WTC Final 2023: ‘ಭಾವನಾತ್ಮಕ ಕ್ಷಣವಾಗಿತ್ತು’; ತಂಡದಿಂದ ಹೊರಗಿದ್ದ ಬಗ್ಗೆ ರಹಾನೆ ಹೇಳಿದ ಮಾತುಗಳಿವು

WTC Final 2023: ‘ಭಾವನಾತ್ಮಕ ಕ್ಷಣವಾಗಿತ್ತು’; ತಂಡದಿಂದ ಹೊರಗಿದ್ದ ಬಗ್ಗೆ ರಹಾನೆ ಹೇಳಿದ ಮಾತುಗಳಿವು

ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ (World Test Championship final) ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳ ನಡುವಿನೆ ಫೈನಲ್ ಕಾಳಗ ಇದೇ ಜೂ.7 ರಿಂದ ಇಂಗ್ಲೆಂಡ್​ನ ಓವೆಲ್ ಮೈದಾನದಲ್ಲಿ ಆರಂಭವಾಗಲಿದೆ. ಹಿರಿಯ ಹಾಗೂ ಕಿರಿಯ ಆಟಗಾರರ ಮಿಶ್ರಣದೊಂದಿಗೆ ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ (Team India) ಈ ಬಾರಿಯಾದರೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲುತ್ತಾ ಎಂಬುದು ಕೋಟ್ಯಾಂತರ ಟೀಂ ಇಂಡಿಯಾ ಅಭಿಮಾನಿಗಳ ಪ್ರಶ್ನೆಯಾಗಿದೆ. ತಂಡದಲ್ಲಿ ಹಲವು ದಿಗ್ಗಜ ಆಟಗಾರರ ದಂಡೆ ಇದ್ದು, ಎಲ್ಲರೂ ಫಾರ್ಮ್​ನಲ್ಲಿರುವುದು ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿದೆ. ಒಂದೆಡೆ ಐಪಿಎಲ್​ನಲ್ಲಿ ಮಿಂಚಿದ ಕೊಹ್ಲಿ, ಗಿಲ್, ರಹಾನೆ, ಶಮಿ, ಸಿರಾಜ್, ಜಡೇಜಾ ತಮ್ಮ ಫಾರ್ಮ್​ ಮುಂದುವರೆಸುವ ತವಕದಲ್ಲಿದ್ದಾರೆ. ಇತ್ತ ಕಳೆದ ಕೆಲವು ತಿಂಗಳುಗಳಿಂದ ಇಂಗ್ಲೆಂಡ್​ನಲ್ಲೇ ಬಿಡುಬಿಟ್ಟಿರುವ ಪೂಜಾರ ಕೂಡ ಕಾಂಗರೂಗಳ ವಿರುದ್ಧ ಘರ್ಜಿಸಲು ಸನ್ನದ್ಧರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ತಂಡದ ಒಳಗಿರುವ ವಾತಾವರಣದ ಬಗ್ಗೆ, ನಾಯಕನ ನಡೆ, ರಾಹುಲ್ ದ್ರಾವಿಡ್ ಕೋಚಿಂಗ್​ ಬಗ್ಗೆ ಟೀಂ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ (Ajinkya Rahane) ಮನಬಿಚ್ಚಿ ಮಾತನಾಡಿರುವುದು ತಂಡದಲ್ಲಿರುವ ಸಕಾರಾತ್ಮಕ ಭಾವನೆಯನ್ನು ಎತ್ತಿ ತೋರಿಸುತ್ತಿದೆ.

ಅಜಿಂಕ್ಯ ರಹಾನೆ ಹೇಳಿದ್ದೇನು?

ಫೈನಲ್ ಪಂದ್ಯಕ್ಕೂ ಮುನ್ನ ಅಜಿಂಕ್ಯ ರಹಾನೆ ಬಿಸಿಸಿಐ ಟಿವಿಗೆ ಸಂದರ್ಶನ ನೀಡಿದ್ದು, ಇದರಲ್ಲಿ ನಾನು ತಂಡದಿಂದ ಹೊರಗಿರುವಾಗ, ತನ್ನ ಬೆನ್ನಿಗೆ ನಿಂತ ಸ್ನೇಹಿತರು ಮತ್ತು ಕುಟುಂಬದವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಹಾನೆ, “ಇದು ನನಗೆ ಭಾವನಾತ್ಮಕ ಸಮಯವಾಗಿತ್ತು. ತಂಡದ ಹೊರಗಿದ್ದಾಗ ಕುಟುಂಬದಿಂದ ನನಗೆ ಭಾರಿ ಬೆಂಬಲ ಸಿಕ್ಕಿತು, ಅದು ನನಗೆ ಬಹಳ ಮುಖ್ಯವಾಗಿತ್ತು. ಭಾರತ ಪರ ಆಡುವುದು ನನಗೆ ಬಹಳ ಮುಖ್ಯ. ನನ್ನ ಫಿಟ್‌ನೆಸ್‌ಗಾಗಿ ನಾನು ಸಾಕಷ್ಟು ಶ್ರಮಿಸಿದ್ದೇನೆ. “ನಾನು ದೇಶೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ನಾನು ಮತ್ತೆ ಭಾರತಕ್ಕಾಗಿ ಆಡುತ್ತೇನೆ ಎಂದು ನಂಬಿದ್ದೆ” ಎಂದು ಅಜಿಂಕ್ಯ ರಹಾನೆ ಹೇಳಿಕೊಂಡಿದ್ದಾರೆ.

WTC Final 2023: ಡಬ್ಲ್ಯುಟಿಸಿ ಫೈನಲ್ ಬಗ್ಗೆ ಅಸಮಾಧಾನ ಹೊರಹಾಕಿದ ಡೇವಿಡ್ ವಾರ್ನರ್

ದ್ರಾವಿಡ್ ಮತ್ತು ರೋಹಿತ್ ಬಗ್ಗೆ ಅಜಿಂಕ್ಯ ಹೇಳಿದ್ದೇನು?

ಹಾಗೆಯೇ ಟೀಂ ಇಂಡಿಯಾದಲ್ಲಿರುವ ವಾತಾವರಣದ ಬಗ್ಗೆ ಮಾತನಾಡಿರುವ ಅಜಿಂಕ್ಯ ರಹಾನೆ, “ತಂಡದ ವಾತಾವರಣ ತುಂಬಾ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ತಂಡವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ರಾಹುಲ್ ದ್ರಾವಿಡ್ ಕೂಡ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಇಬ್ಬರ ನೇತೃತ್ವದಲ್ಲಿ ತಂಡದ ವಾತಾವರಣ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

ಇನ್ನು  ಭಾರತ ಪರ  82 ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ 4931 ರನ್ ಕಲೆಹಾಕಿದ್ದಾರೆ. ಅಲ್ಲದೆ ರಹಾನೆ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ 2021 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ಅಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wtc-final-2023-ajinkya-rahane-speak-about-come-back-in-indian-cricket-team-psr-594070.html

Leave a Reply

Your email address will not be published. Required fields are marked *