WTC Final 2023: ಡಬ್ಲ್ಯುಟಿಸಿ ಫೈನಲ್​ಗೆ ಟೀಂ ಇಂಡಿಯಾವನ್ನು ಹೆಸರಿಸಿದ ಸುನಿಲ್ ಗವಾಸ್ಕರ್

ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗವನ್ನು ಹೆಸರಿಸಿದ್ದಾರೆ. ಗವಾಸ್ಕರ್ ಹೆಸರಿಸಿರುವ ತಂಡದಲ್ಲಿ ಪ್ರಮುಖವಾಗಿ 2 ಅಚ್ಚರಿಯ ಆಯ್ಕೆಗಳನ್ನು ಕಾಣಬಹುದಾಗಿದೆ.ಮೊದಲನೆಯದ್ದಾಗಿ ಗವಾಸ್ಕರ್ ವಿಕೆಟ್ ಕೀಪರ್ ಆಯ್ಕೆಯಲ್ಲಿ ಕಿಶನ್​ಗಿಂತ ಭರತ್​ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ವಾಸ್ತವವಾಗಿ ಭರತ್​ಗೆ ಹೋಲಿಸಿದರೆ, ಕಿಶನ್ ಕೀಪಿಂಗ್​ ಜೊತೆಗೆ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲೂ ಶಕ್ತಿ ತುಂಬಲ್ಲಿದ್ದಾರೆ. ಆದರೆ ಭರತ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಗವಾಸ್ಕರ್, ಭರತ್ ಈಗಾಗಲೇ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಭರತ್ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.ಹಾಗೆಯೇ ಎರಡನೇ ಅಚ್ಚರಿಯೆಂದರೆ, ವಾಸ್ತವವಾಗಿ ಇಂಗ್ಲೆಂಡ್​ ಪಿಚ್​ ಹೆಚ್ಚಾಗಿ ವೇಗಿಗಳಿಗೆ ನೆರವಾಗಲಿದೆ ಎಂಬದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಗವಾಸ್ಕರ್ ತಮ್ಮ ತಂಡದಲ್ಲಿ ಇಬ್ಬರು ಸ್ಪಿನ್ನರ್​ಗಳಿಗೆ ಅವಕಾಶ ನೀಡಿದ್ದಾರೆ. ಗವಾಸ್ಕರ್ ತಂಡದಲ್ಲಿ ರವೀಂದ್ರ ಜಡೇಜಾ ಹಾಗೂ ಆರ್. ಅಶ್ವಿನ್ ಇಬ್ಬರಿಗೂ ಅವಕಾಶ ಸಿಕ್ಕಿದೆ.ಇನ್ನು ಗವಾಸ್ಕರ್ ಪ್ರಕಟಿಸಿರುವ ಟೀಂ ಇಂಡಿಯಾದ ಟಾಪ್ ಆರ್ಡರ್ ನೋಡುವುದಾದರೆ..​ ಆರಂಭಿಕಾರಾಗಿ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲ್ಲಿದ್ದಾರೆ. 3 ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಹಾಗೂ 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಆಡಲ್ಲಿದ್ದಾರೆ.6ನೇ ಸ್ಥಾನದಲ್ಲಿ ಭರತ್ ಆಡಿದರೆ, 7 ಮತ್ತು 8ನೇ ಸ್ಥಾನದಲ್ಲಿ ಕ್ರಮವಾಗಿ ಜಡೇಜಾ ಹಾಗೂ ಅಶ್ವಿನ ಆಡಲಿದ್ದಾರೆ. ಇನ್ನು ಕೊನೆಯ 3 ಸ್ಥಾನಗಳು ವೇಗಿಗಳಿಗೆ ಮೀಸಲಾಗಿದ್ದು, ಮೂವರು ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಂಡವನ್ನು ಪೂರ್ಣಗೊಳಿಸಲಿದ್ದಾರೆ.WTC ಫೈನಲ್‌ಗೆ ಸುನಿಲ್ ಗವಾಸ್ಕರ್ ತಂಡ: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್

source https://tv9kannada.com/photo-gallery/cricket-photos/wtc-final-2023-sunil-gavaskar-gavaskar-picks-indias-wtc-final-playing-xi-psr-594376.html

Leave a Reply

Your email address will not be published. Required fields are marked *