್ಯೂ ಲಿನ್ ಅಬ್ಬರ ಮಾತ್ರ ಕಡಿಮೆಯಾಗಿರಲಿಲ್ಲ.5 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳನ್ನು ಚಚ್ಚಿದ ಕ್ರಿಸ್ ಲಿನ್ ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಶತಕ ಪೂರೈಸಿದರು. ಅಲ್ಲದೆ 68 ಎಸೆತಗಳಲ್ಲಿ ಅಜೇಯ 110 ರನ್ ಬಾರಿಸುವ ಮೂಲಕ 18.5 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಭರ್ಜರಿ ಸೆಂಚುರಿ ಸಿಡಿಸಿ ನಾರ್ಥಾಂಪ್ಟನ್‌ಶೈರ್ ತಂಡದ ಗೆಲುವಿನ ರೂವಾರಿಯಾದ ಕ್ರಿಸ್ ಲಿನ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಅಂದಹಾಗೆ ಈ ಬಾರಿಯ ಐಪಿಎಲ್​ನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಿನ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಲಿನ್ ತಮ್ಮ ಸ್ಪೋಟಕ ಬ್ಯಾಟಿಂಗ್​ನ ಝಲಕ್ ತೋರಿಸಿದ್ದಾರೆ.

source https://tv9kannada.com/photo-gallery/cricket-photos/t20-blast-2023-chris-lynn-smashes-century-for-northamptonshire-kannada-news-zp-593648.html

Leave a Reply

Your email address will not be published. Required fields are marked *